• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಖಂಡ್ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪಿತೂರಿ: ಹೇಮಂತ್ ಸೊರೆನ್

|
Google Oneindia Kannada News

ನವದೆಹಲಿ, ನ.17: ಅಕ್ರಮ ಗಣಿಗಾರಿಕೆಯ ಮೂಲಕ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಗುರುವಾರ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಇಡಿ ವಿಚಾರಣೆಗೆ ಹೋಗುವ ಮುನ್ನ, "ಇಡಿ ವಿಚಾರಣೆಯು ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯ ಕೇಂದ್ರ ಸರ್ಕಾರದ ದೊಡ್ಡ ಪಿತೂರಿಯ ಭಾಗವಾಗಿದೆ" ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಆರೋಪಿಸಿದ್ದಾರೆ.

ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್‌ಗೆ ಸುಪ್ರೀಂಕೋರ್ಟ್‌ನಿಂದ ಗುಡ್ ನ್ಯೂಸ್!ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್‌ಗೆ ಸುಪ್ರೀಂಕೋರ್ಟ್‌ನಿಂದ ಗುಡ್ ನ್ಯೂಸ್!

ಚುನಾವಣಾ ಆಯೋಗಕ್ಕೆ ಬಿಜೆಪಿ ನೀಡಿದ ದೂರಿನ ಆಧಾರದ ಮೇಲೆ ಗಣಿಗಾರಿಕೆ ಗುತ್ತಿಗೆ ನೀಡಿದ್ದಕ್ಕಾಗಿ ಮುಖ್ಯಮಂತ್ರಿ ಸೊರೆನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಸಾಧ್ಯತೆಯನ್ನು ಅವರು ಪ್ರಸ್ತಾಪಿಸಿದ್ದಾರೆ.

ಹಗರಣದ ಆರೋಪಗಳನ್ನು ಆಧಾರ ರಹಿತ ಎಂದಿರುವ ಹೇಮಂತ್ ಸೊರೆನ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಹೆಚ್ಚಿನ ನಾಯಕರ ಹಿಂದೆ ಬೀಳುತ್ತದೆ" ಎಂದು ಹೇಳಿದ್ದಾರೆ.

"ನಾನು ಮುಖ್ಯಮಂತ್ರಿಯಾಗಿ ಸಾಂವಿಧಾನಿಕ ಹುದ್ದೆಯಲ್ಲಿದ್ದೇನೆ. ಆದರೆ ತನಿಖೆ ನಡೆಯುತ್ತಿರುವ ರೀತಿ, ನನ್ನನ್ನು ಕರೆಸುತ್ತಿರುವ ರೀತಿ ನೋಡಿದರೇ, ಅವರು ನಾನು ದೇಶದಿಂದ ಓಡಿಹೋಗುವ ವ್ಯಕ್ತಿ ಎಂದು ಅವರು ಭಾವಿಸಿದಂತಿದೆ. ಉದ್ಯಮಿಗಳು ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಯಾವ ರಾಜಕಾರಣಿಯೂ ಹಾಗೆ ಪಲಾಯನ ಮಾಡಿಲ್ಲ'' ಎಂದು ಜಾರಿ ನಿರ್ದೇಶನಾಲಯ ಕಚೇರಿಗೆ ತೆರಳುವ ಮುನ್ನ ರಾಂಚಿಯಲ್ಲಿ ಸೊರೆನ್ ಬೇಸರ ವ್ಯಕ್ತಪಡಿಸಿದ್ದಾರೆ.

2019 ರ ಚುನಾವಣೆಯಲ್ಲಿ ಜೆಎಂಎಂ-ಕಾಂಗ್ರೆಸ್ ಮೈತ್ರಿ ಗೆದ್ದಾಗಿನಿಂದ ಅವರನ್ನು ಪದಚ್ಯುತಗೊಳಿಸುವ ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಸಿಎಂ ಹೇಮಂತ್ ಸೊರೆನ್ ಅವರ ರಾಜಕೀಯ ಸಹಾಯಕರಾದ ಪಂಕಜ್ ಮಿಶ್ರಾ ಮತ್ತು ಇತರ ಇಬ್ಬರು ಬಚ್ಚು ಯಾದವ್ ಮತ್ತು ಪ್ರೇಮ್ ಪ್ರಕಾಶ್ ಅವರನ್ನು ತನಿಖಾ ಸಂಸ್ಥೆ ಬಂಧಿಸಿದೆ. 1,000 ಕೋಟಿ ರೂಪಾಯಿಗಳನ್ನು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಅಪರಾಧದ ಆದಾಯ ಎಂದು ಗುರುತಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಆರೋಪವನ್ನು ಸೊರೆನ್ ನಿರಾಕರಿಸಿದ್ದಾರೆ.

ವೈಯಕ್ತಿಕವಾಗಿ ವಿಚಾರಣೆಗೆ ಹೋಗುವ ಮೊದಲು ಸಮನ್ಸ್‌ಗೆ ಪಾಯಿಂಟ್-ಬೈ-ಪಾಯಿಂಟ್ ಲಿಖಿತ ಉತ್ತರದಲ್ಲಿ, ಹೇಮಂತ್ ಸೊರೆನ್ ತಮ್ಮ ಸರ್ಕಾರವು ಗಣಿಗಾರಿಕೆಯಿಂದ ರಾಜ್ಯದ ಆದಾಯವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ. ಹಗರಣದ ಆರೋಪವಿರುವ ಸಾಹಿಬ್‌ಗಂಜ್ ಜಿಲ್ಲೆಯ ಅಂಕಿಅಂಶಗಳನ್ನು ನೀಡಿದ ಅವರು, "1,000 ಕೋಟಿಯನ್ನು ಲಪಟಾಯಿಸಲು, ಅಕ್ರಮ ಗಣಿಗಾರಿಕೆಯು ಕಾನೂನುಬದ್ಧ ಗಣಿಗಾರಿಕೆಗಿಂತ ನಾಲ್ಕು ಪಟ್ಟು ಹೆಚ್ಚಾಗಬೇಕು" ಎಂದು ತಿಳಿಸಿದ್ದಾರೆ.

"ಇದನ್ನು ಸಾಗಿಸಲು, 20,000 ರೈಲ್ವೇ ರೇಕ್‌ಗಳು ಅಥವಾ 33 ಲಕ್ಷ ಟ್ರಕ್‌ಗಳು ಬೇಕಾಗುತ್ತವೆ. ರೈಲ್ವೆಯು ಮಾನ್ಯ ದಾಖಲೆಯಿಲ್ಲದೆ ಅದನ್ನು ಸಾಗಿಸುವುದಿಲ್ಲ. ನೀವು ಯಾವುದೇ ರೈಲ್ವೆ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡಿದ್ದೀರಾ..?" ಅವರು ಪ್ರಶ್ನಿಸಿದ್ದಾರೆ.

'ಕಳೆದ ಎರಡು ವರ್ಷಗಳಲ್ಲಿ ಇಡೀ ರಾಜ್ಯವು 750 ಕೋಟಿ ರೂಪಾಯಿ ಆದಾಯ ಗಳಿಸಿದೆ. ಆರೋಪ ಮಾಡುವ ಮೊದಲು ಈ ಸಂಗತಿಗಳು ಮತ್ತು ಡೇಟಾವನ್ನು ತನಿಖಾ ಸಂಸ್ಥೆ ಗಮನಿಸಬೇಕು" ಎಂದು ಹೇಳಿದ್ದಾರೆ.

English summary
Jharkhand Chief Minister Hemant Soren went for enforcement directorate inquiry, he blames central government. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X