ಮೇವು ತಿಂದ ಲಾಲೂ ಪ್ರಸಾದ್ ಗೆ ಶಿಕ್ಷೆ ಏನು? ಬುಧವಾರ ಪ್ರಕಟ

ರಾಂಚಿ, ಜನವರಿ 03: 900 ಕೋಟಿ ರೂ.ಗಳ ಮೇವು ಹಗರಣದಲ್ಲಿ ದೋಷಿಯಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಗೆ ಶಿಕ್ಷೆ ಪ್ರಮಾಣ ಇಂದು (ಬುಧವಾರ) ಪ್ರಕಟವಾಗಲಿದೆ.

ಲಾಲೂ ಪ್ರಸಾದ ಸೇರಿದಂತೆ 15 ಆರೋಪಿಗಳ ಶಿಕ್ಷೆ ಪ್ರಮಾಣವನ್ನು ಇಂದು ಜಾರ್ಖಂಡ್ ನ ರಾಂಚಿ ವಿಶೇಷ ಸಿಬಿಐ ನ್ಯಾಯಾಲಯ ಪ್ರಕಟಿಸಲಿದೆ. ಈ ಹಿಂದೆ ಡಿಸೆಂಬರ್ 23ರಂದು ಲಾಲೂ ಪ್ರಸಾದ್ ಯಾದವ್ ದೋಷಿ ಎಂದು ರಾಂಚಿ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರು ಅಂತಿಮ ತೀರ್ಪು ನೀಡಿ ಶಿಕ್ಷೆ ಪ್ರಮಾಣವನ್ನು ಜನವರಿ 3ಕ್ಕೆ ಪ್ರಕಟಿಸಲಾಗುವುದು ಎಂದು ಆದೇಶ ಹೊರಡಿಸಿದ್ದರು.

Lalu Yadav To Be Sentenced Today In Fodder Scam Case

ಇದೇ ಮೇವು ಹಗರಣದ ಪ್ರಕರಣದಲ್ಲಿ ಲಾಲೂ ಸೇರಿ 22 ಆರೋಪಿಗಳ ಪೈಕಿ 7 ಜನರಿಗೆ ಸಿಬಿಐ ಕೋರ್ಟ್ ಖುಲಾಸೆಗೊಳಿಸಿದ್ದು, ಒಟ್ಟು 6 ಪ್ರಕರಣಗಳಲ್ಲಿ ಎರಡು ಪ್ರಕರಣಕ್ಕೆ ತೀರ್ಪು ಪ್ರಕಟಿಸಿದೆ. ಇನ್ನುಳಿದ 4 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ಲಾಲೂ ಪ್ರಸಾದ್ ಯಾದವ್ ಅವರಿಗೆ ಎಷ್ಟು ಪ್ರಮಾಣ ಶಿಕ್ಷೆ ಎನ್ನುವುದು ಇಂದು ತಿಳಿಯಲಿದ್ದು, ಹಲವ ಚಿತ್ತ ರಾಂಚಿ ವಿಶೇಷ ಸಿಬಿಐ ನ್ಯಾಯಾಲಯದನತ್ತೆ ನೆಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+