ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಜಿಯೋ: ಬಡವ್ರು ಹಿಟ್ಟು ತಿಂತಾರಾ, ಡೇಟಾ ತಿಂತಾರಾ, ಲಾಲೂ

|
Google Oneindia Kannada News

ನವದೆಹಲಿ, ಸೆ 4: ರಿಲಯನ್ಸ್ ಜಿಯೋ ಜಾಹೀರಾತಿನಲ್ಲಿ ಪ್ರಧಾನಿ ಮೋದಿ ಕಾಣಿಸಿಕೊಂಡ ನಂತರ ಅವರನ್ನು ಲೇವಡಿ ಮಾಡುವ ಸರದಿ ಈಗ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರದ್ದು.

ಜಿಯೋ ಜಾಹೀರಾತಿಗೆ ತನ್ನದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಲಾಲೂ, ಬಡವರು ಹೊಟ್ಟೆಗೆ ಅಟ್ಟಾ (ಗೋಧಿಹಿಟ್ಟು) ತಿಂತಾರಾ ಅಥವಾ ಡೇಟಾ ತಿಂತಾರ ಎಂದು ತಮಾಷೆ ಮಾಡಿದ್ದಾರೆ. (ಮೋದಿಯನ್ನು 'ಮಿಸ್ಟರ್ ರಿಲಯನ್ಸ್' ಎಂದ ದೆಹಲಿ ಸಿಎಂ)

ಅಟ್ಟಾಗಿಂತ ಡೇಟಾ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ, ದೇಶದಲ್ಲಿ ಬದಲಾವಣೆ ತರುತ್ತೇವೆ ಎನ್ನುವುದು ಅವರರ್ಥದಲ್ಲಿ ಬಹುಷ: ಇದೇ ಇರಬೇಕು ಎಂದು ಲಾಲೂ ಪ್ರಸಾದ್ ವ್ಯಂಗ್ಯವಾಡಿದ್ದಾರೆ.

ಕಾಲ್ ಡ್ರಾಪ್ ಸಮಸ್ಯೆಗೆ ಪರಿಹಾರವೇನು ಎನ್ನುವುದಕ್ಕೆ ಉತ್ತರಿಸದೇ ರಿಲಯನ್ಸ್ ಜಾಹೀರಾತಿನಲ್ಲಿ ದೇಶದ ಪ್ರಧಾನಿಯೊಬ್ಬರು ಕಾಣಿಸಿಕೊಂಡಿದ್ದು ನಾಚಿಕೆಗೇಡು ಎಂದು ಲಾಲೂ, ಮೋದಿ ವಿರುದ್ದ ಕಿಡಿಕಾರಿದ್ದಾರೆ.

ಒಂದೆರಡು ದಿನಗಳ ಹಿಂದೆ ಮೋದಿಯನ್ನು 'ಮಿಸ್ಟರ್ ರಿಲಯನ್ಸ್' ಎಂದು ಕೇಜ್ರಿವಾಲ್ ಸಂಭೋದಿಸಿ, ರಿಲಯನ್ಸ್ ಸಂಸ್ಥೆಗೆ ಮಾಡೆಲಿಂಗ್ ಮಾಡಿ ಎಂದು ಕೇಜ್ರಿವಾಲ್ ತಮಾಷೆಯಾಡಿದ್ದರು.

ಬಡವರು ಏನು ತಿಂತಾರೆ?

ಅಟ್ಟಾಗಿಂತ ಡೇಟಾ ಕಮ್ಮಿ ಬೆಲೆಗೆ ಸಿಗುತ್ತಿದೆ. ಇದು ದೇಶದಲ್ಲಿ ಬದಲಾವಣೆ ತರುವ ಇವರ ಶೈಲಿ - ಲಾಲೂ

ಲಾಲೂ ಟ್ವೀಟಿಗೆ ಹೀಗೊಂದು ಪ್ರತಿಕ್ರಿಯೆ

ಹಿಟ್ಟು, ದೇಟಾ ತಿಂದರೆ ಬಡತನ ಹೋಗುವುದಿಲ್ಲ. ಆದರೆ ಬಡವನೊಬ್ಬ ಮೇವು ತಿಂದರೆ ಬಹುಬೇಗ ಶ್ರೀಮಂತನಾಗಬಲ್ಲ.

ವಿಷಯ ಗೊತ್ತಿಲ್ಲದಿದ್ದರೂ ಮಾತಾಡಬೇಕಾ?

ಲಾಲೂ ಟ್ವೀಟಿಗೆ ಪ್ರತಿಕ್ರಿಯಿಸುತ್ತಾ, ವಿಷಯದ ಬಗ್ಗೆ ಸರಿಯಾದ ಗೊತ್ತಿಲ್ಲದಿದ್ದರೂ ಹೇಳಿಕೆ ನೀಡುವ ಅವಶ್ಯಕತೆ ಇದೆಯಾ?

ಗೋಧಿಹಿಟ್ಟು ಕಳ್ಳತನ

ಗೋಧಿಹಿಟ್ಟು ಕಳ್ಳತನವನ್ನು ಮೊದಲು ನಿಲ್ಲಿಸಿ, ಬೆಲೆ ತನ್ನಿಂದಾಗಿಯೇ ಕಮ್ಮಿಯಾಗಲಿದೆ.

ಕಾಲ್ ಡ್ರಾಪ್ ಬಗ್ಗೆ

ಕಾಲ್ ಡ್ರಾಪ್ ಬಗ್ಗೆ

ಕಾಲ್ ಡ್ರಾಪ್ ಸಮಸ್ಯೆಯ ಬಗ್ಗೆ ಕೇಂದ್ರ ಸರಕಾರದಿಂದ ಸ್ಪಷ್ಟನೆಯಿಲ್ಲ. ಹಿಟ್ಟಿಗಿಂತ ಡೇಟಾ ಬೆಲೆ ಕಮ್ಮಿಯಾಗುತ್ತಿದೆ. ದೇಶಕ್ಕೆ ಅಚ್ಚೇದಿನ್ ಅಂದರೆ ಇವರರ್ಥದಲ್ಲಿ ಇದೇ ಇರಬೇಕು ಎಂದು ಲಾಲೂ, ಮೋದಿ ವಿರುದ್ದ ಕಿಡಿಕಾರಿದ್ದಾರೆ.

English summary
Will the poor eat data or atta? Data is cheaper, atta is costlier. This is their definition of changing the country, RJD Leader Lalu Prasad Yadav reaction on PM Modi featuring Reliance Jio Ad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X