ಮಾಲ್ಡೀವ್ಸ್ ಯಾಕೆ, ಲಕ್ಷದ್ವೀಪ ಓಕೆ: ಎಷ್ಟು ಸಾವಿರ ಖರ್ಚು ಆಗುತ್ತೆ?

ಭಾರತದ ಜೊತೆ ಮಾಲ್ಡೀವ್ಸ್ ಕಿರಿಕ್ ಮಾಡಿಕೊಂಡ ನಂತರ ಭಾರತೀಯರ ಎದೆಯಲ್ಲಿ ಈಗ ಜ್ವಾಲೆ ಹೊತ್ತಿಕೊಂಡಿದೆ. ಅದರಲ್ಲೂ ಮಾಲ್ಡೀವ್ಸ್ ರಾಜಕೀಯ ನಾಯಕರು ಭಾರತದ ಬಗ್ಗೆ ನೀಡುತ್ತಿರುವ ಹೇಳಿಕೆಗಳು ಕೂಡ ಬೆಂಕಿ ಹೊತ್ತಿಸಿವೆ. ಹೀಗಿದ್ದಾಗಲೇ ಮಾಲ್ಡೀವ್ಸ್ ಬದಲಾಗಿ ಲಕ್ಷದ್ವೀಪಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕನ್ನಡ ನಾಡಿಗೂ & ಲಕ್ಷದ್ವೀಪಕ್ಕೂ ತುಂಬಾ ಹತ್ತಿರ ಇದ್ದು, ಕಡಿಮೆ ಖರ್ಚಿನಲ್ಲಿ ನೀವು ಮಾಲ್ಡೀವ್ಸ್ ಬದಲು ನಮ್ಮದೇ ಲಕ್ಷದ್ವೀಪಕ್ಕೆ ಹೋಗಿ ಬರಹುದು ಅಂತಿದ್ದಾರೆ ನೆಟ್ಟಿಗರು!

ಅಂದಹಾಗೆ ಬೆಂಗಳೂರಿನಿಂದ ಲಕ್ಷದ್ವೀಪ ಕೇವಲ 607 ಕಿಲೋ ಮೀಟರ್ ದೂರದಲ್ಲಿ ಇದೆ. ಇನ್ನು ನಮ್ಮ ರಾಜ್ಯದ ಕರಾವಳಿ ಅಂದ್ರೆ ಮಂಗಳೂರಿಂದ, ಕೇವಲ 387 ಕಿಲೋ ಮೀಟರ್ ದೂರದಲ್ಲಿ ಇದೆ ಲಕ್ಷದ್ವೀಪ. ಅದರಲ್ಲೂ ಬೋಟ್ ಮೂಲಕ ಪ್ರಯಾಣ ಮಾಡಿದರೆ ಇದು ಇನ್ನೂ ಹತ್ತಿರವಾಗಲಿದೆ. ಹೀಗಾಗಿ ನೀವು ಕೆಲವೇ ಸಾವಿರ ರೂಪಾಯಿ ಖರ್ಚಿನಲ್ಲಿ ಭರ್ಜರಿ ಲಕ್ಷದ್ವೀಪದ ಟ್ರಿಪ್ ಮಾಡಿ, ಬೀಚ್‌ನಲ್ಲಿ ಆಟ ಆಡಿ ಬರಬಹುದು. ಹಾಗಾದ್ರೆ ಲಕ್ಷದ್ವೀಪಕ್ಕೆ ಹೋಗಿ ಬರಲು ಎಷ್ಟು ಸಾವಿರ ರೂಪಾಯಿ ಬೇಕಾಗುತ್ತೆ? ಮುಂದೆ ಓದಿ.

Lakshadweep Tour Package Price From Karnataka State

ಲಕ್ಷದ್ವೀಪ ಟೂರ್ ಪ್ಯಾಕೇಜ್!

ಸಾಮಾನ್ಯವಾಗಿ ಲಕ್ಷದ್ವೀಪಕ್ಕೆ ಹೋಗಿ ಬರುವವರು ಟ್ರಾವೆಲ್ಸ್ ಮೊರೆ ಹೋಗುತ್ತಾರೆ, ಯಾಕೆ ಅಂದ್ರೆ ಡಿಸ್ಕೌಂಟ್ ಸಿಗಲಿದೆ ಅಂತಾ. ಸಾಮಾನ್ಯವಾಗಿ ಲಕ್ಷದ್ವೀಪದ ಪ್ಯಾಕೇಜ್ 25 ಸಾವಿರಕ್ಕೆ ಶುರುವಾಗುತ್ತದೆ. 3 ರಾತ್ರಿ ಲಕ್ಷದ್ವೀಪದಲ್ಲಿ ಕಳೆಯೋದಕ್ಕೆ 25 ಸಾವಿರ ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಇದರಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ ಹಾಗೂ ಸಂಜೆ ಸ್ನ್ಯಾಕ್ಸ್, ಮತ್ತು ರಾತ್ರಿ ಊಟ ಕೂಡ ಸೇರುತ್ತೆ ಹಾಗೂ ರೂಂ ಕೂಡ ದೊರೆಯುತ್ತದೆ. ಓಡಾಟದ ಖರ್ಚು ಕೂಡ ಇದರಲ್ಲೇ ಸೇರುತ್ತೆ, ಅದೇ 4 ರಾತ್ರಿಗಳನ್ನು ಅಲ್ಲಿ ಕಳೆಯಲು 45 ಸಾವಿರ ರೂಪಾಯಿ ಹಣವನ್ನ ಖರ್ಚು ಮಾಡಬೇಕಿದೆ.

ಲಕ್ಷದ್ವೀಪಕ್ಕೆ ಹೋಗಲು ದಾಖಲೆ ಅಗತ್ಯ

ಮತ್ತೊಂದು ಕಡೆ ನೀವು ಲಕ್ಷದ್ವೀಪಕ್ಕೆ ಹೋಗಿ ಬರಲು ದಾಖಲೆಗಳು ಕೂಡ ಅಗತ್ಯವಾಗಿವೆ. ಯಾಕಂದ್ರೆ ಇಲ್ಲಿಗೆ ತೆರಳಲು ಮೊದಲು ಅನುಮತಿ ಪಡೆಯಬೇಕಿದೆ, ಹಾಗೇ ಅದಕ್ಕೆ ಅಗತ್ಯ ದಾಖಲೆಗಳನ್ನು ನೀಡಬೇಕು. ಇದೆಲ್ಲವನ್ನೂ ಪೂರೈಸಿದ ನಂತರ ನಿಮಗೆ ಲಕ್ಷದ್ವೀಪ ಪ್ರವಾಸ ಸಾಧ್ಯವಾಗುತ್ತದೆ. ಹೀಗಾಗಿ, ಟ್ರಾವೆಲ್ಸ್ ಮೂಲಕವೇ ಹೋಗುವುದಾದ್ರೆ ಅದನ್ನೆಲ್ಲಾ ಅವರೇ ನೋಡಿಕೊಳ್ಳುತ್ತಾರೆ. ಇಲ್ಲವಾದರೆ ನೀವೇ ಪ್ರತ್ಯೇಕವಾಗಿ ಹೋಗುವುದಾದರೆ ಅದಕ್ಕೆ ಪ್ರತ್ಯೇಕ ಓಡಾಟ ಇರುತ್ತದೆ.

ಮಂಗಳೂರಿನಿಂದ ಬೋಟ್ ವ್ಯವಸ್ಥೆ!

ಒಟ್ನಲ್ಲಿ ಮಾಲ್ಡೀವ್ಸ್ ಮರೆತು ಈಗ ಭಾರತೀಯರು ಲಕ್ಷದ್ವೀಪದ ಕಡೆಗೆ, ಪ್ರವಾಸ ಹೊರಟು ನಿಂತಿದ್ದಾರೆ. ಕೇಂದ್ರ ಸರ್ಕಾರ ಕೂಡ ಇದಕ್ಕೆ ಬೇಕಾದ ಸೌಲಭ್ಯ ಒದಗಿಸುತ್ತಿದೆ. ಕರ್ನಾಟಕ ಮೂಲಕ ಹೋಗುವ ಜನರಿಗೆ ಅಂತಾ ಮಂಗಳೂರಿನಿಂದ ಬೋಟ್ ವ್ಯವಸ್ಥೆ ಕೂಡ ಮಾಡಿ ಕೊಟ್ಟಿದೆ ಸರ್ಕಾರ. ಇದು ಕೂಡ ಲಕ್ಷದ್ವೀಪಕ್ಕೆ ಹೋಗಲು ಸುಲಭ ಸಂಪರ್ಕ ಸಾಧನವಾಗಿದೆ. ಇದಲ್ಲದೆ ಮಾಲ್ಡೀವ್ಸ್‌ಗೆ ಹೋಗಿ ಬರುವುದಕ್ಕಿಂತ ಕಡಿಮೆ ಖರ್ಚಿನಲ್ಲಿ ಟೂರ್ ಮುಗಿಯುತ್ತದೆ, ಅನ್ನೋದು ನೆಟ್ಟಿಗರ ವಾದವಾಗಿದೆ. ಹೀಗಾಗಿ ಈಗ ಲಕ್ಷದ್ವೀಪಕ್ಕೆ ಟೂರ್ ಹೋಗುವುದೇ ಟ್ರೆಂಡ್ ಆಗುತ್ತಿದೆ.

ಪ್ರವಾಸೋದ್ಯಮ ಮಕಾಡೆ ಮಲಗಿದೆ!

ಮಾಲ್ಡೀವ್ಸ್ ಒಂದು ಪುಟಾಣಿ ದ್ವೀಪ ರಾಷ್ಟ್ರ, ಅಲ್ಲಿ ಸುತ್ತಲೂ ಸಮುದ್ರ ಇರುವುದು ಬಿಟ್ಟು ಬೇರೆ ಏನೂ ಕಾಣಿಸುವುದಿಲ್ಲ. ಕೃಷಿ ಕೂಡ ಮಾಡಲು ಅಲ್ಲಿ ಯೋಗ್ಯ ಪರಿಸರ ಇಲ್ಲವಾಗಿದೆ. ಈ ಕಾರಣಕ್ಕೆ ಅನ್ನ & ಆಹಾರ ಪದಾರ್ಥಕ್ಕೆ ಕೂಡ, ಮಾಲ್ಡೀವ್ಸ್ ದೇಶ ಭಾರತದ ಬಳಿಯೇ ಬೇಡಬೇಕಿದೆ. ಹೀಗೆ ಭಾರತ ಇಲ್ಲದೆ ಮಾಲ್ಡೀವ್ಸ್ ದೇಶಕ್ಕೆ ಅಸ್ತಿತ್ವ ಇಲ್ಲ ಎನ್ನಬಹುದು. ಈ ನಡುವೆ ಪ್ರವಾಸೋದ್ಯಮ ನಂಬಿ ಬದುಕುತ್ತಿರುವ ದೇಶಕ್ಕೆ ಭಾರತೀಯರು ಕೂಡ ಆಘಾತದ ಏಟು ಕೊಟ್ಟು, ಭಾರತದ ಬಗ್ಗೆ ಮಾತನಾಡಿದ್ದ ಮಾಲ್ಡೀವ್ಸ್ ನಾಯಕರಿಗೆ ಸರಿಯಾಗಿ ಬುದ್ಧಿ ಕಲಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಮಾಲ್ಡೀವ್ಸ್ ಪ್ರವಾಸೋದ್ಯಮ ಮಕಾಡೆ ಮಲಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+