ಚಿತ್ರ ಸಂಪುಟ: ರಕ್ಷಣಾ ಖಾತೆ ವಹಿಸಿಕೊಂಡ ಅರುಣ್ ಜೇಟ್ಲಿ

Posted By:
Subscribe to Oneindia Kannada

ಪ್ರತಿದಿನದ ಸುದ್ದಿ ಸಂತೆಯಲ್ಲಿ ಕೆಲವಾರು ಸುದ್ದಿಗಳು ಪ್ರಮುಖವಾಗಿದ್ದರೂ, ಬೇರೆ ಕೆಲವಾರು ಸುದ್ದಿಗಳ ಅಬ್ಬರದಲ್ಲಿ ಕಂಡೂ ಕಾಣದಂತಾಗುತ್ತವೆ.

ಅಂಥ ಸುದ್ದಿಗಳನ್ನು ಒಟ್ಟು ಮಾಡಿ ತಂದು ನಿಮ್ಮ ಮುಂದಿಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಉದಾಹರಣೆಗೆ, ಕೇಂದ್ರದ ಹಣಕಾಸು ಸಚಿವರ ಅರುಣ್ ಜೇಟ್ಲಿಯವರು ತಮಗೆ ಹೆಚ್ಚುವರಿಯಾಗಿ ನೀಡಲಾಗಿರುವ ರಕ್ಷಣಾ ಸಚಿವರ ಹೊಣೆಯನ್ನು ಇಂದು ಅಧಿಕೃತವಾಗಿ ವಹಿಸಿಕೊಂಡಿದ್ದಾರೆ.

ರಾಂಚಿಯಲ್ಲಿ ಮಾರ್ಚ್ 16ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕಾಗಿ ರಾಂಚಿಯ ಕ್ರಿಕೆಟ್ ಮೈದಾನದಲ್ಲಿ ಈಗಾಗಲೇ ಟೀಂ ಇಂಡಿಯಾ ತನ್ನ ಅಭ್ಯಾಸವನ್ನು ಆರಂಭಿಸಿದೆ.

ಇಂಥ ಕೆಲವಾರು ಸುದ್ದಿಗಳನ್ನು ಆರಿಸಿ ಪೋಟೋ ಸಹಿತ ಇಲ್ಲಿ ಕೊಡಲಾಗಿದೆ.

ಕೋಚ್ @ ಪ್ರೆಸ್ ಮೀಟ್

ಕೋಚ್ @ ಪ್ರೆಸ್ ಮೀಟ್

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕಾಗಿ ಸಿದ್ಧಗೊಳ್ಳುತ್ತಿರುವ ಟೀಂ ಇಂಡಿಯಾ ತಂಡದ ಕೋಚ್ ಅನಿಲ್ ಕುಂಬ್ಳೆ, ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆವರಿಳಿಸಿದ ಕಾಂಗರೂ ಪಡೆ

ಬೆವರಿಳಿಸಿದ ಕಾಂಗರೂ ಪಡೆ

ರಾಂಚಿಯ ಕ್ರಿಕೆಟ್ ಮೈದಾನದಲ್ಲಿ ಈಗಾಗಲೇ ಭಾರತ ತಂಡ ಅಭ್ಯಾಸ ಶುರುವಿಟ್ಟುಕೊಂಡಿದೆ. ಜತೆಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡವೂ ಅಭ್ಯಾಸ ಆರಂಭಿಸಿದೆ. ಆಸೀಸ್ ಆಟಗಾರರ ಅಭ್ಯಾಸದ ಚಿತ್ರವಿದು.

ಜೇಟ್ಲಿ ನೂತನ ಜವಾಬ್ದಾರಿ

ಜೇಟ್ಲಿ ನೂತನ ಜವಾಬ್ದಾರಿ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ತಮಗೆ ನೂತನವಾಗಿ ನೀಡಲಾಗಿರುವ ರಕ್ಷಣಾ ಇಲಾಖೆಯ ಜವಾಬ್ದಾರಿಯನ್ನು ಅಧಿಕೃತವಾಗಿ ವಹಿಸಿಕೊಂಡರು.

ಅಧಿಕಾರಿಗಳೊಂದಿಗೆ ಮಾತುಕತೆ

ಅಧಿಕಾರಿಗಳೊಂದಿಗೆ ಮಾತುಕತೆ

ರಕ್ಷಣಾ ಸಚಿವರಾಗಿ ಹೆಚ್ಚುವರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆಯಲ್ಲಿ ನಿರತರಾಗಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ.

ಸಾರ್ವಜನಿಕರಿಂದ ಪ್ರತಿಭಟನೆ

ಸಾರ್ವಜನಿಕರಿಂದ ಪ್ರತಿಭಟನೆ

ಸೋಮವಾರ ಪಾಕಿಸ್ತಾನದ ಸೈನಿಕರಿಂದ ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಈ ಪ್ರಾಂತ್ಯದಲ್ಲಿನ ಬಸ್ ಸಂಚಾರವನ್ನು ನಿಲ್ಲಿಸಲಾಗಿತ್ತು. ಹಾಗಾಗಿ, ಬಸ್ ಸಂಚಾರ ಪುನರಾರಂಭಿಸುವಂತೆ ಅಲ್ಲಿನ ನಾಗರಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
News such as Team India practice in Ranchi for 3rd test cricket match against Australia which will commence on March 16th, 2017, Arun Jaitley takes charge as defence minister... and so on have been summed up here.
Please Wait while comments are loading...