ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಜೆಯಲ್ಲಿ ಕುಲಭೂಷಣ್ ಜಾಧವ್ ಪ್ರಕರಣದ ತೀರ್ಪು ಜುಲೈ 17ಕ್ಕೆ

By ಅನಿಲ್ ಆಚಾರ್
|
Google Oneindia Kannada News

ಪಾಕಿಸ್ತಾನದ ಸೇನಾ ಕೋರ್ಟ್ ನಿಂದ ಮರಣ ದಂಡನೆ ವಿಧಿಸಿದ್ದ ಕುಲಭೂಷಣ್ ಜಾಧವ್ ಪ್ರಕರಣದ ತೀರ್ಪನ್ನು ಜುಲೈ 17ನೇ ತಾರೀಕು ಅಂತರರಾಷ್ಟ್ರೀಯ ಕೋರ್ಟ್ ನೀಡಲಿದೆ. ಭಾರತೀಯ ನೌಕಾ ಸೇನೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಮೇಲೆ ಬೇಹುಗಾರಿಕೆ, ಭಯೋತ್ಪಾದನೆ ಆರೋಪದಲ್ಲಿ ಪಾಕಿಸ್ತಾನ ಮಿಲಿಟರಿ ಕೋರ್ಟ್ ಮರಣ ದಂಡನೆ ವಿಧಿಸಿತ್ತು.

ಈ ತೀರ್ಪಿನ ವಿರುದ್ಧ ಭಾರತ ಅಂತರರಾಷ್ಟ್ರೀಯ ಕೋರ್ಟ್ ಮೊರೆ ಹೋಗಿತ್ತು. ಪಾಕಿಸ್ತಾನಿ ಮಿಲಿಟರಿ ಕೋರ್ಟ್ ನಡೆಸಿದ ವಿಚಾರಣೆ ರೀತಿಯನ್ನು ಪ್ರಶ್ನೆ ಮಾಡಿತ್ತು. ಈ ಪ್ರಕರಣದ ತೀರ್ಪು ಬರುವ ತನಕ ಕುಲಭೂಷಣ್ ಜಾಧವ್ ಮರಣ ದಂಡನೆ ಶಿಕ್ಷೆಯನ್ನು ಜಾರಿಗೆ ತರಬಾರದು ಎಂದು ಅಂತರರಾಷ್ಟ್ರೀಯ ಕೋರ್ಟ್ ಸೂಚನೆ ನೀಡಿತ್ತು.

ಪಾಕ್ ಜೈಲುಗಳಲ್ಲಿ ಎಷ್ಟು ಮಂದಿ ಭಾರತೀಯರು ಕೊಳೆಯುತ್ತಿದ್ದಾರೆ ಗೊತ್ತೇ?ಪಾಕ್ ಜೈಲುಗಳಲ್ಲಿ ಎಷ್ಟು ಮಂದಿ ಭಾರತೀಯರು ಕೊಳೆಯುತ್ತಿದ್ದಾರೆ ಗೊತ್ತೇ?

ಈ ವರ್ಷದ ಫೆಬ್ರವರಿಯಲ್ಲಿ ಪಾಕಿಸ್ತಾನ ಹಾಗೂ ಭಾರತದ ವಾದವನ್ನು ಅಂತರರಾಷ್ಟ್ರೀಯ ಕೋರ್ಟ್ ಆಲಿಸಿತ್ತು. ಎರಡೂ ದೇಶಗಳು ವಿಸ್ತೃತವಾದ ಅರ್ಜಿ ಹಾಗೂ ಪ್ರತಿಸ್ಪಂದನೆಗಳನ್ನು ಸಲ್ಲಿಸಿದ್ದವು. ಪಾಕಿಸ್ತಾನವು ಈ ಪ್ರಕರಣದಲ್ಲಿ ವಿಯೆನ್ನಾ ಒಪ್ಪಂದವನ್ನು ಮುರಿದಿದೆ ಎಂಬುದು ಭಾರತದ ವಾದವಾಗಿತ್ತು.

Kulbhushan Jadhav case verdict in ICJ on July 17th

ಇನ್ನು ಪಾಕಿಸ್ತಾನವು, ಕುಲಭೂಷಣ್ ಜಾಧವ್ ಉದ್ಯಮಿಯಲ್ಲ, ಗೂಢಚಾರಿ ಎಂದು ವಾದಿಸಿತ್ತು. ಆದರೆ ಭಾರತ, ಜಾಧವ್ ಒಬ್ಬರು ಉದ್ಯಮಿ. ಅವರನ್ನು ಇರಾನ್ ನಿಂದ ಅಪಹರಿಸಲಾಗಿದೆ ಎಂದಿತ್ತು. ಕುಲಭೂಷಣ್ ಜಾಧವ್ ಗೆ ಭಾರತದ ರಾಯಭಾರ ಕಚೇರಿ ನೆರವು ನೀಡಲು ಅವಕಾಶ ನೀಡಬೇಕು ಎಂದು ಅಂತರರಾಷ್ಟ್ರೀಯ ಕೋರ್ಟ್ ನಲ್ಲಿ ಮಾಡಿದ್ದ ಮನವಿಯನ್ನು ಪಾಕ್ ತಿರಸ್ಕರಿಸಿತ್ತು. ಭಾರತವು ತನ್ನ ಗೂಢಚಾರಿ ಸಂಗ್ರಹಿಸಿದ ಮಾಹಿತಿ ತಿಳಿದುಕೊಳ್ಳಲು ಬಯಸುತ್ತಿದೆ ಎಂದಿತ್ತು ಪಾಕ್.

English summary
Kulbhushan Jadhav, India Navy retired officer, sentenced to death by Pakistan military court, appealed against judgment by India will be decide by ICJ on July 17th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X