ಕೃಷ್ಣಾಷ್ಟಮಿಯಂದು ಉಡುಪಿಯಲ್ಲಿ ಅನುರಣಿಸಿತು ಕೃಷ್ಣಂ ವಂದೇ ಜಗದ್ಗುರುಂ

Posted By:
Subscribe to Oneindia Kannada

ಉಡುಪಿಯಲ್ಲಿ ಗುರುವಾರ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದೆ. ಅಲ್ಲಿನ ಜನ್ಮಾಷ್ಟಮಿ ಆಚರಣೆಯು ಸೌರಮಾನದ ಪ್ರಕಾರ ಆಗುತ್ತದೆ. ಸಿಂಹ ಮಾಸದಲ್ಲಿ ರೋಹಿಣಿ ನಕ್ಷತ್ರ ಬಂದ ದಿನ ಆಚರಣೆ ಮಾಡಲಾಗುತ್ತದೆ. ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ಪ್ರಸಾದವನ್ನು ಹಂಚಿದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಅದ್ದೂರಿ ವಿಟ್ಲಪಿಂಡಿ ಉತ್ಸವಕ್ಕೆ ಸಾಕ್ಷಿಯಾದ ಉಡುಪಿ

ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಹಾಗೂ ರಾಜ್ಯಪಾಲ ರಾಮ್ ನಾಯಕ್ ಇಬ್ಬರೂ ಸೇರಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಬುದ್ಧನ ವಿಗ್ರಹವನ್ನು ಕೊಡುಗೆಯಾಗಿ ನೀಡಿದ್ದಾರೆ. ಬಾಂಗ್ಲಾದೇಶ್ ಗೆ ತೆರಳುತ್ತಿರುವ ರೋಹಿಂಗ್ಯಾ ಮುಸ್ಲಿಮರ ಮನ ಕರುಗುವಂಥ ಸ್ಥಿತಿಯನ್ನು ಬಿಂಬಿಸುವ ಫೋಟೋ ಇದು.

ಇರ್ಮಾ ಚಂಡಮಾರುತದ ಹೊಡೆತಕ್ಕೆ ಸಿಕ್ಕು ಕಂಗಾಲಾದ ಸಂತ್ರಸ್ತರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಪಾಧ್ಯಕ್ಷ ಮೈಕ್ ಪೆನ್ಸ್ ಭೇಟಿಯಾಗಿದ್ದಾರೆ. ನೇಪಲ್ಸ್ ನಲ್ಲಿ ಸಂತ್ರಸ್ತರನ್ನು ಮಾತನಾಡಿಸಿ, ಅವರ ಅಹವಾಲುಗಳನ್ನು ಕೇಳಿಸಿಕೊಂಡಿದ್ದಾರೆ. ಇನ್ನಷ್ಟು ಸುದ್ದಿ- ಚಿತ್ರಗಳು ಇಲ್ಲಿವೆ. ಪಿಟಿಐ ಸುದ್ದಿ ಸಂಸ್ಥೆಯ ಈ ಫೋಟೋಗಳು ಒಂದಕ್ಕಿಂತ ಒಂದು ಪರಿಣಾಮಕಾರಿಯಾಗಿವೆ.

ಕೃಷ್ಣಂ ವಂದೇ ಜಗದ್ಗುರುಂ

ಕೃಷ್ಣಂ ವಂದೇ ಜಗದ್ಗುರುಂ

ಕೃಷ್ಣ ಜನ್ಮಾಷ್ಟಮಿಯ ಪ್ರಯಕ್ತ ಗುರುವಾರ ಉಡುಪಿಯ ಕೃಷ್ಣ ದೇವಸ್ಥಾನದ ಅಂಗಳದಲ್ಲಿ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ಪ್ರಸಾದ ವಿತರಿಸಿದರು.

ನಟಿ ಬಯಲು ಮಾಡಿದ ಸತ್ಯ

ನಟಿ ಬಯಲು ಮಾಡಿದ ಸತ್ಯ

ಇದು ಯಾವ ದಿನದ ಫೋಟೋ ಎಂಬುದು ಬಯಲಾಗಿಲ್ಲ. ಆದರೆ ಸೆಲೆನಾ ಗೊಮೆಜ್ ರ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಗುರುವಾರ ಪೋಸ್ಟ್ ಮಾಡಲಾಗಿದೆ. ಬಲಭಾಗದಲ್ಲಿ ಇರುವವರು ಗೋಮೆಜ್. ಅವರು ಆಸ್ಪತ್ರೆಯಲ್ಲಿ ನಟಿ ಫ್ರಾನ್ಸಿಯಾ ರೈಸಾರ ಕೈ ಹಿಡಿದಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಗೋಮೆಜ್ ಅವರು ರೈಸಾರ ಕಿಡ್ನಿ ಪಡೆದು ಕಸಿ ಮಾಡಿಸಿಕೊಂಡಿದ್ದಾರೆ. ಆ ಸಂಗತಿಯನ್ನು ನಟಿ-ಗಾಯಕಿ ಗೋಮೆಜ್ ಬಯಲು ಮಾಡಿದ್ದಾರೆ.

ರೋಹಿಂಗ್ಯಾ ಮುಸ್ಲಿಮರ ವಲಸೆ ಪರ್ವ

ರೋಹಿಂಗ್ಯಾ ಮುಸ್ಲಿಮರ ವಲಸೆ ಪರ್ವ

ಮ್ಯಾನ್ಮಾರ್ ನಿಂದ ಬಾಂಗ್ಲಾದೇಶ್ ಗೆ ವಯಸ್ಸಾದ ಮಹಿಳೆಯೊಬ್ಬರನ್ನು ಬುಟ್ಟಿಯಲ್ಲಿ ಕೂರಿಸಿಕೊಂಡು ಕರೆದೊಯ್ಯಲಾಗುತ್ತಿದೆ. ಇವರು ರೋಹಿಂಗ್ಯಾ ಮುಸ್ಲಿಮರು. ಶಾ ಪೊರಿರ್ ದ್ವೀಪದಲ್ಲಿರುವ ಸಂತ್ರಸ್ತರ ಕ್ಯಾಂಪ್ ಗೆ ಕರೆದೊಯ್ಯುವಾಗ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಚಿತ್ರವಿದು.

ವಿದ್ಯಾರ್ಥಿಗಳ ಜತೆ ಯುವರಾಜ ಸಂವಾದ

ವಿದ್ಯಾರ್ಥಿಗಳ ಜತೆ ಯುವರಾಜ ಸಂವಾದ

ಬ್ರಿಟನ್ ನ ಯುವರಾಜ ಹೆನ್ರಿ (ಮಧ್ಯದಲ್ಲಿರುವವರು) ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಚಥಾಮ್ ಗ್ರೀನ್ ಯೋಜನೆಯಾದ ಸಂರಕ್ಷಣೆ ಮತ್ತು ಶೈಕ್ಷಣಿಕ ಉತ್ತೇಜನಕ್ಕೆ ಸಂಬಂಧಿಸಿದ, ವೈಲ್ಡರ್ ನೆಸ್ ಫೌಂಡೇಷನ್ ನಿಂದ ಆಯೋಜನೆಯಾದ ಕಾರ್ಯಕ್ರಮವಿದು.

'ಇರ್ಮಾ' ಸಂತ್ರಸ್ತರ ಭೇಟಿ ಮಾಡಿದ ಟ್ರಂಪ್

'ಇರ್ಮಾ' ಸಂತ್ರಸ್ತರ ಭೇಟಿ ಮಾಡಿದ ಟ್ರಂಪ್

ಇರ್ಮಾ ಚಂಡಮಾರುತದಿಂದ ತೊಂದರೆಗೊಳಗಾದ ಜನರನ್ನು ನೇಪಲ್ಸ್ ನಲ್ಲಿ ಗುರುವಾರದಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರ ಪತ್ನಿ ಮೆಲಾನಿಯಾ, ಉಪಾಧ್ಯಕ್ಷ ಮೈಕ್ ಪೆನ್ಸ್ ಭೇಟಿ ಮಾಡಿದರು.

ಬುದ್ಧನ ಪ್ರತಿಮೆ ಕೊಡುಗೆ

ಬುದ್ಧನ ಪ್ರತಿಮೆ ಕೊಡುಗೆ

ಉತ್ತರ ಪ್ರದೇಶದ ರಾಜ್ಯಪಾಲ ರಾಮ್ ನಾಯಕ್ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಬುದ್ಧನ ವಿಗ್ರಹವನ್ನು ಕೊಡುಗೆಯಾಗಿ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Krishnashtami celebration, President Ram Nath Kovind felicitation and other national, inter national events represent through PTI photos.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ