KPSC ಅಕ್ರಮ: ED ದಾಳಿ ಬೆನ್ನಲ್ಲೇ ಲಖನೌ ಮನೆಯಿಂದ ದಾಖಲೆ ಸಮೇತ IAS ಅಧಿಕಾರಿ ನಾಪತ್ತೆ! ನೋಟಿಸ್ ಜಾರಿ

KPSC Scam: ಕೆಪಿಎಸ್ ಸಿ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಇಂದು ಸೋಮವಾರ ಅವರ ಲಖೌನನ ಸ್ವಂತ ಮನೆ ಮೇಲೂ ದಾಳಿ ಮಾಡಿದರು. ಈ ವೇಳೆ ಅಧಿಕಾರಿ ಪರಾರಿ ಆಗಿರುವುದು ಗೊತ್ತಾಗಿದೆ. ತಂದೆ ಅನಾರೋಗ್ಯ ನೆಪ ಹೇಳಿ ತಲೆ ಮರೆಸಿಕೊಂಡ ಅಧಿಕಾರಿಗಳಿಗೆ ಇಡಿ ನೋಟಿಸ್ ಜಾರಿ ಮಾಡಿದೆ. ಪ್ರಕರಣ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಭಾನುವಾರ ಐಎಎಸ್ ಅಧಿಕಾರಿಯೂ ಆದ ಎಕ್ಸಾಂ ಕಂಟ್ರೋಲರ ಜ್ಞಾನೇಂದ್ರ ಕುಮಾರ್ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಆದರೆ ಬೆಂಗಳೂರಿನ ಮನೆಯಲ್ಲಿ ಯಾರು ಇರಲಿಲ್ಲ. ಕದ ಹಾಕಲಾಗಿತ್ತು, ನಕಲಿ ಕೀ ಬಳಸಿ ಬಾಗಿಲು ತೆರೆದು ಅಧಿಕಾರಿಗಳು ಒಂದಷ್ಟು ತಪಾಸಣೆ ನಡೆಸಿದ್ದರು. ಕೈಗೆ ಸಿಕ್ಕ ದಾಖಲೆ ವಶಕ್ಕೆ ಪಡೆದಿದ್ದರು.

KPSC Scam

ಈ ವೇಳೆ ಐಎಎಸ್ ಅಧಿಕಾರಿ ಬೇಕು ಅಂತಲೇ ಈ ರೀತಿ ಮನೆ ಬಿಟ್ಟು ಹೋಗಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದು, ಅವರ ಅನುಮಾನ ನಿಜವಾಗಿದೆ. ತಂದೆಗೆ ಅನಾರೋಗ್ಯ ಎಂದು ಹೇಳಿ ಜ್ಞಾನೇಂದ್ರ ಅವರು ಸ್ವಂತ ಊರಿಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗೆ ಜ್ಞಾನೇಂದ್ರ ಅವರು ಪೋಷಕರನ್ನು ನೋಡಲು ಹೋಗಿದ್ದರೆಂದು ಹೇಳಿದ್ದರು.

ಲಖನೌ ಮನೆಯಲ್ಲಿದ್ದದ್ದು ಪೋಷಕರು, ಕೇರ್‌ ಟೇಕರ್ ಅಷ್ಟೇ!

ಇಂದು ಜ್ಞಾನೇಂದ್ರ ಕುಮಾರ್ ಅವರ ಲಖನೌ ಮನೆಗೆ ಮೇಲೆ ದಾಳಿ ಮಾಡಿದಾಗ ಇಡಿ ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು. ಅಲ್ಲಿ ಐಎಎಸ್ ಅಧಿಕಾರಿ ಇರಲಿಲ್ಲ. ಮನೆಯಲ್ಲಿ ವೃದ್ಧ ತಂದೆ-ತಾಯಿ ಮತ್ತು ಕೇರ್ ಟೇಕರ್ ಬಿಟ್ಟರೆ ಮನೆಯಲ್ಲಿ ಯಾರು ಇರಲಿಲ್ಲ. ಇಡಿ ದಾಳಿ ಊಹಿಸಿ ತಲೆ ಮರೆಸಿಕೊಂಡಿರುವುದು ಗೊತ್ತಾಗಿದೆ.

ದಾಖಲೆ ಸಮೇತ ಜ್ಞಾನೇಂದ್ರ ನಾಪತ್ತೆ!

KPSC ಅಧ್ಯಕ್ಷ ಶಿವಶಂಕರಪ್ಪ ಅವರ ಮನೆ ಮೇಲೆ ಇಡಿ ತಲಾಶ್ ನಡೆಸುತ್ತಿದ್ದಂತೆ ತನ್ನ ಬುಡಕ್ಕು ಇದೆಲ್ಲ ಬರಬಹುದು ಎಂದು ಊಹಿಸಿದ್ದ ಅಧಿಕಾರಿ ಭರ್ಜರಿ ಪ್ಲ್ಯಾನ್ ಮಾಡಿಕೊಂಡೇ ಪರಾರಿಯಾಗಿದ್ದು ಬೆಳಕಿಗೆ ಬಂದಿದೆ. ಲ್ಯಾಪ್‌ಟಾಪ್, ದಾಖಲೆ ಪತ್ರಗಳು ಇದ್ದ ಬ್ಯಾಗ್, ಶೂಟ್‌ಗೇಸ್ ಸಮೇತವಾಗಿ ಅಧಿಕಾರಿ ನಾಪತ್ತೆಯಾಗಿದ್ದಾರೆ. ಅಲ್ಲಿನ ಮನೆಯಲ್ಲಿ ಕೆಲವೇ ಕೆಲವು ದಾಖಲೆ ಬಿಟ್ಟರೆ ಬೇರೇನೂ ಸಿಕ್ಕಿಲ್ಲ. ಪುತ್ರ ಎಲ್ಲಿ ಹೋಗಿದ್ದಾನೆಂದು ಅವರ ಪೋಷಕರಿಗೂ ಮಾಹಿತಿ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ತಂದೆಗೆ ಹುಷಾರಿಲ್ಲ!: ರಜೆಗಾಗಿ ಅಧಿಕಾರಿ ಸುಳ್ಳು ಪತ್ರ

ಇಡಿ ದಾಳಿಯನ್ನು ಮುಂಚಿತವಾಗಿಯೇ ಅರಿತ ಜ್ಞಾನೇಂದ್ರ ಕುಮಾರ್ ತಂದೆಗೆ ಹುಷಾರಿಲ್ಲ. ಹೃದಯಸ್ತಂಭನ ವಾಗಿದ್ದು, ನಾಳೆಯೇ ಶಸ್ತ್ರ ಚಿಕಿತ್ಸೆ ನಡೆಸಬೇಕಿದೆ ಎಂದು ಆಗಸ್ಟ್ 19ರಂದು ಸುಳ್ಳು ಪತ್ರ ಬರೆದು ರಜೆ ಪಡೆದಿದ್ದ. ಇದು ಇಂದಿನ ದಾಳಿಯಿಂದ ತಿಳಿದು ಬಂದಿದೆ. ಈ ಪತ್ರ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಐಎಎಸ್ ಅಧಿಕಾರಿಗೆ ಇಡಿ ನೋಟಿಸ್ ಜಾರಿ

ಲಖೌನಾ ಮನೆ ದಾಳಿ ವೇಳೆ ಐಎಎಸ್ ಅಧಿಕಾರಿಗೆ ಇಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ನಾಳೆ ಬೆಳಗ್ಗೆ 11ಗಂಟೆಗೆ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ಪ್ರತಿಯನ್ನು ಮನೆ ಬಾಗಿಲಿಗೆ ಅಂಟಿಸಿದ್ದಾರೆ.

ಪ್ರಕರಣದಲ್ಲಿ ಯಾರನ್ನು ರಕ್ಷಿಸಲ್ಲ: ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ

ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಶಿವಂಕರಪ್ಪ ಸಾಹುಕಾರ್ ವಿಚಾರಣೆ ಮುಂದುವರಿದಿದೆ. ಐಎಎಸ್ ಮೇಲಿನ ಅಧಿಕಾರಿಗೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಮೇಯವೇ ಇಲ್ಲ. ಯಾರೆ ಆಗಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿ ಪತ್ರ ನನಗೂ ಸಿಕ್ಕಿದ್ದು, ತಂದೆಗೆ ಹುಷಾರಿಲ್ಲವೆಂದು ಹೇಳಿ ಹೋಗಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+