ಚಿನ್ನ ಕಳ್ಳಸಾಗಣೆ: ಮಲಯಾಳಂ ಚಿತ್ರರಂಗ ಭಾಗಿ

 Kollywood Kerala film industry link to Gold smuggling under probe DRI
ಕೊಚ್ಚಿ, ನ.13: ಮಲಯಾಳಂ ಚಿತ್ರರಂಗದ ಮೇಲೆ ಮತ್ತೊಮ್ಮೆ ಗಂಭೀರ ಆರೋಪ ಕೇಳಿಬಂದಿದೆ. ಚಿನ್ನದ ಕಳ್ಳಸಾಗಣೆ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿದ್ದು ಅದರಲ್ಲಿ ಮಲಯಾಳಂ ಚಿತ್ರರಂಗ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಭಾರತೀಯ ಕಸ್ಟಮ್ಸ್ ಉಚ್ಚ ಸಂಸ್ಥೆಯಾದ Directorate of Revenue Intelligence (DRI) ಮೂಲಗಳ ಪ್ರಕಾರ ಇತ್ತೀಚೆಗೆ ಕೇರಳದಲ್ಲಿ ಚಿನ್ನದ ಕಳ್ಳಸಾಗಣೆ ಪ್ರಕರಣಗಳಲ್ಲಿ ಬಂಧನಕ್ಕೀಡಾಗಿರುವ ವ್ಯಕ್ತಿಗಳಿಗೂ- ಮಲಯಾಳಂ ಚಿತ್ರೋದ್ಯಮಕ್ಕೂ ನಂಟು ಇದೆಯಾ ಎಂಬ ನಿಟ್ಟಿನಲ್ಲಿ ತನಿಖೆ/ವಿಚಾರಣೆ ಆರಂಭಿಸಲಾಗಿದೆ. ಕೊಚ್ಚಿಯಲ್ಲಿರುವ ಒಂದು ದೊಡ್ಡ ಬಂಗಲೆ ಚಿನ್ನದ ಕಳ್ಳಸಾಗಣೆದಾರರ ಕಾರಸ್ಥಾನವಾಗಿದೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ದೊಡ್ಡ ಬಂಗಲೆಗೆ ಮಲಯಾಳಂ ಚಿತ್ರೋದ್ಯಮಕ್ಕೆ ಸಂಬಂಧಿಸಿದ ಕೆಲವರು ತಪ್ಪದೇ ಬಂದುಹೋಗುತ್ತಿರುತ್ತಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಸದ್ಯದಲ್ಲೇ ಅವರಿಗೆ ಬುಲಾವ್ ನೀಡುತ್ತಾವೆ. ಅಲ್ಲಿ ಅವರಿಗೇನು ಕೆಲಸವೆಂದು ವಿಚಾರಣೆಯಿಂದ ತಿಳಿದುಕೊಳ್ಳುತ್ತೇವೆ' ಎನ್ನುತ್ತಾರೆ ಆ ಉನ್ನತಾಧಿಕಾರಿ.

DRI ತಂಡವು ಇತ್ತೀಚಿನ ತಿಂಗಳುಗಳಲ್ಲಿ ರಾಜ್ಯದ ನಾನಾ ವಿಮಾನ ನಿಲ್ದಾಣಗಳಲ್ಲಿ ಅನೇಕ ಚಿನ್ನದ ಕಳ್ಳಸಾಗಣೆದಾರರನ್ನು ಬಂಧಿಸಿದೆ. ಚಿನ್ನದ ಸಾಗಣೆಯನ್ನೇ ಕಾಯಕವಾಗಿಸಿಕೊಂಡಿರುವ Air India Express ಗಗನಸಖಿಯನ್ನೂ ಸಹ ಇತ್ತೀಚೆಗೆ ಬಂಧಿಸಲಾಗಿದೆ.

ಕಳ್ಳಸಾಗಣೆದಾರರ ತಂಡದ ಮುಖ್ಯಸ್ಥ ಟಿಕೆ ಫಯಾಜ್ ನನ್ನು ಕಳೆದ ಸೆಪ್ಟೆಂಬರಿನಲ್ಲಿ ದೆಹಲಿ ಸಿಬಿಐ ಪೊಲೀಸರು ಬಂಧಿಸಿದ್ದರು. ಆತನಿಗೆ ಸಹಕಾರ ನೀಡಿದ್ದ ಕಸ್ಟಮ್ಸ್ ಉಪಾಯುಕ್ತ ಸಿ ಮಾಧವನ್ ಸೇರಿದಂತೆ ಮೂವರು ಕಸ್ಟಮ್ಸ್ ಅಧಿಕಾರಿಗಳನ್ನೂ ಬಂಧಿಸಿದ್ದಾರೆ. ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೀಡಾಗಿದ್ದ ಮಹಿಳೆ ಫಯಾಜನ ಹೆಸರನ್ನು ಬಹಿರಂಗಪಡಿಸಿದ್ದಳು.

ಫಯಾಜ್ ತಂಡ ಹೆಚ್ಚಾಗಿ ಮಧ್ಯಪ್ರಾಚ್ಯದಿಂದ ಚಿನ್ನದ ಕಳ್ಳಸಾಗಣೆ ಮಾಡುತ್ತದೆ. ಮಲಯಾಳಂ ಚಿತ್ರೋದ್ಯಮದ ಇನ್ನೂ ಅನೇಕರ ಜತೆ ಈತನ ಬಾಂಧವ್ಯ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+