Get Updates
Get notified of breaking news, exclusive insights, and must-see stories!

ಕೊಲ್ಕತಾ: ಲೈಂಗಿಕ ಅಲ್ಪಸಂಖ್ಯಾತರ ಅವತಾರದಲ್ಲಿ ದುರ್ಗಾದೇವಿ

ಕೊಲ್ಕತಾ ಅಕ್ಟೋಬರ್, 16 : ದುರ್ಗಾದೇವಿ ಆರಾಧನೆ ದಸರಾ ಹಬ್ಬದ ಪ್ರಮುಖ ವಿಶೇಷತೆಯಾಗಿದ್ದು, ನಾನಾ ರೂಪದಲ್ಲಿ ದುರ್ಗಾದೇವಿ ಮೂರ್ತಿ ರೂಪುಗೊಳ್ಳುತ್ತವೆ. ಈ ಬಾರಿ ಕೊಲ್ಕತ್ತಾದ ದುರ್ಗಾದೇವಿ ಮೂರ್ತಿಎಲ್ಲರ ಗಮನ ಸೆಳೆಯುತ್ತಿದ್ದು, ಭಾರತದ ವಿಭಿನ್ನ ಶೈಲಿಯ ದುರ್ಗಾದೇವಿ ವಿಗ್ರಹಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ.

ಹೌದು ದಸರಾ ಹಬ್ಬದ ಪ್ರಯುಕ್ತ ಕಲ್ಕತ್ತಾದ ಜಾಯ್ ಮಿತ್ರಾ ಸ್ಟ್ರೀಟ್ ನಲ್ಲಿ ಪ್ರತ್ಯಾಯ ಜೆಂಡರ್ ಟ್ರಸ್ಟ್ ನ ಸದಸ್ಯರು ದುರ್ಗಾದೇವಿಗೆ ಲೈಂಗಿಕ ಅಲ್ಪಸಂಖ್ಯಾತರ ರೂಪ ಕೊಟ್ಟಿದ್ದು, ಭಾರತದ ಮೊದಲ ವಿಶೇಷ ದುರ್ಗಾದೇವಿ ವಿಗ್ರಹ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.[ಲೈಂಗಿಕ ಅಲ್ಪಸಂಖ್ಯಾತರಿಗೆ ತೆರೆದ ವೈಟ್ ಹೌಸ್ ಬಾಗಿಲು]

Kolkata welcomes first transgender Durga idol for festivities

ನಗರದ ಹಲವಾರು ಲೈಂಗಿಕ ಅಲ್ಪಸಂಖ್ಯಾತರು ಸೇರಿಕೊಂಡು ದುರ್ಗಾದೇವಿಗೆ ತಮ್ಮದೇ ರೂಪ ಕೊಟ್ಟು ದೇವಿಯಲ್ಲಿ ತಮ್ಮನ್ನು ಕಂಡುಕೊಂಡಿದ್ದಾರೆ. ಅಲ್ಲದೇ ಪ್ರತ್ಯಾಯ ಜೆಂಡರ್ ಟ್ರಸ್ಟ್ ನ ಹಿರಿಯ ಸದಸ್ಯರಿಂದ ಅಕ್ಟೋಬರ್ 18ರ ಭಾನುವಾರದಂದು ದುರ್ಗಾದೇವಿಯನ್ನು ಪೂಜಿಸಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.[ಲೈಂಗಿಕ ಅಲ್ಪಸಂಖ್ಯಾತರಿಗೊಂದು ವಿಶೇಷ ಮ್ಯಾಗಜೀನ್ ]

'ಇತ್ತೀಚಿನ ದಿನಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಕುರಿತಾಗಿ ಜನರಲ್ಲಿ ಸಾಕಷ್ಟು ಪೂರ್ವಗ್ರಹಗಳು ಬೆಳೆದಿದೆ. ಇದನ್ನುಹೋಗಲಾಡಿಸುವ ಪಣತೊಟ್ಟ ನಾವು ದುರ್ಗಾದೇವಿಗೆ ಈ ರೀತಿ ರೂಪ ಕೊಟ್ಟಿದ್ದೇವೆ. ಒಟ್ಟಿನಲ್ಲಿ ಜನರಲ್ಲಿ ನಮ್ಮ ಬಗ್ಗೆ ಬೆಳೆದಿರುವ ತಾತ್ಸಾರ ಮನೋಭಾವವನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದ್ದೇವೆ' ಎಂದು ಪ್ರತ್ಯಾಯ ಜೆಂಡರ್ ಟ್ರಸ್ಟ್ ನ ಸದಸ್ಯರು ಹೇಳುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+