ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರಲ್ಲೇ ಉದ್ಯಾನವನ ತಕ್ಕಳೊಪ್ಪ!

|
Google Oneindia Kannada News

ಕೋಲ್ಕತ್ತಾ, ಮೇ 29 : ಎಸಿ ಕಾರಿನಲ್ಲಿ ತಂಪಾಗಿ ಕುಳಿತು ಪ್ರಯಾಣಿಸುವುದನ್ನು ನೋಡಿದ್ದೀರಿ. ಕಾರಿನ ಮೇಲೆ ಹುಲ್ಲು, ಕಾರಿನೊಳಗೆ ಬೋನ್ಸಾಯ್ ಗಿಡಗಳನ್ನು ನೋಡಿದ್ದೀರಾ?. ಪರಿಸರ ಪ್ರೇಮಿ ಟ್ಯಾಕ್ಸಿ ಚಾಲಕರೊಬ್ಬರು ಟ್ಯಾಕ್ಸಿಯಲ್ಲಿಯೇ ಮಿನಿ ಉದ್ಯಾನವನ ನಿರ್ಮಾಣ ಮಾಡಿದ್ದಾರೆ.

ಕೋಲ್ಕತ್ತಾದ ಈ ಹಸಿರು ತೇರಿನ ಮಾಲೀಕ ಧನಂಜಯ ಚಕ್ರವರ್ತಿ (40). ಇವರು ರೂಪಿಸಿದ ಹಸಿರು ಹುಲ್ಲಿನ ಟಾಪ್ ಇರುವ ಕಾರು ಈಗ ಕೋಲ್ಕತ್ತಾದ ಪ್ರಮುಖ ಆಕರ್ಷಣೆ. ಸುಮಾರು 22 ಸಾವಿರ ರೂ.ಖರ್ಚು ಮಾಡಿ ಧನಂಜಯ ಅವರು ತಮ್ಮ ಕಾರನ್ನು ಮಿನಿ ಉದ್ಯಾನವವಾಗಿ ಮಾಡಿದ್ದಾರೆ. [ವಿಮೆ ಮಾಡಿಸಿದ್ರೆ ಈ ಮರದಡಿ ನಿಲ್ಲಬಹುದು!]

green taxi

ಕಾರಿನಲ್ಲಿ ಏನಿದೆ? : ಟಾಪ್ ಮೇಲೆ ಕಂಗೊಳಿಸುವ ಹಸಿರು ಹುಲ್ಲು, ಕಾರಿನೊಳಗೆ ಬೊನ್ಸಾಯ್‌ ಗಿಡ ಮುಂತಾದವು ಧನಂಜಯ ಅಂಬಾಸಿಡರ್ ಕಾರಿನ ಆಕರ್ಷಣೆಗಳು. ಪ್ರಯಾಣಿಕರೊಬ್ಬರು ಕಾರಿನಲ್ಲಿ ಬಿಟ್ಟುಹೋದ ಬಾಟಲಿಯಲ್ಲಿ ಮೊದಲು ಗಿಡ ನೆಟ್ಟು ಕಾರಿನಲ್ಲಿಟ್ಟಿದ್ದ ಧನಂಜಯ ಅವರು, ಈಗ ಕಾರನ್ನು ಹಸಿರು ಉದ್ಯಾನ ಮಾಡಿದ್ದಾರೆ. [ಬೆಂಗಳೂರಿನ ಈ ಮರದ ಕಥೆ ಕೇಳಿ]

ಪರಿಸರ ಪ್ರೀತಿ : 'ನಾನು ಮರಗಿಡಗಳನ್ನು ಪ್ರೀತಿಸುವ ಮನುಷ್ಯ. ಇಂದಿಗೂ ಬಾಡಿಗೆ ಮನೆಯಲ್ಲಿರುವುದರಿಂದ ಗಾರ್ಡನ್‌ ಮಾಡುವ ಕನಸು ಈಡೇರಿಲ್ಲ. ಆದರೂ ಕುಂಡಗಳ ಮೂಲಕ ಸಾಕಷ್ಟು ಗಿಡಗಳನ್ನು ಬೆಳೆಸಿದ್ದೇನೆ. ಈಗ ಕಾರಿನಲ್ಲಿಯೂ ಗಾರ್ಡನ್ ಮಾಡಿದ್ದೇನೆ' ಎನ್ನುತ್ತಾರೆ ಧನಂಜಯ ಅವರು.

ಮೊದಲು ಧನಂಜಯ ಅವರ ಟ್ಯಾಕ್ಸಿ ಹತ್ತಿದ ಪ್ರಯಾಣಿಕರು ಗಿಡಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ್ದರಂತೆ. ಆದರೆ, ಕ್ರಮೇಣ ಇದು ಜನರಿಗೆ ಇಷ್ಟವಾಗಿದೆ. ಆದ್ದರಿಂದ ಕಾರಿನ ಮೇಲ್ಭಾಗದಲ್ಲಿಯೂ ಹಸಿರು ಹುಲ್ಲು ಬೆಳೆಸುವ ಪ್ರಯೋಗವನ್ನು ಧನಂಜಯ ಅವರು ಮಾಡಿದ್ದು, ಅದು ಯಶಸ್ವಿಯಾಗಿದೆ. ಕೋಲ್ಕತ್ತಾಗೆ ಹೋದರೆ ಟ್ಯಾಕ್ಸಿ ನೋಡಿ ಬನ್ನಿ....[ಪಿಟಿಐ ಚಿತ್ರ]

English summary
40-year-old driver Dhananjay Charkaborty has began greening drive who operates the plant fitted taxi in Kolkata with Real grass on the rooftop and a cluster of eight potted plants inside the car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X