ಟೂರಿಸಂ ಮೇಲೆ ಟೆರರಿಸಂ, ಟಾರ್ಗೆಟ್ ಕೊಡೈಕೆನಾಲ್ !

ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದ ಇರಾಕಿ ಉಗ್ರ ಪಡೆಯ ಸಂಚನ್ನು ಎನ್ ಐಎ ಪತ್ತೆ ಹಚ್ಚಿದೆ.

ಬೆಂಗಳೂರು, ಅಕ್ಟೋಬರ್ 20: 'ಕೊಡೈಕೆನಾಲ್ ನಲ್ಲಿರುವ ಇಸ್ರೇಲಿಗಳನ್ನು ಹಾಗೂ ಇತರೆ ಪ್ರವಾಸಿಗರನ್ನು ಕೊಲ್ಲಿ' ಎಂಬ ಟೆಲಿಗ್ರಾಮ್ ಸಂದೇಶ- ಕೇರಳದಿಂದ ಸಜೀದ್ ಅಬ್ದುಲಾ ಹಾಗೂ ಇತರೆ ಐಎಸ್ಐಎಸ್ ನೇಮಕಾತಿ ವಿಂಗ್ ಗೆ ಬಂದಿತ್ತು. ರಾಷ್ಟ್ರೀಯ ತನಿಖಾ ದಳ(ಎನ್ಐಎ) ಇತ್ತೀಚೆಗೆ ಬಂಧಿಸಿದ 6 ಮಂದಿ ಐಎಸ್ಐಎಸ್ ಬೆಂಬಲಿತರು ವಿಚಾರಣೆ ವೇಳೆ ಟಾರ್ಗೆಟ್ ಕೊಡೈಕನಲ್ ವಿಷಯ ಬಹಿರಂಗವಾಗಿದೆ.

ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದ ಇರಾಕಿ ಉಗ್ರ ಪಡೆಯ ಸಂಚನ್ನು ಎನ್ ಐಎ ಪತ್ತೆ ಹಚ್ಚಿದೆ. ಪ್ರಾಥಮಿಕ ತನಿಖೆ ವೇಳೆ, ಇರಾಕಿ ಉಗ್ರರು ಬಾಂಬ್ ದಾಳಿ ಬಿಟ್ಟು ಫ್ರಾನ್ಸ್ ನ ನೀಸ್ ನಗರದಲ್ಲಿ ನಡೆದ ಚಾಕು ದಾಳಿ ಮಾದರಿಯಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದು ತಿಳಿದು ಬಂದಿದೆ.

Kodaikanal was a target for ISIS module in South India

ಅಬ್ದುಲ್ಲಾ ಸೇರಿದಂತೆ ಇರಾಕಿ ಉಗ್ರರ ಬೆಂಬಲಿತರು ನಡೆಸಿದ ಚಾಟ್ ಹಿಸ್ಟರಿ, ಫೋನ್ ಹಿಸ್ಟರಿಯ ಮಿಸ್ಟರಿಯನ್ನು ಎಳೆ ಎಳೆಯಾಗಿ ಎನ್ ಐಎ ಹೊರಹಾಕುತ್ತಿದೆ. ಹಿಂದೂಗಳನ್ನು ಟಾರ್ಗೆಟ್ ಮಾಡಬೇಕು. ಕೊಡೈಕನಲ್ ನಂಥ ಪ್ರವಾಸಿ ತಾಣಗಳನ್ನು ಧ್ವಂಸಗೊಳಿಸಬೇಕು ಎಂದು ಸಂದೇಶ ಕಳಿಸಲಾಗಿತ್ತು.

ದಾಳಿ ನಡೆಸಲು ಸುಲಭವಾಗುವಂತೆ do-it-yourself (DIY) ಪ್ರಾತ್ಯಕ್ಷಿಕೆ ಪುಸ್ತಕಗಳನ್ನು ನೀಡಲಾಗಿದೆ. ಮುಜಾಹಿದ್ ಜೀವನದ ಬಗ್ಗೆ ಪಾಠಗಳಿವೆ. ರಾಜಸ್ಥಾನ ಹಾಗೂ ಜಮ್ಮು ಮತ್ತು ಕಾಶ್ಮೀರ ದಾಲ್ ಸರೋವರ ಮೇಲೂ ದಾಳಿಗೆ ಸಂಚು ರೂಪಿಸಲಾಗಿತ್ತು,

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+