2 ಲಕ್ಷ ರುಪಾಯಿ ಬೆಲೆ ಬಾಳುವ ಬ್ಯಾಗ್ ವಿವಾದ: ಸಂಸದೆ ಮಹುವಾ ಮೊಯಿತ್ರಾ ಪ್ರತಿಕ್ರಿಯೆ ಏನು

ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ವಿರೋಧ ಪಕ್ಷಗಳು ಬೆಲೆ ಏರಿಕೆ ವಿರುದ್ಧ ಭಾರಿ ಪ್ರತಿಭಟನೆ ನಡೆಸುತ್ತಿವೆ. ಬಿಜೆಪಿ ಸರ್ಕಾರದ ಬೆಲೆ ಏರಿಕೆ ಕ್ರಮವನ್ನು ಖಂಡಿಸುತ್ತಿವೆ, ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸುವ ವೇಳೆ, ಟಿಎಂಸಿ ಸಂಸದೆ ಐಷಾರಾಮಿ ಬ್ಯಾಗ್ ಮರೆ ಮಾಚಿರುವುದು ಈಗ ಟೀಕೆಗೆ ಗುರಿಯಾಗಿದೆ.

ಟಿಎಂಸಿ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರು ಲೋಕಸಭೆಯಲ್ಲಿ ಬೆಲೆ ಏರಿಕೆಯ ವಿಷಯವನ್ನು ಪ್ರಸ್ತಾಪಿಸಿದ ತಕ್ಷಣ ಅವರ ಪಕ್ಕದಲ್ಲೇ ಕುಳಿತಿದ್ದ ಮತ್ತೋರ್ವ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ತಮ್ಮ ಐಷಾರಾಮಿ ಬ್ಯಾಗ್‌ ಅನ್ನು ಮೇಜಿನ ಕೆಳಗೆ ಮರೆಮಾಚಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿತ್ತು. ವೀಡಿಯೊ ವೈರಲ್ ಆದ ನಂತರ ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಮತ್ತು ಲೂಯಿಸ್ ವಿಟಾನ್ ಬ್ಯಾಗ್‌ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿತ್ತು.

ಟ್ವಿಟರ್‍ ನಲ್ಲಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ನೆಟ್ಟಿಗರು ಟೀಕಿಸಿದ್ದರು. ಬಡವರ ಬಗ್ಗೆ ಚರ್ಚೆ ಮಾಡುವ ಪಕ್ಷದವರು ಐಷಾರಾಮಿ ಬ್ಯಾಗ್ ಹೊಂದಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಅವರು ಬ್ಯಾಗ್ ಮರೆಮಾಚುವ ವಿಡಿಯೋ ವೈರಲ್ ಆಗಿತ್ತು. ವೈರಲ್ ವೀಡಿಯೋ ಬಗ್ಗೆ ಸಂಸದೆ ಮಹುವಾ ಮೊಯಿತ್ರಾ ಪ್ರತಿಕ್ರಿಯೆ ನೀಡಿದ್ದಾರೆ.

ಜೋಲಾ ಲೇಕೆ ಆಯೆ ಥೆ, ಜೋಲಾ ಲೇಕೆ ಚಲ್ ಪಡೆಂಗೆ

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಚಿತ್ರಗಳ ಕೊಲಾಜ್ ಜೊತೆಗೆ ಟ್ವೀಟ್‌ನೊಂದಿಗೆ ಪ್ರತಿಕ್ರಿಯೆ ಮತ್ತು ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಿದ್ದಾರೆ. ಎಲ್ಲಾ ಫೋಟೋಗಳಲ್ಲಿ, ಸಂಸದೆ ಮಹುವಾ ಮೊಯಿತ್ರಾ ಹಲವಾರು ಸಂದರ್ಭಗಳಲ್ಲಿ ಲೂಯಿ ವಿಟಾನ್ ಟೋಟ್ ಬ್ಯಾಗ್ ಜೊತೆ ಲೋಕಸಭೆಗೆ ಬಂದಿರುವುದನ್ನು ಕಾಣಬಹುದು. "2019 ರಿಂದ ಸಂಸತ್ತಿನಲ್ಲಿ ಜೋಳಿಗೆ ಹೊರುವ ಫಕೀರ, ಜೊಳಿಗೆ ತೆಗೆದುಕೊಂಡು ಬಂದಿದ್ದೇನೆ, ಜೋಳಿಗೆಯೊಂದಿಗೆ ಮುಂದೆ ಸಾಗುತ್ತೇನೆ (ಜೊಲೆವಾಲಾ ಫಕೀರ್. ಜೋಲಾ ಲೇಕೆ ಆಯೆ ಥೆ, ಜೋಲಾ ಲೇಕೆ ಚಲ್ ಪಡೆಂಗೆ)" ಎಂದು ಫೋಟೋ ಜೊತೆ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬ್ಯಾಗ್‌ ಬಗ್ಗೆ ಚರ್ಚೆ

ಮಹುವಾ ಮೋಯಿತ್ರಾ ಬ್ಯಾಗ್ ಮರೆಮಾಚಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಟ್ವಿಟರ್ ನಲ್ಲಿ ಆಕೆಯ ವಿರುದ್ಧ ಭಾರಿ ಟೀಕೆ ವ್ಯಕ್ತವಾಯಿತು. ಸಂಸದೆಯ ಐಷಾರಾಮಿ ಬ್ಯಾಗ್ ಬಗ್ಗೆ ಭಾರಿ ಚರ್ಚೆ ನಡೆಯಿತು.

"ಐಷಾರಾಮಿ ಬ್ಯಾಗ್ ಮರೆಮಾಚಿದ್ದಕ್ಕೆ ಜನ ಮಹುವಾ ಮೋಯಿತ್ರಾ ಅವರನ್ನು ಟೀಕಿಸುತ್ತಿದ್ದಾರೆ. ಆದರೆ ಅವರಿಗೆ ಸದನದಲ್ಲಿ ಇಂದಿನ ಚರ್ಚೆಯ ವಿಷಯದ ಬಗ್ಗೆ ಗೊತ್ತಿರಲಿಲ್ಲ, ಮುಂದಿನ ಬಾರಿ ಅವರು ಜಾಗ್ರತೆ ವಹಿಸುತ್ತಾರೆ" ಎಂದು ಟ್ವಿಟರ್ ಬಳಕೆದಾರರೊಬ್ಬರು ವ್ಯಂಗ್ಯವಾಡಿದ್ದಾರೆ.

ಬಡವರ ಬಗ್ಗೆ ಮಾತನಾಡಲು ಬಡವರೇ ಆಗಬೇಕಿಲ್ಲ

ಟೀಕೆಗಳ ನಡುವೆ ಮಹುವಾ ಮೊಯಿತ್ರಾ ಅವರನ್ನು ಹಲವರು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. "ಬಡವರ ಬಗ್ಗೆ ಮಾತನಾಡಲು ಶ್ರೀಮಂತರು ಬಡವರಾಗಿ ಬದಲಾಗಬೇಕಿಲ್ಲ. ಮಹುವಾ ಮೊಯಿತ್ರಾ ಅವರು ಶ್ರೀಮಂತ ಮಹಿಳೆ, ಆಕೆಯ ದುಡಿಮೆಯ ಹಣದಲ್ಲಿ ಐಷಾರಾಮಿ ಬ್ಯಾಗ್ ಖರೀದಿಸಿದ್ದಾರೆ. ಮನೆಯೊಳಗೆ ಮತ್ತು ಹೊರಗಡೆ ಗುಣಮಟ್ಟದ ಜೀವನ ನಡೆಸುವ ಶಕ್ತಿ ಆಕೆಗಿದೆ" ಎಂದು ಟ್ವಿಟರ್ ಬಳಕೆದಾರರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಟ್ರೋಲ್‌ಗಳಿಗೆ ಉತ್ತರ ನೀಡಿರುವುದಕ್ಕೆ ಮಹುವಾ ಮೊಯಿತ್ರಾ ಬಗ್ಗೆ ಹಲವರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. ಬಿಜೆಪಿಯನ್ನು ಟೀಕಿಸಲು ನೀವು ಸರಿಯಾದ ವ್ಯಕ್ತಿ ಎಂದು ಮೆಚ್ಚಿಕೊಂಡಿದ್ದಾರೆ.

 ಐಷಾರಾಮಿ ಲೂಯಿಸ್ ವಿಟಾನ್ ಬ್ಯಾಗ್

ಐಷಾರಾಮಿ ಲೂಯಿಸ್ ವಿಟಾನ್ ಬ್ಯಾಗ್

ಐಷಾರಾಮಿ ಉತ್ಪನ್ನಗಳಿಗೆ ಲೂಯಿಸ್ ವಿಟಾನ್ ಬ್ರಾಂಡ್ ಪ್ರಸಿದ್ಧವಾಗಿದೆ. ವಿಶ್ವದಾದ್ಯಂತ ಶ್ರೀಮಂತರು ಪ್ರತಿಷ್ಠೆಗಾಗಿ ಲೂಯಿಸ್ ವಿಟಾನ್ ಬ್ರಾಂಡ್‌ನ ಉತ್ಪನ್ನಗಳನ್ನು ಖರೀದಿ ಮಾಡುತ್ತಾರೆ. ಈ ಬ್ರಾಂಡ್‌ನ ಒಂದು ಬ್ಯಾಗ್‌ ಬೆಲೆ ಲಕ್ಷ ರುಪಾಯಿಗಳಲ್ಲಿ ಇರುತ್ತದೆ.

ಲೂಯಿಸ್ ವಿಟಾನ್ ಫ್ರೆಂಚ್ ಐಷಾರಾಮಿ ಬ್ರಾಂಡ್ ಆಗಿದ್ದು, ವೈರಲ್ ವೀಡಿಯೊದಲ್ಲಿ ಮೋಹುವಾ ಮೊಯಿತ್ರಾ ಹೊಂದಿರುವ ಬ್ಯಾಗ್‌ನ ಬೆಲೆ ಸುಮಾರು 1.60ಲಕ್ಷ ರುಪಾಯಿ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+