Manmohan Singh Asset: ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಸ್ತಿ ಮೌಲ್ಯದ ವಿವರ ಹೀಗಿದೆ
Manmohan Singh Asset: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಅವರು ಗುರುವಾರ (ಡಿಸೆಂಬರ್ 26) ರಾತ್ರಿ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ನವದೆಹಲಿಯ ಏಮ್ಸ್‌ಗೆ ಅವರನ್ನು ದಾಖಲಿಸಲಾಗಿತ್ತು. ವಯಸ್ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಇನ್ನು ಮನಮೋಹನ್ ಸಿಂಗ್ ಅವರು ಪ್ರಧಾನಿ ಹುದ್ದೆಗೆ ಬರುವ ಮುನ್ನವೇ ಆರ್‌ಬಿಐ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದರು. ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿದ್ದರು. ಇಷ್ಟೆಲ್ಲ ಹುದ್ದೆ ಅಲಂಕರಿಸಿದ್ದ ಡಾ. ಮನಮೋಹನ್ ಸಿಂಗ್ ಅವರ ಬಳಿಯಿದ್ದ ಆಸ್ತಿ ಮೌಲ್ಯ ಎಷ್ಟು ಎನ್ನುವ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ಗಮನಿಸಿ.

ಡಾ.ಮನಮೋಹನ್ ಸಿಂಗ್ ಅವರು 2004ರಲ್ಲಿ ಯುಪಿಎ ಸರ್ಕಾರದಲ್ಲಿ ಮೊದಲ ಬಾರಿಗೆ ಪ್ರಧಾನಿ ಹುದ್ದೆ ಅಲಂಕರಿಸಿದರು. 2014ರ ಜೂನ್ ವರೆಗೆ ದೇಶದ ಪ್ರಧಾನಿ ಆಗಿದ್ದರು. ಇನ್ನು ಅವರು ಭಾರತದ ಪ್ರಸಿದ್ಧ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು.
ಆಸ್ತಿ ವಿವರ: 2018ರಲ್ಲಿ ರಾಜ್ಯಸಭಾ ಸಂಸದ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ವೇಳೆ ಮನಮೋಹನ್ ಸಿಂಗ್ ತಮ್ಮ ಒಟ್ಟು ಆಸ್ತಿ 15,77,52,837 ರೂಪಾಯಿ ಎಂದು ಘೋಷಣೆ ಮಾಡಿದ್ದರು. ಬಳಿಕ ರಾಜ್ಯಸಭಾ ಚುನಾವಣೆಗೆ ನಾಮನಿರ್ದೇಶನ ಮಾಡುವಾಗ ಅಂದರೆ 2018-19ರಲ್ಲಿ ಅವರ ಒಟ್ಟು ಗಳಿಕೆ 89,42,390 ರೂಪಾಯಿಗೆ ಏರಿಕೆ ಆಗಿತ್ತು. ಮನಮೋಹನ್ ಸಿಂಗ್ ಅವರ ನಿವ್ವಳ ಮೌಲ್ಯಕ್ಕೆ ಸಂಬಂಧಿಸಿದ ಈ ಮಾಹಿತಿಯನ್ನು ಅವರು ನೀಡಿದ ಅಫಿಡವಿಟ್ ಆಧಾರದ ಮೇಲೆ ಬರೆಯಲಾಗಿದೆ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.
ಇನ್ನು 2013ರಲ್ಲಿ ಪ್ರಧಾನಿ ಆಗಿದ್ದ ವೇಳೆ ತಮ್ಮ ಆಸ್ತಿಯನ್ನು ಮನಮೋಹನ್ ಸಿಂಗ್ ಅವರು ಬಹಿರಂಗಪಡಿಸಿದ್ದರು. ಆಗಿನ ಅಫಿಡವಿಟ್ ಪ್ರಕಾರ, ಒಟ್ಟು ನಿವ್ವಳ ಮೌಲ್ಯ 10.73 ಕೋಟಿ ರೂಪಾಯಿ. ಚಂಡೀಗಢ ಮತ್ತು ನವದೆಹಲಿಯಲ್ಲಿ ಎರಡು ಮನೆಗಳನ್ನು ಹೊಂದಿದ್ದು, ಮಾರುತಿ 800 ಕಾರ್ ಇದೆ ಎಂದು ಅಫಿಡವಿಟ್‌ನಲ್ಲಿ ನಮೂದಿಸಿದ್ದರು. 2012ರಲ್ಲಿ 150.80 ಗ್ರಾಂ ಚಿನ್ನಾಭರಣವಿದೆ ಅಂತಲೂ ಮಾಹಿತಿ ನೀಡಿದ್ದರು.
ಮನಮೋಹನ್ ಸಿಂಗ್ ಅವರು 1932ರ ಸೆಪ್ಟೆಂಬರ್ 26ರಂದು ಪಂಜಾಬ್‌ನ ಗಾಹ್‌ನಲ್ಲಿ ಜನಿಸಿದರು. ಅವರ ತಂದೆ ಗುರುಮುಖ್ ಸಿಂಗ್ ಮತ್ತು ತಾಯಿ ಅಮೃತ್ ಕೌರ್. ಭಾರತ-ಪಾಕ್ ವಿಭಜನೆಯ ಸಮಯದಲ್ಲಿ, ಅವರ ಕುಟುಂಬವು ಭಾರತದ ಅಮೃತಸರಕ್ಕೆ ಸ್ಥಳಾಂತರಗೊಂಡಿತು. 1958ರಲ್ಲಿ ಮನಮೋಹನ್ ಸಿಂಗ್ ಗುರುಶರಣ್ ಕೌರ್ ಅವರನ್ನು ವಿವಾಹವಾಗಿದ್ದು, ಈ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಅಮೃತ್ ಸಿಂಗ್, ದಮನ್ ಸಿಂಗ್ ಮತ್ತು ಉಪಿಂದರ್ ಸಿಂಗ್ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ. ಇವರ ಪೈಕಿ ದಮನ್ ಎಂಬಿವವರು ತಮ್ಮ ತಂದೆ ಮನಮೋಹನ್ ಸಿಂಗ್ ಅವರು ಯಾಕೆ ವ್ಯದ್ಯರಾಗಲಿಲ್ಲ ಎಂಬುದರ ಬಗ್ಗೆ ಬರೆದಿದ್ದಾರೆ.












Click it and Unblock the Notifications