ಸ್ಟೆಂಟ್ ಬೆಲೆ ಇಳಿಕೆ ಆಯ್ತು, ಈಗ ಕೃತಕ ಮಂಡಿ ಕೀಲಿನ ಸರದಿ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 17: ಕೇಂದ್ರ ಸರಕಾರದಿಂದ ಮತ್ತೊಂದು ಮಹತ್ಚದ ಹೆಜ್ಜೆಯಿದು. ಈ ಹಿಂದೆ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ದುಬಾರಿ ಎನಿಸುವ ಸ್ಟೆಂಟ್ ನ ಬೆಲೆಗೆ ಮಿತಿ ಹೇರಿದ್ದ ಸರಕಾರ, ಇದೀಗ 15 ಬಗೆಯ ಕೃತಕ ಮಂಡಿ ಕೀಲು ಉಪಕರಣಗಳ ಬೆಲೆಯ ಗರಿಷ್ಠ ಮಿತಿಯನ್ನು ನಿಗದಿಗೊಳಿಸಿದೆ.

ಬಾಲ್ಯದಲ್ಲಿ ಬೊಜ್ಜಿದ್ದರೆ ಲಕ್ವಾ ಹೊಡೆಯುವ ಸಾಧ್ಯತೆ ಹೆಚ್ಚು: ವರದಿ

ಈ ಬಗ್ಗೆ ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರವು ಆದೇಶ ಹೊರಡಿಸಿದ್ದು, ಈ ಮೂಲಕ ಕೃತಕ ಮಂಡಿಚಿಪ್ಪುಗಳ ಬೆಲೆ ಮಾರುಕಟ್ಟೆಯಲ್ಲಿ ಶೇ 60ಕ್ಕಿಂತಲೂ ಅಗ್ಗವಾಗಲಿದೆ. ಇನ್ನು ಮುಂದೆ 4,090 ರುಪಾಯಿಯಿಂದ 62,770 ರುಪಾಯಿಗೆ ಉಪಕರಣವು ಸಿಗಲಿವೆ.

Knee implants to cost up to 69% less

ದುಬಾರಿ ಎನಿಸುವ ಕೃತಕ ಮಂಡಿ ಕೀಲು ಉಪಕರಣಗಳ ಬೆಲೆಗಳ ಮೇಲೂ ನಿಯಂತ್ರಣ ಹೇರಿದ್ದು, ಅಧಿಸೂಚನೆ ಕೂಡ ಹೊರಡಿಸಲಾಅಗಿದೆ. ಆಗಸ್ಟ್ ಹದಿನಾರರಿಂದಲೇ ಪರಿಷ್ಕೃತ ಬೆಲೆಗಳು ಜಾರಿಗೆ ಬಂದಿವೆ. ಈ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಪ್ರತಿವರ್ಷ ಸರಾಸರಿ 1.2 ಲಕ್ಷ ಶಸ್ತ್ರಚಿಕಿತ್ಸೆ ನಡೆಯುತ್ತದೆ. ಇದೀಗ ಬೆಲೆಗೆ ಮಿತಿ ವಿಧಿಸಿರುವುದರಿಂದ 1,500 ಕೋಟಿ ರುಪಾಯಿಯಷ್ಟು ಮೊತ್ತ ಉಳಿತಾಯವಾಗಲಿದೆ ಎಂದು ತಿಳಿಸಿದರು.

ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು...

ಅಂದಹಾಗೆ ಸದ್ಯಕ್ಕೆ ಹೆಚ್ಚು ಬಳಕೆಯಲ್ಲಿರುವ ಕೋಬಾಲ್ಟ ಕ್ರೋಮಿಯಂ, ಉತ್ತಮ ಗುಣಮಟ್ಟದ ಟಿಟಾನಿಯಂ ಆಕ್ಸಿಡೈಸ್ಡಂ, ಸಲೀಸಾಗಿ ಕಾಲನ್ನು ಮಡಚಲು ಅನುಕೂಲವಾಗುವ ಜಿಕ್ರೋನಿಯಂ ಲೋಹದ ಕೃತಕ ಮಂಡಿಚಿಪ್ಪುಗಳ ಬೆಲೆ ಶೇ 69ರಷ್ಟು ಅಗ್ಗವಾದರೆ, ಸಾದಾ ಉಪಕರಣಗಳ ಮೊತ್ತದಲ್ಲಿ ಶೇ 59ರಷ್ಟು ಕಡಿಮೆಯಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
According to PM Narendra Modi's Independence Day promise to take steps to rein in healthcare costs, the government on Wednesday said it is placing knee implants under price control.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ