Maha Kumbh Mela: ಮಹಾ ಕುಂಭ ಮೇಳದಲ್ಲಿ ಒಂದು ಕೋಟಿ ಕಪ್ ಟೀ ಪೂರೈಕೆಗೆ ಕೈಜೋಡಿಸಿದ ಕೆಎಂಎಫ್‌

ಕನ್ನಡಿಗರ ಹೆಮ್ಮೆಯ ನಂದಿನಿ ಹಾಲಿನ ಟೀ ಮಹಾ ಕುಂಭ ಮೇಳದಲ್ಲಿ ಕೂಡ ಸಿಗಲಿದ್ದು, ಚಳಿಯಲ್ಲಿ ಭಕ್ತರಿಗೆ ಬಿಸಿ ಬಿಸಿ ಟೀ ಪೂರೈಕೆಗೆ ಕೆಎಂಎಫ್‌ ಚಾಯ್ ಪಾಯಿಂಟ್ ಜೊತೆ ಕೈ ಜೋಡಿಸಿದೆ. ನಂದಿನಿ ಬ್ರಾಂಡ್ ಅಡಿಯಲ್ಲಿ ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಒಕ್ಕೂಟ ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾ ಕುಂಭಮೇಳಕ್ಕಾಗಿ ಟೀ ಕೆಫೆ ಸರಪಳಿ ಚಾಯ್ ಪಾಯಿಂಟ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಸೋಮವಾರ ಘೋಷಣೆ ಮಾಡಿದೆ.

ಚಾಯ್ ಪಾಯಿಂಟ್‌ ಮಹಾ ಕುಂಭ ಮೇಳದ ಆವರಣದಲ್ಲಿ 10 ಮಳಿಗೆಗಳನ್ನು ಸ್ಥಾಪನೆ ಮಾಡಿದ್ದು, ಈ ಮಳಿಗೆಗಳು ಕುಂಭ ಮೇಳ ಮುಗಿಯುವ ವೇಳೆಗೆ 1 ಕೋಟಿ ಕಪ್‌ಗಳಿಗಿಂತ ಹೆಚ್ಚಿನ ಟೀ ಪೂರೈಕೆ ಮಾಡಲು ಸಜ್ಜಾಗಿದೆ. ಈ ಮೂಲಕ ಒಂದೇ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಕಪ್ ಟೀ ಮಾರಿದ ಗಿನ್ನೆಸ್ ದಾಖಲೆ ಮಾಡುವ ಗುರಿ ಹೊಂದಿದೆ ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

kmf nandini milk chai point maha kumbh mela 2025

ಈ ಒಂದು ಕೋಟಿ ಕಪ್ ಟೀ ತಯಾರಿ ಮಾಡಲು ಚಾಯ್ ಪಾಯಿಂಟ್‌ ಕರ್ನಾಟಕದ ಹೆಮ್ಮೆಯ ನಂದಿನಿ ಹಾಲನ್ನು ಬಳಕೆ ಮಾಡಲಿದೆ. ಮಹಾ ಕುಂಭ ಮೇಳದಲ್ಲಿ ತಯಾರಿಸಲಾಗುವ ಪ್ರತಿ ಕಪ್ ಟೀ ಕೆಎಂಎಫ್‌ನ ಸಮೃದ್ಧ ಮತ್ತು ಉತ್ತಮ ಗುಣಮಟ್ಟದ ಹಾಲನ್ನು ಬಳಸಲಾಗುತ್ತದೆ. ಇದು ಟೀ ಪ್ರೇಮಿಗಳಿಗೆ ಸಂತೋಷದ ಅನುಭವ ನೀಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಂದಿನಿ ಉತ್ಪನ್ನಗಳು ಲಭ್ಯ

ಕೆಎಂಎಫ್ ನೀಡಿರುವ ಮಾಹಿತಿಯ ಪ್ರಕಾರ, ಟೀ ಜೊತೆಗೆ ಚಾಯ್ ಪಾಯಿಂಟ್ ಮಳಿಗೆಗಳಲ್ಲಿ ನಂದಿನಿಯ ಇತರೆ ಉತ್ಪನ್ನಗಳು ಕೂಡ ಸಿಗಲಿವೆ. ಕೆಎಂಎಫ್‌ ಉತ್ಪಾದಿಸುವ ಜನಪ್ರಿಯ ಸಿಹಿ ತಿಂಡಿಗಳು, ಮಿಲ್ಕ್‌ಶೇಕ್‌ಗಳು ಸೇರಿ ಹಲವು ಉತ್ಪನ್ನಗಳು ಲಭ್ಯವಿದ್ದು, ಜಗತ್ತಿನ ದೊಡ್ಡ ಧಾರ್ಮಿಕ ಕಾರ್ಯಕ್ರಮದಲ್ಲಿ ನಂದಿನಿ ಉತ್ಪನ್ನಗಳು ಜನ ಮನ ಗೆಲ್ಲಲು ಸಜ್ಜಾಗಿದೆ.

ನಂದಿನಿ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ ವಿಸ್ತರಿಸಲು ಗಂಭೀರವಾದ ಪ್ರಯತ್ನಗಳನ್ನು ಮಾಡುತ್ತಿದೆ. ನಂದಿನಿ ಹಾಲು ಈಗ ದೆಹಲಿಗೂ ಪೂರೈಕೆಯಾಗುತ್ತಿದೆ. ವಿವಿಧ ಉತ್ಪನ್ನಗಳು ವಿದೇಶಗಳಲ್ಲೂ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟು ಬಿಡುಗಡೆ ಮಾಡಿದ್ದು ಭಾರಿ ಜನಪ್ರಿಯತೆ ಪಡೆದುಕೊಂಡಿದೆ.

ಈಗ ಮಹಾ ಕುಂಭ ಮೇಳಕ್ಕೆ ಬರುವ ಭಕ್ತರಿಗೆ ನಂದಿನಿ ಉತ್ಪನ್ನಗಳ ಸ್ವಾದವನ್ನು ಉಣಬಡಿಸಲು ಸಜ್ಜಾಗಿದೆ. 44 ದಿನಗಳ ಮಹಾ ಕುಂಭ ಮೇಳಕ್ಕೆ ಇಂದಿನಿಂದ (ಜನವರಿ 13) ರಂದು ಚಾಲನೆ ಸಿಕ್ಕಿದ್ದು ಲಕ್ಷಾಂತರ ಭಕ್ತರು ಈಗಾಗಲೇ ಪ್ರಯಾಗ್‌ ರಾಜ್‌ಗೆ ಆಗಮಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+