Kisan Mahapanchayat: ದೆಹಲಿಯಲ್ಲಿ ನಾಳೆ ಮಾ. 20ಕ್ಕೆ 'ಕಿಸಾನ್ ಮಹಾಪಂಚಾಯತ್', ಸಂಯುಕ್ತ ಕಿಸಾನ್ ಮೋರ್ಚಾ
ಕೇಂದ್ರ ಸರ್ಕಾರದ ವಿರುದ್ಧ ನಾಳೆ ಮಾರ್ಚ್ 20 ರಂದು ಸಂಯುಕ್ತ ಕಿಸಾನ್ ಮೋರ್ಚಾ (SKM) ನವದೆಹಲಿ ರಾಮಲೀಲಾ ಮೈದಾನದಲ್ಲಿ 'ಕಿಸಾನ್ ಮಹಾಪಂಚಾಯತ್' ಸಮಾವೇಶ ಹಮ್ಮಿಕೊಂಡಿದ್ದು, ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ನವದೆಹಲಿ, ಮಾರ್ಚ್ 19: ಕನಿಷ್ಠ ಬೆಂಬಲ ಬೆಲೆ ಕಡ್ಡಾಯಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಇದೇ ತಿಂಗಳ ಮಾರ್ಚ್ 20 ರಂದು ಸಂಯುಕ್ತ ಕಿಸಾನ್ ಮೋರ್ಚಾ (SKM) ನವದೆಹಲಿಯ ರಂದು ರಾಮಲೀಲಾ ಮೈದಾನದಲ್ಲಿ 'ಕಿಸಾನ್ ಮಹಾಪಂಚಾಯತ್' ಸಮಾವೇಶ ಹಮ್ಮಿಕೊಂಡಿದೆ. ಇದರಲ್ಲಿ ಭಾಗವಹಿಸಲು ದೇಶಾದ್ಯಂತ ಲಕ್ಷಾಂತರ ರೈತರು ದೆಹಲಿಯತ್ತ ಮುಖ ಮಾಡಿದ್ದಾರೆ.
ರೈತರ ಸಂಘಟನೆಗಳ ಒಕ್ಕೂಟವಾಗಿರುವ 'ಕಿಸಾನ್ ಸಂಯುಕ್ತ ಮೋರ್ಚಾ' ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿಗಾಗಿ ಒತ್ತಾಯಿಸಲು 'ಕಿಸಾನ್ ಮಹಾಪಂಚಾಯತ್' ನಡೆಸಲಾಗುವುದು ಎಂದು ರೈತ ಸಂಘವು ಈ ಹಿಂದಿನ ತಿಂಗಳೇ ತನ್ನ ನಿರ್ಧಾರ ಪ್ರಕಟಿಸಿತ್ತು.

ಮಾರ್ಚ್ 20 ರಂದು ದೆಹಲಿಯಲ್ಲಿ 'ಕಿಸಾನ್ ಮಹಾಪಂಚಾಯತ್' ನಲ್ಲಿ ಪಾಲ್ಗೊಳ್ಳಲು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಲಕ್ಷಾಂತರ ರೈತರು ದೆಹಲಿಯತ್ತ ಈಗಾಗಲೇ ಆಗಮಿಸುತ್ತಿದ್ದಾರೆ. ಕಳೆದ ತಿಂಗಳ ಸಭೆಯಲ್ಲಿ ಈ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಅದಾದ ಬಳಿಕ ದೇಶದ ವಿವಿಧ ಭಾಗಗಳ ರೈತರು ನಮ್ಮನ್ನು ಸಂಪರ್ಕಿಸಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದವು ಎಂದು ಎಸ್‌ಕೆಎಂ ತಿಳಿಸಿದೆ.
ಈ ಸಂಬಂಧ ಭಾನುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಸಾನ್ ಸಂಯುಕ್ತ ಮೋರ್ಚಾ (ಎಸ್‌ಕೆಎಂ) ನಾಯಕ ದರ್ಶನ್ ಪಾಲ್, ಕೇಂದ್ರ ಸರ್ಕಾರ ಎರಡು ವರ್ಷದ ಹಿಂದೆ 2021 ರಂದು ಡಿಸೆಂಬರ್ ತಿಂಗಳಲ್ಲಿ ಕೃಷಿ ಕಾಯ್ದೆ ಹಿಂಪಡೆಯಿತು. ಆ ವೇಳೆ ಲಿಖಿತವಾಗಿ ನಮಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.
ಅಷ್ಟೇ ಅಲ್ಲದೇ ಭಾರತ ದೇಶಾದ್ಯಂತ ರೈತರು ಎದುರಿಸುತ್ತಿರುವ ಕೃಷಿ ಬಿಕ್ಕಟ್ಟು, ವಿವಿಧ ಸಮಸ್ಯೆಗಳನ್ನು ತಗ್ಗಿಸಲು ಇಲ್ಲವೇ ಪರಿಹರಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಎಂಎಸ್‌ಪಿ ಖಾತರಿಪಡಿಸಿ
ಸಂಯುಕ್ತ ಕಿಸಾನ್ ಮೋರ್ಚಾವು ಕೇಂದ್ರ ಸರ್ಕಾರ ಈಗ ರದ್ದಪಡಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧ ಒಂದು ವರ್ಷದ ಆಂದೋಲನ ಮುನ್ನಡೆಸಿತು. ಆಂದೋಲನದ ಸಮಯದಲ್ಲಿ ರೈತರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿಡಿಸಬೇಕು ಸೇರಿದಂತೆ ರೈತರ ಬಾಕಿ ಉಳಿದಿರುವ ಬೇಡಿಕೆಗಳನ್ನು ಪರಿಗಣಿಸಬೇಕು. ಈ ಸಂಬಂಧ ಕೇಂದ್ರ ಸರ್ಕಾರ ನೀಡಿದ್ದ ಭರವಸೆ ಮೇರೆಗೆ 2021 ವರ್ಷಾಂತ್ಯಕ್ಕೆ ರೈತರ ಪ್ರತಭಟನೆ/ಚಳವಳಿ ಸ್ಥಗಿತಗೊಳಿಸಲಾಯಿತು ಎಂದು ಅವರು ಹಳೆದೆಲ್ಲವನ್ನು ವಿವರಿಸಿದರು.

ಎಸ್‌ಕೆಎಂ ಬೇಡಿಕೆಗಳ ಪಟ್ಟಿಯ ಅಂಶಗಳು ಇವು
ರೈತರ ಬೇಡಿಕೆಗಳಿಗೆ ವ್ಯತಿರಿಕ್ತವಾಗಿ ಕೇಂದ್ರ ಸರ್ಕಾರ ಎಂಎಸ್‌ಪಿ ಸಮಿತಿಯನ್ನು ರಚಿಸಿದೆ. ಹೀಗೆಂದು ಆರೋಪಿಸಿರುವ ವಿಸರ್ಜಿಸಬೇಕು ಎಂದು ಅವರು ಆಗ್ರಹಿಸಿದರು. ನಮ್ಮ ಪಟ್ಟಿಯಲ್ಲಿ ಪಿಂಚಣಿ ಯೋಜನೆ, ರೈತರ ಸಾಲ ಮನ್ನಾ, ರೈತರ ಧರಣಿ ವೇಳೆ ಸಾವನ್ನಪ್ಪಿದವರಿಗೆ ಸೂಕ್ತ ಪರಿಹಾರ, ವಿದ್ಯುತ್ ಬಿಲ್ ಹಿಂಪಡೆಯುವುದು ಕೂಡ ರೈತರ ಬೇಡಿಕೆಗಳು ಇವೆ. ಅವುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಈಡೇರಿಸಬೇಕು ಎಂದು ಪುನರುಚ್ಚರಿಸಿದರು.
ಅದಲ್ಲದೇ ಕೇಂದ್ರವು ವಿದ್ಯುತ್ ತಿದ್ದುಪಡಿ ಮಸೂದೆ-2022 ಅನ್ನು ವಾಪಾಸ್ ಪಡೆಯಬೇಕು. ಕಿಸಾನ್ ಮೋರ್ಚಾ ಜೊತೆಗೆ ಚರ್ಚಿಸಿದ ನಂತರವೇ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಕೇಂದ್ರವು ಲಿಖಿತ ಭರವಸೆ ನೀಡಬೇಕು. ಇಲ್ಲದೇ ಮಸೂದೆ ಮಂಡಿಸಿದರೆ ಅದಕ್ಕೆ ನಮ್ಮ ವಿರೋಧವಿದೆ ಎಂದು ಎಸ್‌ಕೆಎಂ ಎಚ್ಚರಿಕೆ ನೀಡಿದೆ.












Click it and Unblock the Notifications