ಕಿಸಾನ್ ರೈಲಿನ ಮೂಲಕ 49 ಸಾವಿರ ಟನ್ ಕೃಷಿ ಉತ್ಪನ್ನ ರವಾನೆ
ಕಳೆದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ, ಕಿಸಾನ್ ರೈಲ್ವೆ ಮೂಲಕ ಸುಮಾರು 49 ಸಾವಿರ ಟನ್ ಕೃಷಿ ಉತ್ಪನ್ನಗಳನ್ನು ರವಾನಿಸಲಾಗಿದೆ.
ಕೊರೊನಾದ ಮಧ್ಯೆಯೂ ಇಂಥದ್ದೊಂದು ಸಾಧನೆಯನ್ನು ರೈಲ್ವೆ ಇಲಾಖೆ ಮಾಡಿದೆ. ಕೃಷಿ ಇಲಾಖೆ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳೊಂದಿಗೆ ಸೇರಿಕೊಂಡು ಕಿಸಾನ್ ರೈಲು ಸೇವೆಯನ್ನು ಒದಗಿಸಿದೆ.
ಕಳೆದ ಆಗಸ್ಟ್ 7 ರಂದು ಮೊದಲ ಕಿಸಾನ್ ರೈಲು ಆರಂಭವಾಗಿತ್ತು.ಒಟ್ಟು 18 ಮಾರ್ಗಗಳಲ್ಲಿ 157 ಸೇವೆಗಳನ್ನು ಕಿಸಾನ್ ರೈಲು ಒದಗಿಸುತ್ತಿದೆ.

ಇಲ್ಲಿಯವರೆಗೆ ಈರುಳ್ಳಿ, ಟೊಮೆಟೋ, ಕಿತ್ತಳೆ, ಬಟಾಟೆ, ಶೇಂಗಾ, ಬಾಳೆಹಣ್ಣು, ಸೇಬು, ಕ್ಯಾರೇಟ್, ಮೆಣಸು ಸೇರಿ ಇತರೆ ತರಕಾರಿ ಹಾಗೂ ಕೃಷಿ ಉತ್ಪನ್ನಗಳ ಸುಮಾರು 49 ಸಾವಿರ ಟನ್ ಅನ್ನು ಈ ರೈಲಿನಲ್ಲಿ ಸಾಗಿಸಲಾಗಿದೆ.
ಈ ಸಾಗಣೆಗೆ ರೈತರಿಗೆ ನೇರವಾಗಿ ಸಾಗಾಣಿಕೆ ವೆಚ್ಚದ ಶೇ.50ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ.
ಕಳೆದ ಬಜೆಟ್‌ನಲ್ಲಿ ಗೋಷಿಸಿದಂತೆ ಈಗ ಕೇವಲ 18 ಮಾರ್ಗಗಳಲ್ಲಿ ಇರುವುದನ್ನು ದೇಶಾದ್ಯಂತ ಮುಂದುವರೆಸಲು ಯೋಜನೆ ರೂಪಿಸಲಾಗುತ್ತಿದ್ದು, ಶೀಘ್ರದಲ್ಲಿ ಅದು ಕೂಡ ಜಾರಿಗೊಳ್ಳುವ ಸಾಧ್ಯತೆ ಇದೆ.
Recommended Video
ಈ ಬಾರಿಯ ಬಜೆಟ್‌ನಲ್ಲೂ ಕಿಸಾನ್ ರೈಲ್ವೆಗೆ ಇನ್ನಷ್ಟು ಒತ್ತು ನೀಡುವ ಸಾಧ್ಯತೆ ಇದೆ.












Click it and Unblock the Notifications