Ram Madir: ಇದೇ ನ. 16, 17ರಂದು ಶ್ರೀರಾಮ ಮಂದಿರ ಖಲಿಸ್ತಾನಿ ಉಗ್ರರ ಟಾರ್ಗೆಟ್...
ನವದೆಹಲಿ, ನವೆಂಬರ್ 12: ಇದೇ ವರ್ಷ ಆರಂಭದಲ್ಲಿ ಉದ್ಘಾಟನೆಗೊಂಡ ದೇಶದ ಕೋಟ್ಯಾಂತರ ಭಕ್ತಾಧಿಗಳ ಆರಾಧ್ಯ ಶ್ರೀರಾಮ ಮಂದಿರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೆಲೆಗೊಂಡಿರು ಶ್ರೀರಾಮಲಲ್ಲಾ ದೇಗುವು ದೇಶದ ಧಾರ್ಮಿಕ ಕೇಂದ್ರವಾಗುತ್ತಿದೆ. ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಇದೀಗ ಉಗ್ರರ ಟಾರ್ಗೆಟ್ ಆಗಿದೆ.
ಶ್ರಿರಾಮ ಭಕ್ತರಿಗೆ ಇದೊಂದು ಕಹಿ ಸುದ್ದಿಯೂ ಆಗಿದೆ. ಖಲಿಸ್ತಾನಿ ಉಗ್ರರು ಅಯೋಧ್ಯೆ ಶ್ರೀರಾಮಂದಿರ ಮೇಲೆ ಹಾಗೂ ಕೆನಡಾದ ಹಿಂದೂ ದೇವಾಲಯಗಳ ಮೇಲೆ ಇದೇ ನವೆಂಬರ್ 16 ಮತ್ತು 17ರಂದು ದಾಳಿ ನಡೆಸುವುದಾಗಿ ಬೆದರಿಕೆ ನೀಡಿದ್ದಾರೆ. ಈ ಸಂಬಂಧ ಕೆನಡಾ ದೇವಾಲಯಗಳು ಹಾಗೂ ರಾಮಮಂದಿರ ದೇವಾಲಯದ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ.

ಕೇವಲ ಅಯೋಧ್ಯೆ ರಾಮ ಮಂದಿರ ಮಾತ್ರವಲ್ಲದೇ ಕೆನಡಾ ಸೇರಿ ಇತರ ಹಿಂದೂ ದೇವಾಲಯಗಳ ಮೇಲೆ ಇದೇ ತಾರೀಖಿನಲ್ಲಿ ದಾಳಿ ಮಾಡುತ್ತೇವೆ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂನ್ ಬೆದರಿಕೆ ಹಾಕಿದ್ದಾರೆನೆಂದು ವರದಿ ಆಗಿದೆ.
ಇನ್ನೂ ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರಿಗೂ ಸಹ ಅವರಿಗೆ ನೀವು ಕೆನಡಾ ಪರವಾಗಿರಿ ಇಲ್ಲವೇ ಭಾರತ ಬಿಟ್ಟು ತೊಲಗಿ ಎಂದು ಬೆದರಿಕೆ ಒಡ್ಡಿದ್ದಾನೆ.
ಖಲಿಸ್ತಾನಿ ಉಗ್ರರ ವಿಚಾರ ಭಾರತ ಮತ್ತು ಕೆನಡಾ, ಭಾರತ ಮತ್ತು ಅಮರಿಕಾ ಮಧ್ಯೆ ಬಿಕ್ಕಟ್ಟಿಗೆ ಕಾರಣವಾದ ಹೊತಿನ್ನಲಿಯೇ ಅಮೇರಿಕಾದಲ್ಲಿ ಆಶ್ರಯ ಪಡೆದಿರುವ ಈತ ಹಿಂದೂ ದೇವಾಲಯಗಳ ಮೇಲೆ ದಾಳಿಗೆ ಸಂಚು ರೂಪಿಸಿದ್ದರ ಬಗ್ಗೆ ಸ್ವತಃ ಆತನೇ ಬಾಯಿ ಬಿಟ್ಟಿದ್ದಾನೆ.
ಈ ದಿನ ಮಂದಿರಕ್ಕೆ ತೆರಳಬೇಡಿ: ವಿಡಿಯೋ
ಈ ಹಿಂದಿನಿಂದಲೂ ಖಲಿಸ್ತಾನಿ ಉಗ್ರರು ಭಾರತದ ಮೇಲೆ ಒಂದಿಲ್ಲ ಒಂದು ಕಾರಣದಿಂದ ಧಮ್ಕಿ ಹಾಕುತ್ತಲೇ ಬಂದಿದ್ದಾರೆ. ಈ ಬಾರಿ ರಾಮ ಮಂದಿರ ಹಸರಿನಲ್ಲಿ ಬೆದರಿಕೆ ಒಡ್ಡಿದ್ದಾರೆ.
ಅಯೋಧ್ಯೆ ತಳಪಾಯ ಅಲುಗಾಡಿಲಿಸದ್ದೇವೆ. ರಾಮಮಂದಿರ ಸೇರಿ ಕೆನಡಾದ ಕಾಲಿಬರಿ ಮಂದಿರ, ತ್ರಿವೇಣಿ ಮಂದಿರ ಮೇಲೂ ದಾಳಿ ನಡೆಸಲಿದ್ದೇವೆ ಎಂದು ಉಗ್ರ ಪನ್ನೂನ್ ಸಂದೇಶ ರವಾನಿಸಿದ್ದಾನೆ. ಈ ಹಿಂದೆಯು ಇಂತದ್ದೆ ಬೆದರಿಕೆ ಹಾಕಿ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದ. ನಾನು ದಾಳಿ ಮಾಡುವ ದಿನ ಭಾರತೀಯರು ಈ ಮಂದಿರಗಳಿಗೆ ತೆರಳಬೇಡಿ ಎಂದು ಆತ ವಿಡಿಯೋದಲ್ಲಿ ಹೇಳಿದ್ದಾನೆ.












Click it and Unblock the Notifications