ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ದುಡಿಯುವ ಕೈಗಳಿಗೆ ಸಿಕ್ಕಿತೇ ಲಾಭ.?

|
Google Oneindia Kannada News

ನವದೆಹಲಿ, ಮೇ 13: ಕೋವಿಡ್-19 ವಿರುದ್ಧ ಹೋರಾಡಲು ಭಾರತೀಯರಿಗೆ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಅನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ಬರೋಬ್ಬರಿ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ನ ಮೊದಲ ಭಾಗದಲ್ಲಿ ಎಂ.ಎಸ್.ಎಂ.ಇ, ಇ.ಪಿ.ಎಫ್, ಎನ್.ಬಿ.ಎಫ್.ಸಿ, ಎಚ್.ಎಫ್.ಸಿ, ಎಂ.ಎಫ್.ಐ, ಡಿಸ್ಕಾಂಗಳಿಗೆ ವಿಶೇಷ ಪ್ಯಾಕೇಜ್ ಗಳನ್ನು ನಿನ್ನೆಯಷ್ಟೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅನೌನ್ಸ್ ಮಾಡಿದ್ದರು.

20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ಯಾರಿಗೆ ಸಿಕ್ತು ಲಾಭದ ಪಾಲು.?20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ಯಾರಿಗೆ ಸಿಕ್ತು ಲಾಭದ ಪಾಲು.?

ಆರ್ಥಿಕ ಪ್ಯಾಕೇಜ್ ನ ಎರಡನೇ ಭಾಗದ ವಿವರಗಳನ್ನು ಇಂದು ಸಂಜೆ 4 ಗಂಟೆಗೆ ನಡೆದ ಸುದ್ಧಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ನೀಡಿದರು.

20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ನ ಎರಡನೇ ಕಂತು ವಲಸೆ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಸಣ್ಣ ರೈತರ ಮೇಲೆ ಕೇಂದ್ರೀಕೃತವಾಗಿದೆ.

ವಲಸೆ ಕಾರ್ಮಿಕರಿಗೆ ಸಿಕ್ಕಿದ ಕೊಡುಗೆ ಏನು.?

ವಲಸೆ ಕಾರ್ಮಿಕರಿಗೆ ಸಿಕ್ಕಿದ ಕೊಡುಗೆ ಏನು.?

* ದೇಶದೆಲ್ಲೆಡೆ ವಲಸೆ ಕಾರ್ಮಿಕರು ಮನ್ ರೇಗಾದಲ್ಲಿ ಸೇರ್ಪಡೆಯಾಗಲು ಅವಕಾಶ.
* ಮನ್ ನರೇಗಾದ ದಿನಗೂಲಿ 182 ರಿಂದ 202 ರೂಪಾಯಿಗೆ ಏರಿಕೆ ಮಾಡಲಾಗಿದೆ.
* ಅಂತಾರಾಜ್ಯ ವಲಸಿಗ ಕಾರ್ಮಿಕರಿಗೆ ಕನಿಷ್ಠ ವೇತನ ಕಾನೂನು ಜಾರಿ.
* ಎಲ್ಲಾ ಜಿಲ್ಲೆಗಳಿಗೆ ESIC ಸೌಲಭ್ಯ ವಿಸ್ತರಣೆ.
* 'ಒಂದು ಭಾರತ ಏಕ ವೇತನ' ಪದ್ಧತಿ ಜಾರಿ.

ನೌಕರರಿಗೆ ಸಿಕ್ಕಿದ್ದೇನು.?

ನೌಕರರಿಗೆ ಸಿಕ್ಕಿದ್ದೇನು.?

* ಎಲ್ಲಾ ಕೆಲಸಗಾರರಿಗೆ ನೇಮಕಾತಿ ಪತ್ರ ಕೊಡಬೇಕು.
* ಕನಿಷ್ಟ 10 ಜನ ಕೆಲಸಗಾರರನ್ನು ಹೊಂದಿರುವ ಸಂಸ್ಥೆಗಳಿಗೂ ESIC ಸೌಲಭ್ಯ ವಿಸ್ತರಣೆ.
* ಅಪಾಯಕಾರಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ESIC ಕಡ್ಡಾಯ.
* ನೌಕರರಿಗೆ ವಾರ್ಷಿಕ ಆರೋಗ್ಯ ತಪಾಸಣೆ ನಡೆಸಬೇಕು.
* ಉದ್ಯೋಗ ಕಳೆದುಕೊಂಡವರಿಗೆ ಸರ್ಕಾರದಿಂದ ಮರುಕೌಶಲ್ಯ ತರಬೇತಿ.
* ಸಕಲ ಸುರಕ್ಷತೆಯೊಂದಿಗೆ ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸ ಮಾಡಲು ಅವಕಾಶ.
* ಗ್ರ್ಯಾಚ್ಯುಟಿ ಅವಧಿ ಐದು ವರ್ಷದಿಂದ ಒಂದು ವರ್ಷಕ್ಕೆ ಇಳಿಕೆ.
* ಅಸಂಘಟಿತ ಕಾರ್ಮಿಕ ವಲಯಕ್ಕೆ ಸೋಷಿಯಲ್ ಸೆಕ್ಯೂರಿಟಿ ಫಂಡ್.

ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ

ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ

* ಮುಂದಿನ ಎರಡು ತಿಂಗಳಿಗೆ ಎಲ್ಲಾ ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ. ವಿತರಣೆ
* ಪಡಿತರ ಕಾರ್ಡ್ ಇಲ್ಲದ ಕಾರ್ಮಿಕರಿಗೂ 5 ಕೆ.ಜಿ ಅಕ್ಕಿ/ಗೋಧಿ, 1 ಕೆ.ಜಿ ಬೇಳೆ ವಿತರಣೆ
* ರಾಜ್ಯ ಸರ್ಕಾರಗಳಿಂದ ವಲಸೆ ಕಾರ್ಮಿಕರಿಗೆ ಪಡಿತರ ನೀಡಲು ಆದ್ಯತೆ. ಇದರಿಂದ 8 ಕೋಟಿ ವಲಸಿಗ ಕಾರ್ಮಿಕರಿಗೆ ನೆರವಾಗಲಿದೆ. ಪಡಿತರ ಧಾನ್ಯ ವಿತರಣೆಗೆ 3500 ಕೋಟಿ ರೂಪಾಯಿ ಮೀಸಲು.
* ರಾಷ್ಟ್ರೀಯ ಪೋರ್ಟಬಿಲಿಟಿ ಕಾರ್ಡ್ ಮೂಲಕ 'ಒಂದು ದೇಶ, ಒಂದು ರೇಷನ್ ಕಾರ್ಡ್' ಯೋಜನೆ ಜಾರಿ. ಇದರಿಂದ ಯಾವುದೇ ರಾಜ್ಯದಲ್ಲಾದರೂ ಆಹಾರ ಧಾನ್ಯ ಪಡೆಯಬಹುದು. ದೇಶದ 67 ಕೋಟಿ ಜನರಿಗೆ ಇದರಿಂದ ಪ್ರಯೋಜನ.

ವಲಸೆ ಕಾರ್ಮಿಕರಿಗೆ ಸೂರು

ವಲಸೆ ಕಾರ್ಮಿಕರಿಗೆ ಸೂರು

* ಬಾಡಿಗೆ ಮನೆಯಲ್ಲಿ ನೆಲೆಸಲು ವಲಸೆ ಕಾರ್ಮಿಕರಿಗೆ ನಿರ್ದಿಷ್ಟ ಬಾಡಿಗೆ ಫಿಕ್ಸ್
* ಕೈಗಾರಿಕೆಗಳಿಗೆ ತಮ್ಮ ಸ್ವಂತ ಜಾಗದಲ್ಲಿ ಬಾಡಿಗೆ ಮನೆ ನಿರ್ಮಾಣಕ್ಕೆ ಅವಕಾಶ.
* ಕೈಗಾರಿಕೆಗಳು ಮನೆಗಳನ್ನು ನಿರ್ಮಿಸಲು ಸರ್ಕಾರದಿಂದ ನೆರವು.

ಮುದ್ರಾ ಶಿಶು ಸಾಲ

ಮುದ್ರಾ ಶಿಶು ಸಾಲ

* ಮುದ್ರಾ ಶಿಶು ಸಾಲ ಯೋಜನೆಯಲ್ಲಿ 50 ಸಾವಿರದವರೆಗೆ ಸಾಲ ಸೌಲಭ್ಯ ಸಿಗಲಿದೆ.
* ಮುದ್ರಾ ಶಿಶು ಸಾಲ ಪಡೆದವರ 2% ಬಡ್ಡಿ ಕೇಂದ್ರ ಸರ್ಕಾರ ಭರಿಸುತ್ತೆ.
* ಇದಕ್ಕಾಗಿ 1500 ಕೋಟಿ ಮೀಸಲು.

ಬೀದಿಬದಿ ವ್ಯಾಪಾರಿಗಳಿಗೆ ಸಿಕ್ಕಿದ್ದೇನು.?

ಬೀದಿಬದಿ ವ್ಯಾಪಾರಿಗಳಿಗೆ ಸಿಕ್ಕಿದ್ದೇನು.?

* 50 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ 5 ಸಾವಿರ ಕೋಟಿ ರೂಪಾಯಿ ನೆರವು.
* ಸುಲಭ ವಿಧಾನದಲ್ಲಿ 10 ಸಾವಿರದವರೆಗೆ ಸಾಲ ಸೌಲಭ್ಯ.

ಮಧ್ಯಮ ವರ್ಗದ ಜನರಿಗೆ ಲಭಿಸಿದ್ದೇನು.?

ಮಧ್ಯಮ ವರ್ಗದ ಜನರಿಗೆ ಲಭಿಸಿದ್ದೇನು.?

* ಮಧ್ಯಮ ವರ್ಗದ ಜನರಿಗೆ ಗೃಹ ಸಾಲ ಸಬ್ಸಿಡಿ ಸ್ಕೀಮ್.
* ವಾರ್ಷಿಕ 6-18 ಲಕ್ಷದವರೆಗಿನ ಸಂಬಳದಾರರಿಗೆ ಈ ಯೋಜನೆಯಿಂದ ಅನುಕೂಲ.
* ಮಾರ್ಚ್ 2021 ರವರೆಗೆ ಜಾರಿಯಲ್ಲಿರುವ ಯೋಜನೆ.
* ಇದಕ್ಕಾಗಿ 70 ಸಾವಿರ ಕೋಟಿ ರೂಪಾಯಿ ಮೀಸಲು.
* 2.5 ಲಕ್ಷ ಕುಟುಂಬಗಳಿಗೆ ಉಪಯೋಗ ಆಗಲಿದೆ.
* ಗೃಹ ಸಾಲ ಸಬ್ಸಿಡಿ ಸ್ಕೀಮ್ ನಿಂದ ಸಿಮೆಂಟ್, ಕಬ್ಬಿಣ, ಮರಳು ಉದ್ಯಮಕ್ಕೆ ಪ್ರೋತ್ಸಾಹ.

ಅನ್ನದಾತನಿಗೆ ಸಿಕ್ಕ ಕೊಡುಗೆ ಏನು.?

ಅನ್ನದಾತನಿಗೆ ಸಿಕ್ಕ ಕೊಡುಗೆ ಏನು.?

* ನಬಾರ್ಡ್ ಮೂಲಕ ರೈತರಿಗೆ 30 ಸಾವಿರ ಕೋಟಿ ಹೆಚ್ಚುವರಿ ತುರ್ತು ಸಾಲ ನೀಡಲಾಗುವುದು.
* ಇದರಿಂದ 3 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲ ಆಗಲಿದೆ.
* ಕಿಸಾನ್ ಕ್ರೆಡಿಟ್ ಕಾರ್ಡ್ ಇಲ್ಲದ 2.5 ಕೋಟಿ ರೈತರಿಗೆ 2 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗುವುದು.
* ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯಾಪ್ತಿಗೆ ಪಶು ಸಂಗೋಪನಾ ಮತ್ತು ಮೀನುಗಾರರ ಸೇರ್ಪಡೆ.
* ಮಾರ್ಚ್ 1 ಕ್ಕಿದ್ದ ಬೆಳೆ ಸಾಲದ ಮೇಲಿನ ಕಂತು ಪಾವತಿಯ ಅಂತಿಮ ದಿನಾಂಕ ಮೇ 31 ಕ್ಕೆ ವಿಸ್ತರಣೆ.
* ಬುಡಕಟ್ಟು ಮತ್ತು ಆದಿವಾಸಿಗಳಿಗೆ ಉದ್ಯೋಗ ಸೃಷ್ಟಿ.

English summary
20 Lakh Crore Economic Package: Key Highlights of Nirmala Sitharaman's second pressmeet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X