ಗರ್ಭಿಣಿ ಹೊಟ್ಟೆಗೆ ಒದ್ದು ಗರ್ಭಪಾತ ಮಾಡಿದ ಕೇರಳದ ಸಿಪಿಎಂ ನಾಯಕ!

ಕೊಞಕೊಡೆ, ಫೆಬ್ರವರಿ 15: ಕೇರಳದ ಕೊಞಕೊಡೆ ಎಂಬಲ್ಲಿ ಸಿಪಿಎಂ ನಾಯಕನೊಬ್ಬನ ಗರ್ಭಿಣಿಯ ಹೊಟ್ಟೆಗೆ ಒದ್ದ ಪರಿಣಾಮ ಆಕೆಗೆ ಗರ್ಭಪಾತವಾದ ಘಟನೆ ನಡೆದಿದೆ.

ತಮ್ಮ ಪತಿ ಮತ್ತು ನೆರೆಮನೆಯ ಇಬ್ಬರು ವ್ಯಕ್ತಿಗಳ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ತೆರಳಿದ ಸಂದರ್ಭದಲ್ಲಿ ಅದನ್ನು ತಡೆಯಲು ನಾಲ್ಕು ತಿಂಗಳ ಗರ್ಭಿಣಿ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ನೆರಮನೆಯ ಇಬ್ಬರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ(ಎಂ)) ನಾಯಕನೂ ಒಬ್ಬ ಇದ್ದ. ಗಲಾಟೆ ತಡೆಯುವುದಕ್ಕೆ ಹೋದ 30 ವರ್ಷ ವಯಸ್ಸಿನ ಗರ್ಭಿಣಿಯ ಹೊಟ್ಟೆಗೆ ಈತ ಒದ್ದ ಪರಿಣಾಮ ಆಕೆ ನೋವು ತಡೆಯಲಾರದೆ ಬಿದ್ದು, ಒದ್ದಾಡಿದ್ದಾರೆ.

ನಂತರ ರಕ್ತಸ್ರಾವ ಆರಂಭವಾಗಿದ್ದು, ಆತಂಕಗೊಂಡ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಬಲವಾದ ಏಟು ಬಿದ್ದಿದ್ದರಿಂದ ಗರ್ಭಪಾತ ಮಾಡಲೇಬೇಕೆಂದು ವೈದ್ಯರು ಹೇಳಿದ್ದಾರೆ.

Kerala: Woman forced to undergo abortion after CPM leader kicks her

ವಿಷಯ ತಿಳಿಯುತ್ತಿದ್ದಂತೆಯೇ ಆರೋಪಿಗಳಿಬ್ಬರಲ್ಲಿ ಒಬ್ಬನನ್ನು ಪೊಲಿಸರು ಬಂಧಿಸಿದ್ದು, ಇನ್ನೊಬ್ಬ ಪ್ರಮುಖ ಆರೋಪಿ, ಸಿಪಿಎಂ ಮುಖ್ಯಸ್ಥ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+