25 ಕೋಟಿ ರೂಪಾಯಿ ಲಾಟರಿ ಗೆದ್ದ ಕನ್ನಡಿಗ: ಕೇರಳದಲ್ಲಿ ಸಿಕ್ಕಿತು ಬಂಪರ್...
25 ಕೋಟಿ ರೂಪಾಯಿ ಲಾಟರಿ.. ನಿಮ್ಮ ಜೀವನದಲ್ಲಿ ಈ ರೀತಿಯ ಸುದ್ದಿ ಕೇಳಿದರೆ ಆಗ ನಿಮಗೆ ಹೇಗೆ ಆಗಬೇಡ ಹೇಳಿ? ಹೌದು, ಇಂತಹದೊಂದು ಘಟನೆ ಪ್ರತಿವರ್ಷ ಕೂಡ ಬಂದೇ ಬರುತ್ತದೆ. ಅದರಲ್ಲೂ ಈ ಸುದ್ದಿ ಕೇಳಿ ಬರುವುದು ನಮ್ಮ ಕರ್ನಾಟಕ ರಾಜ್ಯದಲ್ಲಿ ಅಲ್ಲ, ಈ ಸುದ್ದಿ ಕೇಳಿ ಬರುವುದು ಕರ್ನಾಟಕದ ಪಕ್ಕದ ರಾಜ್ಯ ಕೇರಳದಲ್ಲಿ. ಅಂದಹಾಗೆ ಈ ಬಾರಿ ಕೂಡ ಕೇರಳದ ಲಾಟರಿ ಲಕ್ಷ್ಮೀ ಬಡ ವ್ಯಕ್ತಿಯ ಮನೆಗೆ ಒಲಿದು ಬಂದಿದ್ದಾಳೆ. ಓಣಂ ಹಬ್ಬದ ಹಿನ್ನೆಲೆಯಲ್ಲಿ ಕೇರಳದಲ್ಲಿ ನಡೆಸುವ ಬಂಪರ್ ಲಾಟರಿ ಇದೀಗ ಕನ್ನಡಿಗನಿಗೆ ಒಲಿದಿದೆ!
ಹೌದು, ಕೋಟಿ ಕೋಟಿ ರೂಪಾಯಿ ದುಡಿಯಬೇಕು. ಕೋಟ್ಯಧಿಪತಿ ಆಗಿ, ಮನೆ ತುಂಬಾ ದುಡ್ಡು ತುಂಬಿಸಬೇಕು ಅನ್ನೋ ಆಸೆ ಪ್ರತಿಯೊಬ್ಬರಿಗೆ ಕೂಡ ಇದ್ದೇ ಇರುತ್ತದೆ. ಆದರೆ ಈ ಆಸೆ ಈಡೇರುವುದು ಅದೃಷ್ಟ ಇದ್ದವರಿಗೆ ಮಾತ್ರ. ಅದರಲ್ಲೂ ದುಡಿಯುತ್ತಾ ಕೂತರೆ ನಾವು ಕೋಟಿ ರೂಪಾಯಿ ಗಳಿಸುವುದು ಕಷ್ಟ ಎಂಬುದು ಬಹುತೇಕರ ವಾದ. ಆದರೆ ಸರಿಯಾದ ರೀತಿ ದುಡಿದು ಉಳಿತಾಯ ಮಾಡಿದರೆ ಕೋಟಿ ಕೋಟಿ ಉಳಿಸಬಹುದು ಎಂಬುದು ಇನ್ನೂ ಕೆಲ ಆರ್ಥಿಕ ತಜ್ಞರ ವಾದ. ಇಷ್ಟೆಲ್ಲದರ ನಡುವೆ ದಿಢೀರ್ ಲಾಟರಿಯಲ್ಲಿ ಕೋಟಿ, ಕೋಟಿ ರೂಪಾಯಿ ಹಣ ದುಡ್ಡು ಬಂದುಬಿಟ್ಟರೆ ಏನು ಮಾಡೋದು? ಇಂತಹದ್ದೇ ಪರಿಸ್ಥಿತಿ ಇದೀಗ ಕನ್ನಡಿಗನಿಗೂ ಬಂದಿದೆ!

ಕನ್ನಡಿಗನಿಗೆ ಒಲಿದು ಬಂದ ಲಾಟರಿ!
ಅಂದಹಾಗೆ ಓಣಂ ಹಬ್ಬದ ಹಿನ್ನೆಲೆ ಕೇರಳ ರಾಜ್ಯದಲ್ಲಿ ನಡೆಸುವ ಬಂಪರ್ ಲಾಟರಿ ಈಗ ನಮ್ಮ ಕನ್ನಡ ನಾಡಿನ ವ್ಯಕ್ತಿಗೆ ಒಲಿದು ಬಂದಿದೆ. 2024ನೇ ಸಾಲಿನ ಓಣಂ ಬಂಪರ್ ಲಾಟರಿಯಲ್ಲಿ ಮೊದಲ ಬಹುಮಾನ 25 ಕೋಟಿ ರೂಪಾಯಿ ಆಗಿತ್ತು. ಹಾಗೇ 2ನೇ ಬಹುಮಾನದ ಮೂಲಕ 20 ಜನರಿಗೆ 1 ಕೋಟಿ ರೂಪಾಯಿ ಬಹುಮಾನದ ಹಣ ನೀಡುತ್ತಾರೆ. ಈ ಪೈಕಿ ಇದೀಗ ನಮ್ಮ ಕನ್ನಡ ನಾಡಿನ ಮೂಲದ ವ್ಯಕ್ತಿಗೆ ಮೊದಲನೇ ಬಹುಮಾನ 25 ಕೋಟಿ ರೂಪಾಯಿ ಒಲಿದು ಬಂದಿದೆ. ಅಲ್ತಾಫ್ ಎಂಬುವವರಿಗೆ ಈ ಲಾಟರಿ ಒಲಿದು ಬಂದಿದೆ.
15 ವರ್ಷಗಳಿಂದ ಲಾಟರಿ ಆಡುತ್ತಿದ್ದರು!
ಅಂದಹಾಗೆ ಕೇರಳದಲ್ಲಿ ಓಣಂ ಲಾಟರಿಯ ಟಿಕೆಟ್ ಬೆಲೆ ಈ ಬಾರಿ 500 ರೂಪಾಯಿಗೆ ಫಿಕ್ಸ್ ಮಾಡಲಾಗಿತ್ತು. ಈ ಮೂಲಕ ಮೊದಲನೇ ಬಹುಮಾನ ಎಂದು 25 ಕೋಟಿ ರೂಪಾಯಿಯ ಬಹುಮಾನ ಮೊತ್ತ ಫಿಕ್ಸ್ ಆಗಿತ್ತು. ಇದೀಗ ಕರ್ನಾಟಕ ಮೂಲದ ವ್ಯಕ್ತಿಗೆ ಈ ಬಹುಮಾನ ಒಲಿದು ಬಂದಿದ್ದು, ಕಳೆದ 15 ವರ್ಷಗಳಿಂದಲು ಲಾಟರಿ ಆಡುತ್ತಿದ್ದ ಕರ್ನಾಟಕ ಮೂಲದ ಅಲ್ತಾಫ್ ಎಂಬುವವರಿಗೆ ಬರೋಬ್ಬರಿ 25 ಕೋಟಿ ರೂಪಾಯಿ ಲಾಟರಿ ಒಲಿದಿದೆ. ಕೇರಳದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಇದೀಗ ಓಣಂ ಲಾಟರಿ ಗೆದ್ದ ನಂಬರ್ ಯಾವುದು ಎಂಬ ವಿಚಾರವನ್ನ ಘೋಷಣೆ ಮಾಡಿದ್ದಾರೆ.












Click it and Unblock the Notifications