ವಿಡಿಯೋ; ಕೇರಳದ ಸೆಮಿ-ಹೈಸ್ಪೀಡ್ ರೈಲು ಯೋಜನೆ; ದೆಹಲಿಯಲ್ಲಿ ಹೈಡ್ರಾಮ

ನವದೆಹಲಿ, ಮಾರ್ಚ್ 24; ಕೇರಳದ ಸಿಲ್ವರ್ ಲೈನ್ ರೈಲು ಯೋಜನೆ ವಿರೋಧಿ ರಾಜಕೀಯ ಹೋರಾಟ ದೆಹಲಿ ತಲುಪಿದೆ. ಸೆಮಿ ಹೈಸ್ಪೀಡ್ ರೈಲು ಯೋಜನೆ ವಿರೋಧಿಸಿ ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸುವಾಗ ಸಂಸತ್ ಭವನದ ಮುಂದೆ ಹೈಡ್ರಾಮ ನಡೆದಿದೆ.

ಯೋಜನೆ ವಿರೋಧಿಸಿ ಸಂಸದರು ಪ್ರತಿಭಟನೆ ನಡೆಸುವಾಗ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಕೇರಳ ಸರ್ಕಾರದ ತಿರುವನಂತಪುರಂ-ಕಾಸರಗೋಡು ಸೆಮಿ-ಹೈಸ್ಪೀಡ್ ರೈಲು ಯೋಜನೆ (ಸಿಲ್ವರ್ ಲೇನ್) ಯೋಜನೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ.

ವಿಜಯ್ ಚೌಕ್‌ನಲ್ಲಿ ಕೇರಳದ ಕಾಂಗ್ರೆಸ್ ಸಂಸದರು ಯೋಜನೆ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದರು. ಬಳಿಕ ಸಂಸತ್ ಭವನಕ್ಕೆ ಪಾದಯಾತ್ರೆ ಆರಂಭಿಸಿದರು. ಆಗ ಪೊಲೀಸರು ಸಂಸದರನ್ನು ತಡೆದರು.

Kerala SilverLine Semi Rail Project High Drama In Delhi

ಪೊಲೀಸರು ಕಾಂಗ್ರೆಸ್ ಸಂಸದರನ್ನು ತಳ್ಳಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಪಾದಯಾತ್ರೆ ತಡೆದಿದ್ದು ಏಕೆ? ಎಂದು ಎರ್ನಾಕುಲಂ ಸಂಸದರು ಪ್ರಶ್ನಿಸಿದ್ದಕ್ಕೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಕಾಂಗ್ರೆಸ್ ಸಂಸದ ಕೆ. ಸುರೇಶ್‌ ಮಾತನಾಡಿ, "ನಾವು 12 ಸಂಸದರು ವಿಜಯ್‌ ಚೌಕದಿಂದ ಸಂಸತ್ ಭವನಕ್ಕೆ ಪಾದಯಾತ್ರೆ ಹೊರಟಿದ್ದೆವು. ಇದು ಕೇರಳ ಜನರ ವಿರುದ್ಧದ ಯೋಜನೆಯಾಗಿದ್ದು, ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ ದೆಹಲಿ ಪೊಲೀಸರು ನಮ್ಮ ಮೇಲೆ ಹಲ್ಲೆ ಮಾಡಿದರು" ಎಂದರು.

ರಾಜ್ಯಸಭಾ ಸದಸ್ಯ ಕೆ. ಸಿ. ವೇಣುಗೋಪಾಲ್ ಟ್ವೀಟ್ ಮಾಡಿದ್ದು, ಪೊಲೀಸರು ಸಂಸದರನ್ನು ತಳ್ಳುವುದು ವಿಡಿಯೋದಲ್ಲಿ ದಾಖಲಾಗಿದೆ. ಕಾಂಗ್ರೆಸ್ ಸಂಸದರ ಆರೋಪದ ಬಳಿಕ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಂಸದರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಘಟನೆ ಬಗ್ಗೆ ಮಾಹಿತಿ ಪಡೆದರು.

ದೆಹಲಿ ಪೊಲೀಸ್ ಆಯುಕ್ತರಿಗೆ ತಮ್ಮನ್ನು ಭೇಟಿಯಾಗುವಂತೆ ಸ್ಪೀಕರ್ ಸೂಚನೆ ನೀಡಿದ್ದು, ಘಟನೆ ಬಗ್ಗೆ ತನಿಖೆ ನಡೆಸುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+