ಕೇರಳದಲ್ಲಿ ವರುಣನ ರುದ್ರನರ್ತನ: ಮೃತರ ಸಂಖ್ಯೆ 29 ಕ್ಕೇರಿಕೆ

Recommended Video

      ಕೇರಳದಲ್ಲಿ ವರುಣನ ರುದ್ರನರ್ತನ , ಮೃತರ ಸಂಖ್ಯೆ 29 ಕ್ಕೇರಿಕೆ | Oneindia kannada

      ತಿರುವನಂತಪುರಂ, ಆಗಸ್ಟ್ 11: ಕೇಳದಲ್ಲಿ ಕಳೆದ ಕೆಲವು ದಿನಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಮೃತರಾದವರ ಸಂಖ್ಯೆ 29 ಕ್ಕೇರಿದೆ.

      ಇಲ್ಲಿನ ಪ್ರಸಿದ್ಧ ಇಡುಕ್ಕಿ ಜಲಾಶಯದ ಭರ್ತಿಯಾಗಿದ್ದರಿಂದ(ಗರಿಷ್ಠ 2403 ಅಡಿ- ಸದ್ಯದ ಮಟ್ಟ 2401 ಅಡಿ) ಎಲ್ಲಾ ಐದು ಶಟರ್ ಗಳನ್ನು ತೆರೆಯಲಾಗಿದ್ದು ನದಿ ಪಾತ್ರದ ಜನರಿಗೆ ಸುರಕ್ಷಿತ ತಾಣಗಳಿಗೆ ತೆರಳಲು ಸೂಚಿಸಲಾಗಿದೆ.

      ಕೇರಳ ಪ್ರಸಿದ್ಧ ಪ್ರವಾಸೀ ತಾಣವಾಗಿರುವದರಿಂದ ಇಲ್ಲಿಗೆ ಬಂದ ಪ್ರವಾಸಿಗರ ಸ್ಥಿತಿಯೂ ಅತಂತ್ರವಾಗಿದೆ. ಮುನ್ನಾರ್ ನ ರೆಸಾರ್ಟ್ ವೊಂದರಲ್ಲಿ ಸಿಲುಕಿಕೊಂಡ 60 ಕ್ಕೂ ಹೆಚ್ಚು ಜನರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಇವರಲ್ಲಿ ಇಪ್ಪತ್ತು ವಿದೇಶಿ ಪ್ರವಾಸಿಗರಿಂದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

      Kerala Rains and Floods continuous today also

      ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸವಿದ್ದ 10 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ತಂಡಗಳು ಹಗಲಿರುಳೆನ್ನದೆ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಕೇಂದ್ರ ಮತ್ತು ದೇಶದ ಹಲವು ರಾಜ್ಯಗಳು ಕೇರಳಕ್ಕೆ ನೆರವಿನ ಹಸ್ತ ಚಾಚಿವೆ.

      ಕೇರಳದಲ್ಲಿ ಮಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇಂದು ಸಹ ವರುಣನ ಆರ್ಭಟ ಮುಂದುವರಿಯುವ ಸಾಧ್ಯತೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+