ಕೇರಳ ಪ್ರವಾಹ: ಆಗಸ್ಟ್ 26ರವರೆಗೆ ಕೊಚ್ಚಿ ಏರ್‌ಪೋರ್ಟ್ ಬಂದ್
ಬೆಂಗಳೂರು, ಆಗಸ್ಟ್ 17: ಕೇರಳದಲ್ಲಿ ಪ್ರವಾಹದಿಂದಾಗಿ ಕೊಚ್ಚಿ ಏರ್‌ಪೋರ್ಟ್ ಜಲಾವೃತವಾಗಿದ್ದು, ಆಗಸ್ಟ್ 26ರವರೆಗೆ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.
ಮಳೆಯ ಭೀಕರತೆಗೆ ಕೇರಳ ನಲುಗಿದೆ, ಎಲ್ಲೆಂದರಲ್ಲಿ ಮರಗಳ ರೀತಿ ಮನೆಗಳು ಉರುಳಿವೆ, ಪ್ರವಾಹದಿಂದಾಗಿ ಕೊಚ್ಚಿ ಏರ್‌ಪೋರ್ಟ್‌ಗೂ ನೀರು ನುಗ್ಗಿದೆ. ಹಾಗಾಗಿ ಆಗಸ್ಟ್ 26ರ ಮಧ್ಯಾಹ್ನ 2 ಗಂಟೆಯವರೆಗೆ ಕೊಚ್ಚಿ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗುತ್ತಿದೆ.
ತ್ರಿವೆಂಡ್ರಮ್, ಕ್ಯಾಲಿಕಟ್ ವಿಮಾನ ನಿಲ್ದಾಣಗಳು ಲಭ್ಯವಿರಲಿವೆ, ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಇದೇ ರೀತಿ ಪ್ರವಾಹ ಮುಂದುವರೆದರೆ ಇನ್ನೂ ಕೆಲವು ದಿನಗಳ ಕಾಲ ವಿಸ್ತರಿಸಲಾಗುತ್ತದೆ. ಕೊಚ್ಚಿ ವಿಮಾನನಿಲ್ದಾಣವು ಕೂಡ ಜಲಾವೃತವಾಗಿದೆ.

ತ್ರಿವೆಂಡ್ರಮ್ ಹಾಗೂ ಕ್ಯಾಲಿಕಟ್‌ನಿಂದ ಹೆಚ್ಚುವರಿ ವಿಮಾನ ವ್ಯವಸ್ಥೆ ಮಾಡಲಾಗಿದೆ. ವಿದೇಶಿ ವಿಮಾನಗಳಾದ ಏರ್ ಏಷಿಯಾ ಬರ್ಹದ್, ಗಲ್ಫ್ ಏರ್, ಕುವಾಯಿತ್ ಏರ್‌ಲೈನ್ಸ್, ಮಲಿಂಡೊ, ಸಿಲ್ಕ್ ಏರ್ ವಿಮಾನಗಳ ಕೊಚ್ಚಿನ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
ಒಡಿಶಾ ಸರ್ಕಾರವು ಕೇರಳಕ್ಕೆ 5 ಕೋಟಿ, ಕರ್ನಾಟಕ ಸರ್ಕಾರವು 10 ಕೋಟಿ ರೂ.ಗಳ ನೆರವು ನೀಡಿದೆ.












Click it and Unblock the Notifications