ಕೇರಳ ಚುನಾವಣೆ ಫಲಿತಾಂಶ 2026: ಆರಂಭಿಕ ಟ್ರೆಂಡ್‌ನಲ್ಲಿ ಮ್ಯಾಜಿಕ್ ನಂಬರ್ ದಾಟಿದ ಯುಡಿಎಫ್, ಎಲ್‌ಡಿಎಫ್‌ಗೆ ಭಾರೀ ಹಿನ್ನಡೆ
ತಿರುವನಂತಪುರಂ:
ಕುತೂಹಲ ಕೆರಳಿಸಿರುವ ಕೇರಳ ವಿಧಾನಸಭಾ ಚುನಾವಣೆ 2026ರ ಮತ ಎಣಿಕೆ ಕಾರ್ಯ ಭರದಿಂದ ಸಾಗುತ್ತಿದ್ದು, ಲಭ್ಯವಾಗಿರುವ ಆರಂಭಿಕ ಟ್ರೆಂಡ್‌ಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮ್ಯಾಜಿಕ್ ನಂಬರ್ ದಾಟುವ ಮೂಲಕ ಭರ್ಜರಿ ಮುನ್ನಡೆ ಸಾಧಿಸಿದೆ. ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವ ಕನಸು ಕಂಡಿದ್ದ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತಾರೂಢ ಎಲ್‌ಡಿಎಫ್ (LDF) ಒಕ್ಕೂಟಕ್ಕೆ ಆರಂಭಿಕ ಹಂತದಲ್ಲಿ ಭಾರೀ ಹಿನ್ನಡೆಯಾಗಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>140
ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೇರಳದಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 71. ಅಂಕಿ-ಅಂಶಗಳ ಪ್ರಕಾರ, ಯುಡಿಎಫ್ ಮೈತ್ರಿಕೂಟವು ಬಹುಮತದ ಗಡಿಯನ್ನು ಸುಲಭವಾಗಿ ದಾಟಿ ಮುನ್ನುಗ್ಗುತ್ತಿದೆ. ಅಂಚೆ ಮತಗಳ ಎಣಿಕೆ ಮುಕ್ತಾಯಗೊಂಡು ಇವಿಎಂ (EVM) ಮತಯಂತ್ರಗಳ ಎಣಿಕೆ ಆರಂಭವಾಗುತ್ತಿದ್ದಂತೆಯೇ ಬಹುತೇಕ ಕ್ಷೇತ್ರಗಳಲ್ಲಿ (94) ಯುಡಿಎಫ್ ಅಭ್ಯರ್ಥಿಗಳು ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಎಲ್‌ಡಿಎಫ್ ಮೈತ್ರಿಕೂಟವು (40) ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡುವಲ್ಲಿ ವಿಫಲವಾಗುತ್ತಿರುವುದು ಸ್ಪಷ್ಟವಾಗಿದೆ. id='are-slot-2' class='oiad oi-axt oiadv'>












Click it and Unblock the Notifications