ಸೋನಿಯಾ ಗಾಂಧಿ ವಿರುದ್ಧ 420 ಕೇಸ್ ದಾಖಲು

Posted By:
Subscribe to Oneindia Kannada

ತಿರುವನಂತಪುರಂ, ಜೂನ್ 08: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಕೇರಳ ಮೂಲದ ಪ್ರಮುಖ ಕಟ್ಟಡ ನಿರ್ಮಾಣ ಸಂಸ್ಥೆಯೊಂದು 420 ಕೇಸ್ ದಾಖಲಿಸಿದೆ. ಪ್ರಮುಖ ಆರೋಪಿ ಸೋನಿಯಾ ವಿರುದ್ಧ ಎಫ್ ಐಆರ್ ಹಾಕಲಾಗಿದೆ.

ಮೆಸರ್ಸ್ ಹೀಥರ್ ಕನ್ಸ್​ಸ್ಟ್ರಕ್ಷನ್ ಕಂಪನಿ ಬುಧವಾರದಂದು ನೀಡಿರುವ ದೂರಿನ ಪ್ರಕಾರ, ಸೋನಿಯಾ ಗಾಂಧಿ ಆವರು ಕಂಪನಿಗೆ ನೀಡಬೇಕಾದ ಬಾಕಿ ಮೊತ್ತವನ್ನು ಪಾವತಿಸಿಲ್ಲ. [ವಿಶ್ವದ ಕುಬೇರ ರಾಜಕಾರಣಿಗಳು: ಸೋನಿಯಾ ಗಾಂಧಿ ಹೆಸರು ಡಿಲಿಟ್!]

ತಿರುವನಂತಪುರಂನಲ್ಲಿ ರಾಜೀವ್ ಗಾಂಧಿ ಇನ್ಸ್​ಸ್ಟಿಟ್ಯೂಟ್ ಆಫ್ ಡೆವಲಪ್​ವೆುಂಟ್ ಸ್ಟಡೀಸ್ ಕಟ್ಟಡ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದ ಕಂಪನಿ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದೆ. ಆದರೆ, ವರ್ಷಗಳು ಕಳೆದರೂ ಈ ಕಟ್ಟಡ ನಿರ್ಮಾಣಕ್ಕಾಗಿ ನೀಡಬೇಕಾದ ಬಾಕಿ ಮೊತ್ತ ಇನ್ನೂ ಪಾವತಿಯಾಗಿಲ್ಲ ಎಂದು ಹೇಳಲಾಗಿದೆ.

Kerala construction firm files fraud case against Sonia Gandhi

ಎಫ್ ಐಆರ್ ದಾಖಲು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಲ್ಲದೆ, ರಾಜೀವ್ ಗಾಂಧಿ ಇನ್ಸ್​ಸ್ಟಿಟ್ಯೂಟ್ ಆಫ್ ಡೆವಲಪ್​ವೆುಂಟ್ ಸ್ಟಡೀಸ್​ನ ಚೇರ್ಮನ್ ರಮೇಶ್ ಚೆನ್ನಿಥಾಲ, ಮಾಜಿ ಸಿಎಂ ಓಮನ್ ಚಾಂಡಿ ಮತ್ತು ಕೇರಳ ಪ್ರದೇಶ್ ಕಾಂಗ್ರೆಸ್ ಅಧ್ಯಕ್ಷ ವಿ.ಎಂ. ಸುಧೀರನ್ ವಿರುದ್ಧವೂ ಪ್ರಕರಣ ದಾಖಲಾಗಿದೆ.[ನ್ಯಾಷನಲ್ ಹೆರಾಲ್ಡ್ ಕೇಸ್ : ಸೋನಿಯಾ, ರಾಹುಲ್‌ಗೆ ರಿಲೀಫ್]

2005ರ ಅಕ್ಟೋಬರ್ ನಲ್ಲಿ ಇನ್ಸ್ಟಿಟ್ಯೂಟ್ ಕಟ್ಟಡ ಉದ್ಘಾಟನೆಯಾಗಿದ್ದು, ಅಂದಿನ ಕೇರಳ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಚೆನ್ನಿಥಲ ಅವರು ಕಟ್ಟಡ ನಿರ್ಮಾಣ ಯೋಜನೆಗೆ ಒಪ್ಪಿಗೆ ನೀಡಿದ್ದರು. ಆದರೆ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಮಾತ್ರ ಇದನ್ನು ತಳ್ಳಿಹಾಕಿದೆ. ಯಾವುದೇ ಹಣ ಬಾಕಿ ಉಳಿಸಿಕೊಳ್ಳಲಾಗಿಲ್ಲ. ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದೆ.


ಕೇರಳದಲ್ಲಿ ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಎಲ್ ಡಿಎಫ್ ಅಧಿಕಾರಕ್ಕೆ ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Kerala based construction firm has filed a fraud case against the party president Sonia Gandhi for non- payment of dues.The firm, which filed the complained on Wednesday, was hired to build the Rajiv Gandhi Institute of Development Studies in Thiruvananthpuram
Please Wait while comments are loading...