ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಲಾರ್ ಶಾಕ್: ಕೇರಳ ಸಿಎಂ ಸೆಕ್ಸ್ ಆಫರ್ ಕೇಳಿದ್ರಂತೆ!

By Mahesh
|
Google Oneindia Kannada News

ತಿರುವನಂತಪುರ,ಡಿ.03: ಬಹುಕೋಟಿ ಸೋಲಾರ್ ಹಗರಣದ ಪ್ರಮುಖ ಆರೊಪಿಗಳಾದ ಸರಿತಾ ಎಸ್ ನಾಯರ್ ಹಾಗೂ ಬಿಜು ರಾಧಕೃಷ್ಣನ್ ಇಬ್ಬರು ಮತ್ತೊಮ್ಮೆ ಕೇರಳ ಸಿಎಂ ಉಮ್ಮನ್ ಚಾಂಡಿ ವಿರುದ್ಧ ಹೇಳಿಕೆ ನೀಡಿದ್ದಾರೆ. ಉಮ್ಮನ್ ಚಾಂಡಿ ಅವರು ಲಂಚಕ್ಕೆ ಬದಲಾಗಿ ಸೆಕ್ಸ್ ಆಫರ್ ಕೇಳಿದ್ರು ಎಂದು ಬಿಜು ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಸರಿತಾ ಹಾಗೂ ಬಿಜು ಇಬ್ಬರು ದೋಷಿಗಳೆಂದು ನ್ಯಾಯಾಲಯ ಈಗಾಗಲೇ ಘೋಷಿಸಿದೆ. ಅದರೆ, ಜಾಮೀನಿನ ಮೇಲೆ ಹೊರಗಿರುವ ಸರಿತಾ ಜೈಲುವಾಸದಿಂದ ತಪ್ಪಿಸಿಕೊಂಡಿದ್ದಲ್ಲದೆ, ಅನೇಕ ರಾಜಕೀಯ ಮುಖಂಡರಿಗೆ ಶಾಕ್ ನೀಡುತ್ತಿದ್ದಾರೆ.['ನನಗೆ ಗಲ್ಲು ಶಿಕ್ಷೆ ಕೊಡಿ' ಎಂದ 'ಸೋಲಾರ್' ಅಪರಾಧಿ]

ಸೋಲಾರ್ ಹಗರಣ ಪ್ರಕರಣದ ಪ್ರಮುಖ ಆರೋಪಿ ಬಿಜು ರಾಧಾಕೃಷ್ಣನ್ ಆವರು ನ್ಯಾಯಾಂಗ ಆಯೋಗದ ಎದುರು ಬುಧವಾರ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ಅವರ ಇಬ್ಬರು ಸಂಪುಟ ಸಹೋದ್ಯೋಗಿಗಳ ವಿರುದ್ಧ ಲೈಂಗಿಕ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ ಸರಿತಾಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಬಿಜು ಹೇಳಿದ್ದಾರೆ.[ಹಗರಣದ ಗಣಿಯಲ್ಲಿ 'ಸೋಲಾರ್' ಸುಂದರಿಯರು]

ಅದರೆ, ರಾಧಕೃಷ್ಣನ್ ಹೇಳಿಕೆಯನ್ನು ಖಂಡಿಸಿರುವ ಸರಿತಾ, ಚಾಂಡಿ ಅವರು ನನಗೆ ತಂದೆ ಸಮಾನರು. ನಾನು ಆರ್ಥಿಕ ವ್ಯವಹಾರದಲ್ಲಿ ಮಾತ್ರ ಭಾಗಿಯಾಗಿದ್ದೆ. ನ್ಯಾಯಾಂಗ ತನಿಖಾ ತಂಡದ ಮುಂದೆ ಡಿಸೆಂಬರ್ 07ರಂದು ಹಾಜರಾಗಿ ನನ್ನ ಹೇಳಿಕೆ ನೀಡುತ್ತೇನೆ. ಶೌಕತ್ ಯಾರು ಎಂಬುದು ಗೊತ್ತಿಲ್ಲ. ಶಿಬು ಬೇಬಿ ಜಾನ್ ಗೊತ್ತು ಎಂದಿದ್ದಾರೆ.

ಯಾರ ಮೇಲೆ ಆರೋಪ

ಯಾರ ಮೇಲೆ ಆರೋಪ

ಸಚಿವರಾದ ಶಿಬು ಬೇಬಿ ಜಾನ್ ಮತ್ತು ಎ.ಪಿ.ಅನಿಲ್ ಕುಮಾರ,ಕಾಂಗ್ರೆಸ್ ಶಾಸಕರಾದ ಹೈಬಿ ಎಡೆನ್ ಮತ್ತು ಎ.ಪಿ.ಅಬ್ದುಲ್ಲಾ ಕುಟ್ಟಿ,ಕಾಂಗ್ರೆಸ್ ನಾಯಕ ಆರ್ಯದನ್ ಶೌಕತ್ತು ಮತ್ತು ಅನಿಲ್ ಕುಮಾರರ ಆಪ್ತ ಕಾರ್ಯದರ್ಶಿ ಕೂಡ ನಾಯರ್‌ಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು.

ಬಿಜು ರಾಧಾಕೃಷ್ಣನ್ ಕೊಟ್ಟ ಲಂಚ ಎಷ್ಟು?

ಬಿಜು ರಾಧಾಕೃಷ್ಣನ್ ಕೊಟ್ಟ ಲಂಚ ಎಷ್ಟು?

ಈ ಬಗ್ಗೆ ನಾಯರ್ ನೀಡಿರುವ ಸಾಕ್ಷಾಧಾರಗಳು ತನ್ನ ಬಳಿಯಿದ್ದು ಆಯೋಗದ ಮುಂದೆ ಹಾಜರು ಪಡಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾನೆ. ಅಲ್ಲದೆ, ತಾನು ಮೂರು ಕಂತುಗಳಲ್ಲಿ 5.5 ಕೋ.ರೂ.ಗಳನ್ನು ಲಂಚವಾಗಿ ಚಾಂಡಿಯವರಿಗೆ ನೀಡಿದ್ದೇನೆ ಎಂದಿದ್ದಾರೆ. ನಂತರ ಸಿಎಂ ಅವರ ಗನ್ ಮ್ಯಾನ್ ಸಲೀಂ ರಾಜ್ ಹಾಗೂ ಆಪ್ತ ಸಹಾಯಕ ಟಿ ಜೊಪೆನ್ ಜಿಕುಮೊನ್ ಜೋಕಬ್ ಅವರಿಗೆ ಇನ್ನೂ 5 ಲಕ್ಷ ಲಂಚ ಸಂದಾಯವಾಗಿದೆ.

ಸರಿತಾ ಮಾಡಿದ ಅರೋಪಗಳು

ಸರಿತಾ ಮಾಡಿದ ಅರೋಪಗಳು

ಕೇರಳ ಕಾಂಗ್ರೆಸ್ (ಎಂ)ನ ಸಂಸದ ಜೋಸ್ ಕೆ.ಮಣಿ, ತನ್ನನ್ನು ಲೈಂಗಿಕವಾಗಿ ಶೋಷಿಸಿದ್ದಾರೆಂದು ಎಂದು ಆರೋಪಿಸಿರುವ ಸರಿತಾ, ಪ್ರಕರಣ ಮುಚ್ಚಿ ಹಾಕಲು ಕಾಂಗ್ರೆಸ್ ಸಚಿವ ಆಡೂರ್ ಪ್ರಕಾಶ್, ಮಾಜಿ ಕೇಂದ್ರ ಸಚಿವ ಕೆ.ಸಿ.ವೇಣುಗೋಪಾಲ್ ಹಾಗೂ ಕಾಂಗ್ರೆಸ್ ಶಾಸಕ ಎ.ಪಿ.ಅಬ್ದುಲ್ಲಾ ಕುಟ್ಟಿ ಎಲ್ಲರಿಗೂ ಭಾರಿ ಮೊತ್ತದ ಆಮಿಷ ಒಡ್ಡಿದ್ದರು ಎಂದಿದ್ದಾರೆ

ಪ್ರಕರಣದ ಬಗ್ಗೆ ಸಿಎಂ ಚಾಂಡಿ ಪ್ರತಿಕ್ರಿಯೆ

ಪ್ರಕರಣದ ಬಗ್ಗೆ ಸಿಎಂ ಚಾಂಡಿ ಪ್ರತಿಕ್ರಿಯೆ

''ಸರಿತಾ ಹಾಗೂ ಸಹ ಆರೋಪಿ ಬಿಜು ರಾಧಾಕೃಷ್ಣನ್ ಅವರಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿರುವುದು ರಾಜ್ಯ ಸರಕಾರದ ನಿಲುವನ್ನು ಸಮರ್ಥಿಸಿದಂತಾಗಿದೆ. ತಾನು ಯಾವುದೇ ರೀತಿಯಲ್ಲೂ ಸೋಲಾರ್ ಹಗರಣದ ಆರೋಪಿಗೆ ನೆರವಾಗಿಲ್ಲ. ನ್ಯಾಯಾಲಯದ ತೀರ್ಪು ಕೂಡಾ ಮುಖ್ಯಮಂತ್ರಿ ವಿರುದ್ಧದ ಆರೋಪಗಳು ಆಧಾರರಹಿತ.

33 ಕೇಸುಗಳು ಬಾಕಿ ಇವೆ

33 ಕೇಸುಗಳು ಬಾಕಿ ಇವೆ

ಪಟ್ಟಣಮಿತ್ರದ ಬಾಬುರಾಜ್ ಎಂಬುವವನಿಂದ 1ಕೋಟಿ 19 ಲಕ್ಷ ರುಗೆ ಸೋಲಾರ್ ಪ್ಯಾನೆಲ್ ಖರೀದಿಸಿದ ಸರಿತಾ -ಬಿಜು ಅವರ ಅವ್ಯವಹಾರ ಸಾಬೀತಾದರೂ 33 ಕೇಸು ಬಾಕಿ ಇವೆ. 7 ಕೋಟಿ ಅವ್ಯವಹಾರ ಉಮ್ಮನ್ ಚಾಂಡಿ ಸರ್ಕಾರಕ್ಕೆ ಸವಾಲಾಗಿದೆ. ಶಾಲು ಮೆನನ್, ಉತ್ತರಾ ಸೇರಿದಂತೆ ಹಲವು ಸೆಲೆಬ್ರಿಟಿ, ರಾಜಕೀಯ ಮುಖಂಡರ ಹೆಸರುಗಳು ಕೇಳಿ ಬಂದಿವೆ. ಸಿಎಂ ಕಚೇರಿ ಕಂಪ್ಯೂಟರ್ ಕೂಡಾ ತನಿಖೆಗೊಳಪಟ್ಟಿದೆ.

ಸೋಲಾರ್ ಹಗರಣದ ರೂವಾರಿ ಬಿಜು ರಾಧಾಕೃಷ್ಣನ್

ಸೋಲಾರ್ ಹಗರಣದ ರೂವಾರಿ ಬಿಜು ರಾಧಾಕೃಷ್ಣನ್

ಸೋಲಾರ್ ಹಗರಣದ ರೂವಾರಿ ಬಿಜು ರಾಧಾಕೃಷ್ಣನ್ ಅವರು ಪತ್ನಿ ಹತ್ಯೆ ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಪಡೆದುಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಬಿಜು ಅವರ ತಾಯಿ ರಾಜಾಮ್ಮಲ್ ಅವರಿಗೆ ಮೂರು ವರ್ಷ ಜೈಲುಶಿಕ್ಷೆ ಹಾಗೂ 50 ಸಾವಿರ ರು ದಂಡ ಹಾಕಿದೆ.

ಶಾಲು ಮೆನನ್, ಉತ್ತರಾ ಸೇರಿದಂತೆ ಹಲವು ಸೆಲೆಬ್ರಿಟಿ, ರಾಜಕೀಯ ಮುಖಂಡರ ಹೆಸರುಗಳು ಕೇಳಿ ಬಂದಿವೆ. ಸಿಎಂ ಕಚೇರಿ ಕಂಪ್ಯೂಟರ್ ಕೂಡಾ ತನಿಖೆಗೊಳಪಟ್ಟಿದೆ.

English summary
The key suspect in the solar scam case in Kerala, Biju Radhakrishnan, has accused chief minister Oommen Chandy and two other cabinet members of receiving sexual favors in addition to a bribe of Rs. 5.5 crore for conducting the scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X