ಕೊಟ್ಟಾಯಂನಲ್ಲಿ ಕೇರಳ ಸಿಎಂ ಚಾಂಡಿ ಕಾರು ಅಪಘಾತ

Posted By:
Subscribe to Oneindia Kannada

ಕೊಟ್ಟಾಯಂ(ಕೇರಳ), ಫೆ. 28: ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಗ್ರಹಚಾರ ಸರಿ ಇದ್ದಂತೆ ಕಾಣುತ್ತಿಲ್ಲ. ಸೋಲಾರ್ ಹಗರಣ ಭೀತಿಯ ನಡುವೆ ಚುನಾವಣೆ ಎದುರಿಸುತ್ತಿದ್ದಾರೆ. ಭಾನುವಾರ ಮಲಪ್ಪುರಂನಿಂದ ಕೊಟ್ಟಾಯಂಗೆ ಹಿಂತಿರುಗುವಾಗ ಚಾಂಡಿ ಅವರಿದ್ದ ಕಾರು ತಿರುವಿನಲ್ಲಿ ಮಗಚಿ ಬಿದ್ದಿದೆ. ಅದೃಷ್ಟವಶಾತ್ ಚಾಂಡಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೀಟು ಬೆಲ್ಟ್ ಧರಿಸಿದ್ದರಿಂದ ಜೀವ ಉಳಿದಿದೆ ಎಂದು ತಿಳಿದು ಬಂದಿದೆ.

ಭಾನುವಾರ ಮುಂಜಾನೆ ಕೊಟ್ಟಾಯಂನ ಎಟ್ಟುಮನೂರ್ ಬಳಿ ಚರ್ಚ್ ಜಂಕ್ಷನ್ ನಲ್ಲಿ ಕಾರು ತಿರುವಿನಲ್ಲಿ ಸಾಗುವಾಗ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕಕ್ಕೆ ಮಗಚಿ ಬಿದ್ದಿದೆ. ಭಾನುವಾರ ಮುಂಜಾನೆ 2.30ರ ಸುಮಾರಿಗೆ ಈ ಘಟನೆ ನಡೆದಿದ್ದು ಸೆಂಟ್ರಲ್ ರೋಡ್ ಬಳಿ ಸಾಗುವಾಗ ಕಾರಿನ ಬಲಬದಿ ಟಯರ್ ಪಂಕ್ಚರ್ ಆಗಿದೆ. ವೇಗದಲ್ಲಿದ್ದ ಗಾಡಿ ನಿಯಂತ್ರಣಕ್ಕೆ ಸಿಗದ ಕಾರಣ ರಸ್ತೆ ಬದಿ ಚರಂಡಿಗೆ ಇಳಿಸಲಾಗಿದೆ.

Kerala CM Oommen Chandy's car skidded off the road in Kerala

ಸಿಎಂ ಅವರ ಗನ್ ಮ್ಯಾನ್ ಅಶೋಕ್ ಅವರು ಮುಂದಿನ ಸೀಟಿನಲ್ಲಿದ್ದರು. ಚಾಲಕ ಹಾಗೂ ಅಶೋಕ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸೀಟು ಬೆಲ್ಟ್ ಧರಿಸಿದ್ದರಿಂದ ಹಣೆಗೆ ಸಣ್ಣ ಪೆಟ್ಟು ಮಾತ್ರ ತಗುಲಿದೆ.

ಯಾವುದೇ ಪ್ರಾಣಾಪಾಯವಿಲ್ಲ ಎಂದು ಸರ್ಕಾರಿ ವೈದ್ಯರು ಹೇಳಿದ್ದಾರೆ. ಸದ್ಯಕ್ಕೆ ನಾಟ್ಟಕೊಮ್ ನ ಸರ್ಕಾರಿ ಅತಿಥಿ ಗೃಹದಲ್ಲಿ ಚಾಂಡಿ ಅವರು ವಿಶ್ರಾಂತಿ ಪಡೆಯುತಿದ್ದಾರೆ.ಇದು ಸಾಧಾರಾಣ ರಸ್ತೆ ಅಪಘಾತದಂತೆ ಕಂಡು ಬಂದರೂ ಚುನಾವಣೆ ಸಮಯವಾದ್ದರಿಂದ ರಾಜ್ಯದ ಗೃಹ ಇಲಾಖೆ ತನಿಖೆಗೆ ಮುಂದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kerala CM Chandy Escapes Unhurt in Mishap. Kerala CM Oommen Chandy's car skidded off the road in Kottayam, Kerala; escaped unhurt
Please Wait while comments are loading...