ಗೇರೂ ಇಲ್ಲ, ಕ್ಲಚ್ಚೂ ಇಲ್ಲ! ದಿವ್ಯಾಂಗರಿಗಾಗಿ ಮಿನಿ ಕಾರು ತಯಾರಿಸಿದ 11ನೇ ತರಗತಿ ವಿದ್ಯಾರ್ಥಿಗಳು

ಕಾರು ಓಡಿಸುವುದು ಎಂದರೆ ಕೇವಲ ಸ್ಟೀರಿಂಗ್ ಹಿಡಿಯುವುದಲ್ಲ, ಬದಲಾಗಿ ಕ್ಲಚ್ ಮತ್ತು ಗೇರ್ ನಿಯಂತ್ರಣ ಮಾಡುವುದು ಕೂಡ ಒಂದು ದೊಡ್ಡ ಸವಾಲಿನ ಕೆಲಸ. ಅನೇಕರಿಗೆ ಇದೇ ಕಾರಣದಿಂದ ಕಾರು ಓಡಿಸುವುದನ್ನಾ ಕಲಿಯುವುದು ಕಷ್ಟವಾಗುತ್ತದೆ. ಆದರೆ, ಈ ಸಮಸ್ಯೆಗೆ ಕೇರಳದ 11ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಅದ್ಭುತವಾದ ಪರಿಹಾರವನ್ನು ಕಂಡುಕೊಂಡಿದ್ದಾರೆ.

ಗೇರ್ ಹಾಗೂ ಕ್ಲಚ್ ಇಲ್ಲದ ಇಕೋ ರೈಡ್ ಹೆಸರಿನ ಮಿನಿ ಕಾರೊಂದನ್ನ ನಿರ್ಮಿಸುವ ಮೂಲಕ ಇವರು ಎಲ್ಲರ ಗಮನ ಸೆಳೆದಿದ್ದಾರೆ. ಕೊಟ್ಟಪ್ಪುರಂನ ಸೇಂಟ್ ಆನ್ಸ್ ಹೈಯರ್ ಸೆಕೆಂಡರಿ ಶಾಲೆಯ 11ನೇ ತರಗತಿ ವಿದ್ಯಾರ್ಥಿಗಳಾದ ವಿ.ಜೆ. ಜೋಸ್ಬಿನ್ ಮತ್ತು ಉಮಾ ಶಿವಾನಿ ಈ ಅದ್ಭುತ ಆವಿಷ್ಕಾರ ಮಾಡಿದ ಯುವ ಪ್ರತಿಭೆಗಳು.

Kerala Class 11 Students Build Gearless Mini Car Eco Ride For Narrow Roads And Disabled Drivers

ಗೇರ್, ಕ್ಲಚ್ ರಹಿತ ಇಕೋ ರೈಡ್ ಕಾರಿನ ವಿಶೇಷತೆ

ಸಾಮಾನ್ಯವಾಗಿ ಕಾರುಗಳಲ್ಲಿ ವೇಗಕ್ಕೆ ತಕ್ಕಂತೆ ಗೇರ್ ಬದಲಾಯಿಸುವುದು ಮತ್ತು ಕ್ಲಚ್ ನಿಯಂತ್ರಣ ಮಾಡುವುದು ಕಡ್ಡಾಯವಾಗಿರುತ್ತದೆ. ಆದರೆ ವಿದ್ಯಾರ್ಥಿಗಳಾದ ಜೋಸ್ಬಿನ್ ಮತ್ತು ಉಮಾ ಶಿವಾನಿ ವಿನ್ಯಾಸಗೊಳಿಸಿರುವ ಈ ಎರಡು ಸೀಟಿನ ಮಿನಿ ಕಾರಿಗೆ ಗೇರ್ ಮತ್ತು ಕ್ಲಚ್ ಎರಡೂ ಇಲ್ಲ.

ಇದು ಸಂಪೂರ್ಣವಾಗಿ ಪೆಟ್ರೋಲ್ ಚಾಲಿತ ವಾಹನವಾಗಿದ್ದು, ಸ್ಕೂಟರ್ ಮಾದರಿಯಲ್ಲಿಯೇ ಅತ್ಯಂತ ಸುಲಭವಾಗಿ ಚಲಾಯಿಸಬಹುದು. ಕೇವಲ ಆಕ್ಸಿಲರೇಟರ್ ಮತ್ತು ಬ್ರೇಕ್ ಬಳಸಿ ಈ ಕಾರನ್ನ ನಿಯಂತ್ರಿಸಬಹುದಾಗಿದೆ.

ಇಬ್ಬರು ಪ್ರಯಾಣಿಕರಿಗೆ ಕಾರಿನಂತಹ ಆರಾಮದಾಯಕ ಪ್ರಯಾಣವನ್ನ ಇದು ನೀಡಲಿದ್ದು, ಇದರ ನಿರ್ವಹಣಾ ವೆಚ್ಚ ಕೇವಲ ಒಂದು ಸ್ಕೂಟರ್‌ಗೆ ತಗಲುವಷ್ಟೇ ಇರುತ್ತದೆ. ಆರಂಭಿಕ ಚಾಲಕರಿಗೆ ಮತ್ತು ಕಾರು ಕಲಿಯಲು ಇಚ್ಛಿಸುವವರಿಗೆ ಇದು ಅತ್ಯಂತ ಸುಲಭವಾದ ಹಾಗೂ ಮಿತವ್ಯಯದ ವಾಹನವಾಗಿದೆ.

ದಿವ್ಯಾಂಗರಿಗೆ ಮತ್ತು ಕಿರಿದಾದ ರಸ್ತೆಗಳಿಗೆ ವರದಾನ

ಗ್ರಾಮೀಣ ಭಾಗಗಳಲ್ಲಿ ರಸ್ತೆಗಳು ತುಂಬಾ ಕಿರಿದಾಗಿರುತ್ತವೆ. ಇಂತಹ ರಸ್ತೆಗಳಲ್ಲಿ ದೊಡ್ಡ ಕಾರುಗಳನ್ನ ಓಡಿಸುವುದು ಬಹಳ ಕಷ್ಟದ ಕೆಲಸ. ಈ ಸಮಸ್ಯೆಯನ್ನ ಗಮನದಲ್ಲಿಟ್ಟುಕೊಂಡೇ ಈ ಮಿನಿ ಕಾರನ್ನ ಅತ್ಯಂತ ಕಾಂಪ್ಯಾಕ್ಟ್ ಆಗಿ ವಿನ್ಯಾಸಗೊಳಿಸಲಾಗಿದೆ.

ಹಳ್ಳಿಯ ಕಿರಿದಾದ ರಸ್ತೆಗಳಲ್ಲೂ ಇದು ಸುಗಮವಾಗಿ ಸಂಚರಿಸಬಲ್ಲದು. ಇದಲ್ಲದೆ, ವಿಕಲಚೇತನರಿಗೆ ಸಾಮಾನ್ಯ ಕಾರುಗಳನ್ನು ಓಡಿಸುವುದು ಬಹುದೊಡ್ಡ ಸವಾಲಾಗಿರುತ್ತದೆ. ಆದರೆ ಗೇರ್ ಮತ್ತು ಕ್ಲಚ್ ಇಲ್ಲದ ಕಾರಣ, ದಿವ್ಯಾಂಗರೂ ಕೂಡ ಯಾವುದೇ ಅಡೆತಡೆಯಿಲ್ಲದೆ, ಇತರರ ಸಹಾಯವಿಲ್ಲದೆ ಸುಲಭವಾಗಿ ಈ ಕಾರನ್ನು ಓಡಿಸಬಹುದು. ದೈಹಿಕ ವಿಕಲಚೇತನರಿಗೆ ಸ್ವಾವಲಂಬಿಯಾಗಿ ಪ್ರಯಾಣಿಸಲು ಈ ಕಾರು ನಿಜಕ್ಕೂ ಒಂದು ವರದಾನವಾಗಿದೆ.

ವಿಜ್ಞಾನ ಮೇಳದಲ್ಲಿ ಪ್ರಥಮ ಸ್ಥಾನ

ಶಾಲಾ ತರಗತಿಯೊಳಗಿನ ಇವರ ಈ ಅದ್ಭುತ ಕಲ್ಪನೆ ಇದೀಗ ಕೇವಲ ಮಾದರಿಯಾಗಿ ಉಳಿದಿಲ್ಲ, ಬದಲಾಗಿ ರಾಜ್ಯಮಟ್ಟದಲ್ಲಿ ಕೂಡ ಮನ್ನಣೆ ಸಿಕ್ಕಿದೆ. ಇತ್ತೀಚೆಗೆ ನಡೆದ ಕೊಡಂಗಲ್ಲೂರ್ ಉಪ-ಜಿಲ್ಲಾ ವಿಜ್ಞಾನ ಮೇಳದಲ್ಲಿ, ಸಮಾಜ ವಿಜ್ಞಾನ ವರ್ಕಿಂಗ್-ಮಾಡೆಲ್ ವಿಭಾಗದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಈ ಇಕೋ ರೈಡ್ ಕಾರು 'ಎ' ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನವನ್ನ ಮುಡಿಗೇರಿಸಿಕೊಂಡಿದೆ.

ವಿದ್ಯಾರ್ಥಿಗಳ ಈ ವಿನೂತನ ಚಿಂತನೆಗೆ ತೀರ್ಪುಗಾರರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಭವಿಷ್ಯದಲ್ಲಿ ಇಂತಹ ಪರಿಸರ ಸ್ನೇಹಿ ಮತ್ತು ಜನಸಾಮಾನ್ಯರಿಗೆ ಕೈಗೆಟುಕುವ ವಾಹನಗಳು ಅಧಿಕೃತವಾಗಿ ಮಾರುಕಟ್ಟೆಗೆ ಬಂದರೆ, ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ಸೃಷ್ಟಿಯಾಗಬಹುದು. ಇಂತಹ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹ ಸಿಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+