
'ಗುಜರಾತ್‌ನಲ್ಲಿ ಎಎಪಿ ಸರ್ಕಾರ ರಚನೆಯಾಗಲಿದೆ' ಭವಿಷ್ಯ ನುಡಿದ ಕೇಜ್ರಿವಾಲ್
ಗುಜರಾತ್ ಚುನಾವಣೆಯ ಕದನ ಬಹಳ ರೋಚಕವಾಗಿದೆ. ಬಿಜೆಪಿ ಹೊರತಾಗಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಸಂಪೂರ್ಣ ಬಲ ತುಂಬಿವೆ. ಇದೀಗ ಅರವಿಂದ್ ಕೇಜ್ರಿವಾಲ್ ಗುಜರಾತ್ ಚುನಾವಣಾ ಫಲಿತಾಂಶದ ಬಗ್ಗೆ ಒಂದರ ನಂತರ ಒಂದರಂತೆ ಭವಿಷ್ಯ ನುಡಿದಿದ್ದಾರೆ. ದೆಹಲಿ ಸಿಎಂ ಕೇಜ್ರಿವಾಲ್ ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಯಾಗುವುದು ಖಚಿತ ಎಂದಿದ್ದಾರೆ. ಜೊತೆಗೆ ಅವರು ತಮ್ಮ ಮೂವರು ಅಭ್ಯರ್ಥಿಗಳು ಭಾರಿ ಮತಗಳಿಂದ ಗೆಲ್ಲುತ್ತಾರೆ ಎಂದಿದ್ದಾರೆ.
ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗುಜರಾತ್ ಚುನಾವಣೆಗೆ ಸಂಬಂಧಿಸಿದಂತೆ ಒಂದೊಂದೇ ಭವಿಷ್ಯ ಹೇಳುತ್ತಿದ್ದಾರೆ. ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಯಾಗಲಿದೆ. ಇದರೊಂದಿಗೆ ಆಪ್ ಗುಜರಾತ್ ನಲ್ಲಿ ಮಹುಮತ ಪಡೆಯಲಿದೆ ಎಂದಿದ್ದಾರೆ.
ಗುಜರಾತ್ ಚುನಾವಣೆ ಗೆಲ್ಲಲು ಬಿಜೆಪಿಗೆ ಆ ರಾಜ್ಯವೇ 'ಪ್ರಬಲ ಶಕ್ತಿ'
ಸೂರತ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, "ನಾನು ನಿಮ್ಮೆಲ್ಲರ ಮುಂದೆ ಲಿಖಿತ ಭವಿಷ್ಯ ಹೇಳಲಿದ್ದೇನೆ. ಇದರಲ್ಲಿ ಗುಜರಾತ್ ನೀವು ಸರ್ಕಾರ ರಚಿಸಲಿದ್ದೀರಿ ಎಂದು ಬರೆಯಿರಿ. 27 ವರ್ಷಗಳ ದುರಾಡಳಿತದ ನಂತರ ಗುಜರಾತ್‌ನ ಜನರು ಈ ಜನರನ್ನು (ಬಿಜೆಪಿ) ತೊಡೆದುಹಾಕುತ್ತಾರೆ ಎಂದು ಹೇಳಿದರು.

ಭವಿಷ್ಯ ನುಡಿದ ಅರವಿಂದ್ ಕೇಜ್ರಿವಾಲ್
ರಾಜಕೀಯದಲ್ಲಿ ನನ್ನ ಭವಿಷ್ಯ ನಿಜವಾಗುತ್ತದೆ ಎಂದು ಮಾಧ್ಯಮಗಳ ಮುಂದೆ ಸಿಎಂ ಕೇಜ್ರಿವಾಲ್ ಹೇಳಿದ್ದಾರೆ. 2014ರಲ್ಲಿ ದೆಹಲಿಯಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ ಎಂದು ಪತ್ರಕರ್ತರಿಗೆ ಪತ್ರ ಬರೆದಿದ್ದೆ. ಆ ಚುನಾವಣೆಯಲ್ಲಿ ಕಾಂಗ್ರೆಸ್ 0 ಸ್ಥಾನ ಗೆದ್ದಿತ್ತು. ಪಂಜಾಬ್ ಚುನಾವಣೆಯಲ್ಲೂ ನಾನು ಹಲವು ಭವಿಷ್ಯ ನುಡಿದಿದ್ದೆ. ಸಿಧು, ಚನ್ನಿ ಮತ್ತು ಬಾದಲ್ ಸಾಹೇಬ್ ಅವರ ಇಡೀ ಕುಟುಂಬವನ್ನು ಸೋಲಿಸಲಾಗುವುದು ಎಂದು ನಾನು ಹೇಳಿದ್ದೆ ಮತ್ತು ಅದು ನಿಖರವಾಗಿ ಸಂಭವಿಸಿದೆ. ಈಗ ನಾನು ಗುಜರಾತ್‌ನಲ್ಲಿ ಎಎಪಿ ಸರ್ಕಾರ ರಚಿಸಲಿದ್ದೇನೆ. ಇದೂ ಕೂಡ ನಿಜವಾಗಲಿದೆ ಎಂದು ಹೇಳಿದರು.

'ಬಿಜೆಪಿಯೊಂದಿಗೆ ನಮ್ಮ ಗೆಲವು ಖಚಿತ'
ಮತ್ತೊಂದೆಡೆ, ಸೋಮವಾರ ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ಪೇಪರ್ ಮತ್ತು ಪೆನ್ನು ಎತ್ತಿಕೊಂಡು ಹೊಸ ಭವಿಷ್ಯ ಬರೆದಿದ್ದಾರೆ. ಎಎಪಿಯ ರಾಜ್ಯ ಅಧ್ಯಕ್ಷ ಗೋಪಾಲ್ ಇಟಾಲಿಯಾ, ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಮತ್ತು ವರಚಾ ಅಭ್ಯರ್ಥಿ ಅಲ್ಪೇಶ್ ಕಥೇರಿಯಾ ಅವರು ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲ್ಲುತ್ತಿದ್ದಾರೆ ಎಂದು ಹೇಳಿದ್ದಾರೆ.
|
ಗುಜರಾತ್ ಚುನಾವಣೆಗೆ ದಿನಗಣನೆ ಆರಂಭ
ಗುಜರಾತ್ ಚುನಾವಣೆಗೆ ದಿನಗಣನೆ ಶುರವಾಗಿದೆ. ಗುಜರಾತ್ ಜನರಿಗೆ ಕೇಜ್ರಿವಾಲ್ ಹಲವಾರು ಭರವಸೆಗಳನ್ನು ನೀಡಿದ್ದಾರೆ. ಅವರು ಮತ್ತೆ ಚುನಾವಣೆಯಲ್ಲಿ ಗೆದ್ದರೆ ಶಾಲೆಗಳ ಸ್ಥಾಪನೆ ಹಾಗೂ 3,000 ರೂಪಾಯಿ ನಿರುದ್ಯೋಗ ಭತ್ಯೆ ನೀಡುವುದರೊಂದಿಗೆ ಹಲವಾರು ಭರವಸೆಗಳನ್ನು ನೀಡಿದ್ದಾರೆ. ಜೊತೆಗೆ ಎಲ್ಲಾ ಸರ್ಕಾರಿ ನೇಮಕಾತಿಗಳನ್ನು 1 ವರ್ಷದೊಳಗೆ ಮಾಡಲಾಗುತ್ತದೆ.
2017ರ ಚುನಾವಣೆಯಲ್ಲಿ, ಬಿಜೆಪಿ ಸೂರತ್ ಜಿಲ್ಲೆಯಲ್ಲಿ 16 ವಿಧಾನಸಭಾ ಸ್ಥಾನಗಳಲ್ಲಿ 14 ಸ್ಥಾನಗಳನ್ನು ಗೆದ್ದು ಆಡಳಿತ ನಡೆಸಿತು. ಮಂಗ್ರೋಲ್ ಮತ್ತು ಮಾಂಡವಿ ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ಗೆ ಜಯ ಸಿಕ್ಕಿತ್ತು. ಆದರೆ, ಈ ಬಾರಿ ಫಲಿತಾಂಶ ಕೊಂಚ ಬೇರೆಯಾಗಲಿದೆ ಎಂಬ ಅಂಶಗಳು ಕೇಳಿಬರುತ್ತಿವೆ. ಹೀಗಾಗಿ ಕೇಜ್ರಿವಾಲ್ ಭವಿಷ್ಯ ನಿಜವಾಗುತ್ತಾ ಎಂದು ಕಾದು ನೋಡಬೇಕಿದೆ.

182 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ
182 ಸದಸ್ಯ ಬಲದ ಗುಜರಾತ್ ವಿಧಾನಸಭಾ ಚುನಾವಣೆಯು ಡಿ.1 ಹಾಗೂ 5ರಂದು ಎರಡು ಹಂತದಲ್ಲಿ ನಡೆಯಲಿದೆ. ಡಿ.8ರಂದು ಫಲಿತಾಂಶ ಪ್ರಕಟವಾಗಲಿದೆ.ಇದರಲ್ಲಿ ಕಾಂಗ್ರೆಸ್ ಹೆಚ್ಚೆಂದರೆ 4- 5 ಸೀಟುಗಳಲ್ಲಿ ಗೆಲ್ಲಬಹುದಷ್ಟೇ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಎಎಪಿ ಈಗಾಗಲೇ 178 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. "ನನ್ನ ಅಂದಾಜಿನ ಪ್ರಕಾರ, ಕಾಂಗ್ರೆಸ್‌ನ ಮತ ಹಂಚಿಕೆ ಶೇ 13ಕ್ಕಿಂತ ಕಡಿಮೆ ಇರಲಿದೆ ಮತ್ತು ಅದು 4-5 ಸೀಟುಗಳನ್ನು ಪಡೆಯಲಿದೆ. ಎಎಪಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇರಲಿದೆ. ಈಗಲೂ ಕಾಂಗ್ರೆಸ್‌ಗೆ ಮತ ಹಾಕುವ ಅದರ 'ಕಟ್ಟರ್ ಮತದಾರರು', ಹಾಗೆ ಮಾಡುವುದರಿಂದ ತಮ್ಮ ಮತಗಳನ್ನು ವ್ಯರ್ಥಮಾಡಿಕೊಳ್ಳಬಾರದು. ಅವರು ನಿಮ್ಮ ಮಕ್ಕಳು ಮತ್ತು ನಿಮ್ಮ ಕುಟುಂಬಕ್ಕೆ ಭರವಸೆ ಮೂಡಿಸುತ್ತಿರುವ ಎಎಪಿಗೆ ಮತ ಹಾಕಬೇಕು" ಎಂದು ಕೇಜ್ರಿವಾಲ್ ಹೇಳಿದ್ದಾರೆ.