Chardham: ಕೇದಾರನಾಥ ದೇಗುಲದಲ್ಲಿ ಭಕ್ತರಿಗೆ ಹೊಸ ಸೌಲಭ್ಯ..!
ಭಾರತದಾದ್ಯಂತ ಡಿಜಿಟಲ್ ಹಣ ವರ್ಗಾವಣೆ ಸೇವೆಯು ದೊಡ್ಡ ರೀತಿಯಲ್ಲಿ ಬೆಳೆದಿದೆ. ಈಗ ಪ್ರಸಿದ್ಧ ಕೇದಾರನಾಥ ದೇವಾಲಯವು UPI ಪಾವತಿ ಸೇವೆಯನ್ನು ಹೊಂದಿದೆ.
ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಈಗ ಪೇಟಿಎಂ ಕ್ಯೂಆರ್ ಕೋಡ್ ಅನ್ನು ಪೇಟಿಎಂ ಯುಪಿಐ ಅಥವಾ ವಾಲೆಟ್ ಬಳಸಿ ದೇಣಿಗೆ ನೀಡಲು ಸ್ಕ್ಯಾನ್ ಮಾಡಬಹುದು. ಈ ಸೇವೆಯ ಮೂಲಕ ಭಕ್ತರು ದೇಣಿಗೆ ನೀಡಬಹುದುದಾಗಿದ್ದು ಹಣವನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ.

ಇದಕ್ಕಾಗಿ ಯಾವುದೇ ವೈಯಕ್ತಿಕ ವ್ಯವಸ್ಥೆಗಳ ಅಗತ್ಯವಿಲ್ಲ, ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ತಾವು ಪ್ರಸ್ತುತ ಅಂಗಡಿಗಳಲ್ಲಿ ಮಾಡುವಂತೆಯೇ ಸ್ಕ್ಯಾನ್ ಮಾಡಿ ದೇಣಿಗೆ ನೀಡಬಹುದು. ಭಾರತದ ಜನಪ್ರಿಯ ಡಿಜಿಟಲ್ ಪಾವತಿ ವೇದಿಕೆ Paytm ಅನ್ನು One97 ಕಮ್ಯುನಿಕೇಷನ್ಸ್ ಲಿಮಿಟೆಡ್ ನಿರ್ವಹಿಸುತ್ತಿದೆ.
ಇದು ಮಾತ್ರವಲ್ಲದೆ ಪೇಟಿಎಂ ಸೂಪರ್ ಆಪ್ ಮೂಲಕ ಭಾರತದಾದ್ಯಂತ ಇರುವ ಭಕ್ತರು ಉತ್ತರಾಖಂಡ ಜಿಲ್ಲೆಯ ರುದ್ರಪ್ರಯಕ್ಕಿಲ್ ಪ್ರದೇಶದ ಪ್ರಸಿದ್ಧ ಕೇದಾರನಾಥ ದೇವಾಲಯಕ್ಕೆ ತಮ್ಮ ಮನೆಯಿಂದ ದೇಣಿಗೆ ನೀಡಬಹುದು ಎಂದು ಐಎಎನ್ಎಸ್ ವರದಿ ಮಾಡಿದೆ.
ಭಾರತದಲ್ಲಿ QR ಮತ್ತು ಮೊಬೈಲ್ ಪಾವತಿಗಳ ಪ್ರವರ್ತಕ Paytm ಕೇದಾರನಾಥ ದೇವಾಲಯದ ಬಾಗಿಲುಗಳಲ್ಲಿ ಡಿಜಿಟಲ್ ದೇಣಿಗೆ ರಚನೆಗಳನ್ನು ರಚಿಸಿದೆ. ಅಲ್ಲಿ ಭಕ್ತರು ದೇವಾಲಯದಲ್ಲಿ Paytm QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು ಮತ್ತು Paytm UPI, Paytm Wallet ಮತ್ತು ಹೆಚ್ಚಿನವುಗಳ ಮೂಲಕ ಪಾವತಿಸಬಹುದು ಎಂದು Paytm ವಕ್ತಾರರು ತಿಳಿಸಿದ್ದಾರೆ.

ಏಪ್ರಿಲ್ 25 ರಿಂದ ಕೇದಾರನಾಥ ದೇವಾಲಯಕ್ಕೆ ಯಾತ್ರೆ ಆರಂಭವಾಗಿದೆ. ಈ ಸಮಯದಲ್ಲಿ Paytm ನ ಸೇವೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಭಾರತದಲ್ಲಿನ ಅನೇಕ ದೇವಾಲಯಗಳು UPI ಮೂಲಕ ಪಾವತಿ ಸೇವೆಗಳನ್ನು ಪರಿಚಯಿಸಿವೆ, ಡಿಜಿಟಲ್ ಪಾವತಿ ಸೇವೆಗಳು ಭಾರತದಲ್ಲಿ ಮುಂದಿನ ಹೆಜ್ಜೆ ಇಡುತ್ತಿವೆ.
ಕೇದಾರನಾಥ ಧಾಮದ ನಂತರ ಇದೀಗ ಬದರಿನಾಥ ಧಾಮದ ಬಾಗಿಲು ಕೂಡ ತೆರೆಯಲಾಗಿದೆ. ಗುರುವಾರ ಬೆಳಗ್ಗೆ ಸೇನಾ ಬ್ಯಾಂಡ್‌ನ ಸುಶ್ರಾವ್ಯ ನಾದದ ನಡುವೆ ಬದರಿನಾಥ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಬದರಿನಾಥನ ದರ್ಶನ ಪಡೆಯಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಬುಧವಾರ ಕೇದಾರನಾಥ ಧಾಮದ ಬಾಗಿಲು ಭಕ್ತರಿಗಾಗಿ ತೆರೆಯಲಾಯಿತು.
ಭಾರೀ ಹಿಮಪಾತ ಮತ್ತು ಹರ್ಷೋದ್ಗಾರಗಳ ನಡುವೆ ಭಕ್ತರಿಗಾಗಿ ಬದರಿನಾಥ ದೇವಸ್ಥಾನದ ಬಾಗಿಲನ್ನು ಗುರುವಾರ ತೆರೆಯಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಪ್ರಧಾನಿ ಹೆಸರಿನಲ್ಲಿ ಮೊದಲ ಪೂಜೆ, ಆರತಿ ನಡೆಯಿತು. ಈ ಸಂದರ್ಭದಲ್ಲಿ ITBP ಮತ್ತು ಗರ್ವಾಲ್ ಸ್ಕೌಟ್ಸ್ ತಂಡದವರು ಭಾಗವಹಿಸಿದ್ದರು. ಜೊತೆಗೆ ಬದರಿನಾಥ ಧಾಮದ ಬಾಗಿಲು ತೆರೆಯುವ ಮುನ್ನವೇ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದರು ಕೂಡ ದೇವಸ್ಥಾನದಲ್ಲಿ ಉಪಸ್ಥಿತರಿದ್ದರು.

ಏಪ್ರಿಲ್ 22 ರಂದು ಭಕ್ತರಿಗಾಗಿ ಗಂಗೋತ್ರಿ-ಯಮುನೋತ್ರಿ ಧಾಮದ ಬಾಗಿಲು ಈಗಾಗಲೇ ತೆರೆಯಲಾಗಿದೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಜನರು ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಚಾರ್‌ಧಾಮ್‌ನಲ್ಲಿ ಹೆಚ್ಚು ಹಿಮಪಾತವಾಗುತ್ತಿದ್ದು ಭಕ್ತರ ಆರೋಗ್ಯದ ಬಗ್ಗೆ ಆತಂಕ ಹೆಚ್ಚಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಯಮುನೋತ್ರಿ: ಯಮುನಾ ನದಿಯ ಮೂಲ ಮತ್ತು ಯಮುನಾ ದೇವಿಯ ಸ್ಥಾನವಾಗಿದೆ, ಗಂಗೋತ್ರಿ: ಗಂಗೆಯ ಮೂಲ ಮತ್ತು ಗಂಗಾ ಮಾತೆಯ ಸ್ಥಾನವಾಗಿದೆ, ಕೇದಾರನಾಥ: ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಶಿವನ ಒಂದು ರೂಪವನ್ನು ಇಲ್ಲಿ ಬೆಳಕಿನ ರೂಪದಲ್ಲಿ ಪೂಜಿಸಲಾಗುತ್ತದೆ. ಜೊತೆಗೆ ಬದರಿನಾಥ: ಭಗವಾನ್ ವಿಷ್ಣುವಿನ ಸ್ಥಾನವಾಗಿದೆ. ಈ ನಾಲ್ಕು ವಿಶೇಷ ಸ್ಥಾನಗಳಿಮದಾಗಿ ಇದಕ್ಕೆ ಚಾರ್‌ಧಾಮ್ ಎಂದು ಕರೆಯಲಾಗುತ್ತದೆ.












Click it and Unblock the Notifications