ಕಾಸ್‌ಗಂಜ್ ಗಲಭೆ: ಚಂದನ್ ಗುಪ್ತಾ ಕೊಲೆ ಆರೋಪಿ ಸೆರೆ

ಲಖನೌ, ಜನವರಿ 31: ಡಿಸೆಂಬರ್ 26ರಂದು ಕಾಸ್‌ಗಂಜ್‌ನಲ್ಲಿ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಉಂಟಾದ ಗಲಭೆಯಲ್ಲಿ ಚಂದನ್ ಗುಪ್ತಾ ಅವರನ್ನು ಹತ್ಯೆ ಮಾಡಿದ ಪ್ರಮುಖ ಆರೋಪಿ ಸಲೀಮ್ ಜಾವೇದ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಶನಿ‌ವಾರ ರಾತ್ರಿ ಸಲೀಮ್ ಜಾವೆದ್‌ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಒಂದು ಬಂದೂಕು, ಕಚ್ಚಾ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಸಲೀಮ್‌ ಜಾವೆದ್‌ ಹಾಗೂ ಆತನ ಸಹೋದರರಾದ ವಸೀಮ್‌ ಮತ್ತು ನಸೀಮ್‌ ಸೇರಿದಂತೆ 17 ಮಂದಿ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಗಲಭೆ ಆದ ದಿನದಿಂದಲೂ ನಾಪತ್ತೆಯಾಗಿದ್ದ ಸಲೀಮ್ ಜಾವೇದ್‌ನನ್ನು ಪೊಲೀಸರು ಬುಧವಾರ ಬಂಧಿಸಲು ಯಶಸ್ವಿಯಾಗಿದ್ದಾರೆ.

Kasganj violence: Chandan murder accused arrested

ಗಣರಾಜ್ಯೋತ್ಸವ ದಿನದಂದು ತಿರಂಗಾ ಯಾತ್ರೆ ಮಾಡುವ ಸಂದರ್ಭ ಎರಡು ಕೋಮಿನ ನಡುವೆ ಗಲಭೆ ಉಂಟಾಗಿತ್ತು. ಆ ಗಲಭೆಯಲ್ಲಿ ಯುವಕ ಚಂದನ್ ಗುಪ್ತಾ ಕೊಲೆಯಾಗಿತ್ತು. ಗಲಭೆ ನಂತರ ಪೊಲೀಸರು 400 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+