Mahakumbh Mela 2025: ಯಾತ್ರೆ ಮುಗಿಸಿ ಬರುವಾಗ ಅಪಘಾತ: ಕರ್ನಾಟಕದ ಇಬ್ಬರ ದುರ್ಮರಣ

ಬೆಂಗಳೂರು, ಜನವರಿ 29: ಪ್ರಯಾಗ್‌ರಾಜ್‌ನಲ್ಲಿ ಪುಣ್ಯಸ್ನಾನ ಮಾಡಲು ಹೋದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ಹತ್ತಾರು ಮಂದಿ ಗಾಯಗೊಂಡ ಘಟನೆ ನಡೆದಿದೆ. ಇತ್ತ ಮಹಾ ಕುಂಭ ಮೇಳಕ್ಕೆ ಹೋಗಿ ಬರುತ್ತಿದ್ದ ಕಾರು ಅಪಘಾತವಾಗಿ ಕರ್ನಾಟಕದ ಇಬ್ಬರು ಮೃತಪಟ್ಟಿದ್ದಾರೆ. ಮೃತರು, ಮಂಡ್ಯ ಮತ್ತು ಮೈಸೂರು ಜಿಲ್ಲೆಯವರು ಎಂದು ತಿಳಿದು ಬಂದಿದೆ.

ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಕಣ್ತುಂಬಿಕೊಳ್ಳಲು ಮೈಸೂರು ತಾಕೂನಿಂದ ಎರಡು ಕಾರಿನಲ್ಲಿ ಮೃತರು ಮತ್ತು ಸ್ನೇಹಿತರು ತೆರಳಿದ್ದರು. ಎರಡು ದಿನ ಕುಂಬ ಮೇಳ ನೋಡಿಕೊಂಡು ವಾಪಾಸ್ ಬರುವಾಗ ಕಾರು ಮತ್ತು ಟ್ರಕ್ ಮಧ್ಯೆ ಡಿಕ್ಕಿ ಸಂಭವಿಸಿದೆ. ತಾಲೂಕಿನ ಮಂಟಿಕ್ಯಾತನಹಳ್ಳಿ ನಿವಾಸಿ ರಾಮಕೃಷ್ಣ ಹಾಗೂ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಕೆಆರ್‌ಎಸ್‌ ನಿವಾಸಿ ಅರುಣ್ ಶಾಸ್ತ್ರಿ ಮೃತಪಟ್ಟಿದ್ದಾರೆ.

Karnataka s Two Death in Car-Truck Accident in Uttar Pradesh after saw Mahakumbh Mela 2025

ಮೃತರು ಸೇರಿದಂತೆ ಎರಡು ಜಿಲ್ಲೆಯ ಯುವಕರು ಎರಡು ಕಾರಿನಲ್ಲಿ ಪ್ರಯಾಗ್ ರಾಜ್‌ಗೆ ತೆರಳಿದ್ದಾರೆ. ಅಲ್ಲಿ ಯಾತ್ರೆ ಮುಗಿಸಿ ಕಾಶಿ ವಿಶ್ವನಾಥನ ದರ್ಶನಕ್ಕೆಂದು ತೆರಳುವಾಗ ಮಿರ್ಜಾಪುರ ಬಳಿ ನಡೆದಿದೆ. ಘಟನೆ ನಡೆಯುತ್ತಿದ್ದಂತೆ ಇಬ್ಬರಿಗೂ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಇತರರಿಗೂ ಒಂದಷ್ಟು ಗಾಯಗಳಾಗಿವೆ.

ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಇಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ರಾಮಕೃಷ್ಣ ಶರ್ಮಾ, ಅರುಣ ಶಾಸ್ತ್ರಿ ಅವರ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: 50 ಗಾಯಾಳು

ಮಹಾಕುಂಭ ಮೇಳದಲ್ಲಿ ಆಗಮಿಸಿದ್ದ ಭಕ್ತರು, ನಾಗಸಾಧುಗಳು ಸೇರಿದಂತೆ ನೆರೆದವರು, ಮಾಗಿ ಹುಣ್ಣಿಮೆ ಪ್ರಯುಕ್ತ ಬೆಳ್ಳಂಬೆಳಗ್ಗೆ ಪುಣ್ಯಸ್ನಾನ ಮಾಡಲು ದಿಢೀರನೇ ತೆರಳಿದ್ದಾರೆ. ಈ ವೇಳೆ ನೂಕು ನುಗ್ಗಲು ಉಂಟಾಗಲಿದೆ. ಕಾಲ್ತುಳಿತ ಆಗಿದ್ದು, ಕೆಲವು ಜನರ ಸಾವನ್ನಪ್ಪಿದ್ದಾರೆ ಅಂತಲೂ ಹೇಳಲಾಗುತ್ತಿದೆ. 50 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ.

ಪಂಡೀತ್ ದೀನ್‌ದಯಾಳ್ ಉಪಾಧ್ಯಾಯ ಜಂಕ್ಷನ್‌ನಿಂದ ಪ್ರಯಾಗ್‌ರಾಜ್‌ಗೆ ತೆರಳುವ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಕೆಲವು ರೈಗಳೂ ಮಾರ್ಗ ಬದಲಾವಣೆ ಮಾಡಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ ಸೇರಿದಂತೆ ದೇಶದ ಬೇರೆ ಬೇರೆ ಭಾಗಗಳಿಂದ ಜನರು ತೆರಳಿದ್ದಾರೆ. ಪ್ರಯಾಗ್ ರಾಜ್‌ನಲ್ಲಿ ಎಲ್ಲಿ ನೋಡಿಡದರೂ ಜನರು ತುಂಬಿಕೊಂಡಿದ್ದರಿಂದ ಸಾರಿಗೆ ಸಂಚಾರ ಸಮಸ್ಯೆ ಉಂಟಾಗಿ ಜನರು ತೊಂದರೆ ಸಿಲುಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+