ಲೋಕಸಭೆಯಲ್ಲಿ ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ಚರ್ಚೆ: ರಾಜ್ಯ ಸಂಸದರು, ಕೇಂದ್ರ ಸಚಿವರು ಗಪ್‌ಚುಪ್!
ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿವಾದವು ಹೊಸ ಸ್ವರೂಪ ಪಡೆದುಕೊಂಡಿದೆ. ಮಹಾರಾಷ್ಟ್ರವು ಕರ್ನಾಟಕಕ್ಕೆ ಹೊಸ ತಲೆನೋವು ತಂದಿಟ್ಟಿದೆ. ಹೌದು ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ಗಡಿ ವಿವಾದ ಹಾಗೂ ಭಾಷಾ ವಿವಾದ ಕಳೆದ ಒಂದು ತಿಂಗಳಿನಿಂದ ತುಸು ತಣ್ಣಗಾಗಿತ್ತು. ಕರ್ನಾಟಕ ಬಂದ್ ಸಹ ಈ ವಿಚಾರವಾಗಿ ನಡೆದಿತ್ತು. ಇದೀಗ ಗಡಿಭಾಗದಲ್ಲಿ ಪರಿಸ್ಥಿತಿ ತಣ್ಣಗಾಗಿದೆ. ಈ ರೀತಿ ಇರುವಾಗಲೇ ಮಹಾರಾಷ್ಟ್ರ ತನ್ನ ಹಳೇ ಚಾಳಿಯನ್ನು ಮುಂದುವರಿಸಿದೆ. ಈ ವಿವಾದವನ್ನು ರಾಷ್ಟ್ರ ಮಟ್ಟದಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಕರ್ನಾಟಕದ ಸಂಸದರು ಗುಪ್‌ಚುಪ್ ಆಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಲೋಕಸಭೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ವಿಷಯವನ್ನು ಅನವಶ್ಯಕವಾಗಿ ಪ್ರಸ್ತಾಪಿಸಲಾಗಿದ್ದು. ಇದೀಗ ಈ ವಿವಾದ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಬೆಳಗಾವಿ ಸೇರಿ ಗಡಿ ವಿವಾದ ಇರುವ ಪ್ರದೇಶಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು ಎನ್ನುವ ಆಗ್ರಹವನ್ನು ಮಹಾರಾಷ್ಟ್ರ ಮಾಡಿದ್ದು ಇದು ಕನ್ನಡಿಗರ ಕೆಂಗಣ್ಣಿಗೆ ಕಾರಣವಾಗಿದೆ.

ಕರ್ನಾಟಕದ ಬೆಳಗಾವಿ ವಿಚಾರವನ್ನು ಮಹಾರಾಷ್ಟ್ರದ ಕೆಲವರು ರಾಜಕಾರಣಿಗಳು ಹಾಗೂ ಎಂಇಎಸ್ ಪುಂಡರು ಪದೇ ಪದೇ ಪ್ರಸ್ತಾಪಿಸುತ್ತಿದ್ದಾರೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದವನ್ನು ಮಹಾರಾಷ್ಟ್ರದ ಶಿವಸೇನೆ (ಉದ್ಧವ್ ಠಾಕ್ರೆ ಬಣ)ಯ ಸಂಸದ ಪ್ರಸ್ತಾಪಿಸಿದ್ದಾರೆ. ಶಿವಸೇನೆಯ ಸಂಸದ ಅರವಿಂದ ಸಾವಂತ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಇದೀಗ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ.
ಉದ್ಧವ ಠಾಕ್ರೆ ಬಣದ ಶಿವಸೇನೆ ಸಂಸದ ಅರವಿಂದ ಸಾವಂತರಿಂದ ಉದ್ಧಟತನಕ್ಕೆ ಕರ್ನಾಟಕದ ಸಂಸದರು ಯಾವುದೇ ಪ್ರತಿಕ್ರಿಯನ್ನು ನೀಡದೆ ಇರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಲೋಕಸಭೆಯಲ್ಲೂ ಶಿವಸೇನೆ ಬಾಲಬಿಚ್ಚಿದ್ದರೂ ಕರ್ನಾಟಕದ ಸಂಸದರು ಗಪ್ ಚುಪ್ ಆಗಿದ್ದರು. ಸಣ್ಣ ಪ್ರತಿರೋಧವನ್ನೂ ಅವರು ತೋರಿಸಿಲ್ಲ. ಲೋಕಸಭೆಯಲ್ಲಿ ಶಿವಸೇನೆ ಉದ್ಧಟತನ ಹೇಳಿಕೆ ಕೊಟ್ಟರೂ ಕರ್ನಾಟಕದ ಸಂಸದರು ಹಾಗೂ ಕೇಂದ್ರ ಸಚಿವರು ಯಾವುದೇ ಪ್ರತಿರೋಧ ತೋರಿಲ್ಲ ಎಂದು ವರದಿಯಾಗಿದೆ.
ಮಹಾರಾಷ್ಟ್ರ ರಾಜ್ಯದ ನಿರ್ಮಾಣ ಮೇ 1, 1960ರಲ್ಲಿ ಆಗಿದೆ. ಅಂದಿನಿಂದಲೂ ಅವರು ಕರ್ನಾಟಕದ ಬೆಳಗಾವಿ, ಕಾರವಾರ, ನಿಪ್ಪಾಣಿ, ಬಾಲ್ಕಿ ಹಾಗೂ ಬೀದರ್ ಭಾಗ ಮಹಾರಾಷ್ಟ್ರಕ್ಕೆ ಸೇರಬೇಕು ಎನ್ನುತ್ತಿದ್ದಾರೆ. ಕೆಲವು ಮರಾಠಿ ಭಾಷಿಕರು ಮಹಾರಾಷ್ಟ್ರ ಸೇರ್ಪಡೆಗೆ ಹೋರಾಟ ಮಾಡ್ತಿದ್ದಾರೆ.
ಈಗಲೂ ಮಹಾರಾಷ್ಟ್ರ ಸೇರಿಸುವಂತೆ ಹೋರಾಟ ಜೀವಂತವಿದೆ ಎಂದು ಮಹಾರಾಷ್ಟ್ರ ಸಂಸದ ಅರವಿಂದ ಸಾವಂತ ಹೇಳಿದ್ದಾರೆ.
ಮುಂದುವರಿದು ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ಅನ್ಯಾಯ ಆಗುತ್ತಿದೆ. ಬಾಳಾಸಾಹೇಬ್ ಠಾಕ್ರೆ ದಿವಂಗತರಾದರೂ, ಗಡಿ ವಿವಾದ ಇತ್ಯರ್ಥವಾಗಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಎರಡು ರಾಜ್ಯದ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದರು. ಆಗ ಕರ್ನಾಟಕದ ಮುಖ್ಯಮಂತ್ರಿ ಬರಲಿಲ್ಲ. 2004ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಗಡಿ ವಿವಾದ ಬಂದರೂ ನ್ಯಾಯ ಸಿಕ್ಕಿಲ್ಲ. ಬೆಳಗಾವಿಯಲ್ಲಿ ಇರುವ ಮರಾಠಿ ಭಾಷಿಕರ ಪರ ಹೋರಾಟ ಮಾಡುವವರನ್ನು ಸಹ ಕರ್ನಾಟಕ ಸರ್ಕಾರ ಗಡಿಪಾರು ಮಾಡುತ್ತಿದೆ ಎಂದು ಅವರು ದೂರಿದ್ದಾರೆ.
ಎಂಇಎಸ್ ಮುಖಂಡ ಶುಭಂ ಶಳಕೆಯನ್ನ ಗಡಿ ಪಾರು ಮಾಡಲಾಗಿದೆ ಎನ್ನುವ ವಿಚಾರವನ್ನು ಅವರು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಅಲ್ಲದೇ ಮರಾಠಿಗರು ಹೆಚ್ಚಾಗಿ ಇರುವ ಕರ್ನಾಟಕದ ಭಾಗಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ ಹಾಗೂ ಬಾಲ್ಕಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು ಎಂದು ಒತ್ತಾಯಿಸಲಾಗಿದೆ.












Click it and Unblock the Notifications