ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೆ ಪುಣೆ ಮತ್ತು ಮುಂಬೈ ಹೇಗೆ ಹತ್ತಿರ; ಇಲ್ಲಿದೆ ಉತ್ತರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25: ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ವಾಣಿಜ್ಯ ನಗರಿ ಮುಂಬೈ ಹಾಗೂ ಪುಣೆೆ ನಗರಿಗಳು ಮತ್ತಷ್ಟು ಸನ್ನಿಹಿತವಾಗಲಿವೆ. ಬೆಂಗಳೂರು, ಪುಣೆ ಮತ್ತು ಮುಂಬೈ ನಡುವೆ ಸೂಪರ್‌ಫಾಸ್ಟ್ ರಸ್ತೆ ಕಾರಿಡಾರ್‌ಗೆ ಮುಂದಿನ ತಿಂಗಳು ಚಾಲನೆ ಸಿಗಲಿದೆ. ಮುಂಬೈ-ನಾಗ್ಪುರ 'ಸಮೃದ್ಧಿ ಕಾರಿಡಾರ್' ಮುಂದಿನ ತಿಂಗಳ ಹೊತ್ತಿಗೆ ತೆರೆದುಕೊಳ್ಳಲಿದೆ.

ಪುಣೆ ರಿಂಗ್ ರಸ್ತೆಯ ಕಂಜಾಲೆಯಲ್ಲಿ ಎಂಎಸ್‌ಆರ್‌ಡಿಸಿ ಪ್ರಸ್ತಾವಿತ ರಸ್ತೆಯನ್ನು ನಿರ್ಮಿಸುತ್ತಿದೆ. ರಿಂಗ್ ರೋಡ್ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಕುರ್ಸೆಯಿಂದ ಪುಣೆ ಕಡೆಗೆ ಪ್ರಾರಂಭವಾಗುತ್ತದೆ. ಈ ರಸ್ತೆಯು ಅಸ್ತಿತ್ವದಲ್ಲಿರುವ ಹೆದ್ದಾರಿಗೆ ಸಮಾನಾಂತರವಾಗಿ ಕರ್ಜಾತ್ ಕಡೆಗೆ ಚಲಿಸುತ್ತದೆ. ಅಲ್ಲಿಂದ ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣವನ್ನು NHAI ಪ್ರಾರಂಭಿಸುತ್ತದೆ. ಬೆಂಗಳೂರು ಮಹಾನಗರ ಪ್ರದೇಶದ ಉದ್ದೇಶಿತ ಸ್ಯಾಟಲೈಟ್ ರಿಂಗ್ ರಸ್ತೆಯಲ್ಲಿ ಮುತಗಡಹಳ್ಳಿಯಲ್ಲಿ ಈ ರಸ್ತೆಯು ಮುಕ್ತಾಯಗೊಳ್ಳುತ್ತದೆ.

ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಿಂದ ಪ್ರಯಾಣಿಕರಿಗೆ ಆಗುವ ಲಾಭಗಳೇನು?ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಿಂದ ಪ್ರಯಾಣಿಕರಿಗೆ ಆಗುವ ಲಾಭಗಳೇನು?

ನೂತನ ಎಕ್ಸ್‌ಪ್ರೆಸ್‌ವೇ ರಸ್ತೆ ನಿರ್ಮಾಣದಿಂದ ಬೃಹತ್ ನಗರಗಳ ನಡುವಿನ ಅಂತರವು ತಗ್ಗಲಿದೆ. ಬೆಂಗಳೂರು, ಪುಣೆ ಮತ್ತು ಮುಂಬೈ ನಡುವೆ ಈ ರಸ್ತೆಯಿಂದಾಗಿ 95 ಕಿಲೋ ಮೀಟರ್ ಅಂತರವು ಕಡಿಮೆಯಾಗಲಿದೆ. ಈ ಎಕ್ಸ್‌ಪ್ರೆಸ್‌ವೇ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

ಎಕ್ಸ್‌ಪ್ರೆಸ್‌ವೇ ಕಾಮಗಾರಿ ಬಗ್ಗೆ ತಿಳಿಯಿರಿ

ಎಕ್ಸ್‌ಪ್ರೆಸ್‌ವೇ ಕಾಮಗಾರಿ ಬಗ್ಗೆ ತಿಳಿಯಿರಿ

ಪೂರ್ವಭಾವಿ ಸಮೀಕ್ಷೆ ಮತ್ತು ಜೋಡಣೆಗೆ ಅನುಮೋದನೆ ನೀಡಲಾಗಿದೆ. ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಎಕ್ಸ್‌ಪ್ರೆಸ್‌ವೇ ನಿರ್ಮಿಸುವ ಅಂತಿಮ ಪ್ರಸ್ತಾವನೆಯನ್ನು ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ಎನ್‌ಎಚ್‌ಎಐಗೆ ಸಲ್ಲಿಸಲಾಗುವುದು. ಎಂಎಸ್‌ಆರ್‌ಡಿಸಿಯು ಒಂಬತ್ತು ತಿಂಗಳೊಳಗೆ 701 ಕಿಮೀ ಮುಂಬೈ-ನಾಗ್ಪುರ ಸಮೃದ್ಧಿ ಕಾರಿಡಾರ್‌ಗಾಗಿ ಮಾಡಿದ ದಾಖಲೆಯ ಭೂಸ್ವಾಧೀನವನ್ನು ಪೂರ್ಣಗೊಳಿಸಲು ತಿಳಿಸಲಾಗಿದೆ.

ಯಾವ ಜಿಲ್ಲೆಗಳಲ್ಲಿ ಹಾದು ಹೋಗುವುದು ಎಕ್ಸ್‌ಪ್ರೆಸ್‌ವೇ

ಯಾವ ಜಿಲ್ಲೆಗಳಲ್ಲಿ ಹಾದು ಹೋಗುವುದು ಎಕ್ಸ್‌ಪ್ರೆಸ್‌ವೇ

ಹೊಸದಾಗಿ ನಿರ್ಮಿಸಲಾಗಿರುವ ಎಕ್ಸ್‌ಪ್ರೆಸ್‌ವೇ ರಸ್ತೆಯು ಒಟ್ಟು 12 ಜಿಲ್ಲೆಗಳನ್ನು ಹಾದು ಹೋಗುತ್ತದೆ. ಪುಣೆ, ಸತಾರಾ, ಸಾಂಗ್ಲಿ, ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹಾದು ಹೋಗುತ್ತಿದೆ.

ಎಕ್ಸ್‌ಪ್ರೆಸ್‌ವೇ ಮಧ್ಯದಲ್ಲಿ 10 ನದಿಗಳು

ಎಕ್ಸ್‌ಪ್ರೆಸ್‌ವೇ ಮಧ್ಯದಲ್ಲಿ 10 ನದಿಗಳು

ಬೆಂಗಳೂರು-ಪುಣೆ-ಮುಂಬೈ ನಡುವಿನ ಎಕ್ಸ್‌ಪ್ರೆಸ್‌ವೇ ಮಧ್ಯೆ 10 ನದಿಗಳು ಹಾದು ಹೋಗುತ್ತವೆ. ನೀರಾ, ಯರಳ, ಚಂದ ನದಿ, ಅಗ್ರಣಿ, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ತುಂಗಭದ್ರಾ, ಚಿಕ್ಕ ಹಗರಿ ಮತ್ತು ವೇದಾವತಿ ನದಿಗಳು ಈ ಹೆದ್ದಾರಿಯ ಮಾರ್ಗಮಧ್ಯದಲ್ಲಿ ಕಾಣಿಸಿಕೊಳ್ಳುತ್ತವೆ.

ವ್ಯಾಪಾರ-ವಹಿವಾಟಿಗೆ ಪ್ರೋತ್ಸಾಹ

ವ್ಯಾಪಾರ-ವಹಿವಾಟಿಗೆ ಪ್ರೋತ್ಸಾಹ

ಮುಂಬೈ ಮಾತ್ರವಲ್ಲದೇ ಗುಜರಾತ್, ನಾಸಿಕ್ ಮತ್ತು ಪುಣೆ, ಸತಾರಾ ಮತ್ತು ಕೊಲ್ಲಾಪುರದಿಂದ ಸಂಚಾರಕ್ಕೆ ಮಾರ್ಗವಾಗಿರುವ ಅಸ್ತಿತ್ವದಲ್ಲಿರುವ ಹೆದ್ದಾರಿಗಳ ದಟ್ಟಣೆಯಿಂದಾಗಿ ವಾಣಿಜ್ಯ ಚಟುವಟಿಕೆಗಳು ಸುಗಮವಾಗುತ್ತವೆ. 14 ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಕಾಣಿಸಿಕೊಳ್ಳುವುದರ ಜೊತೆಗೆ 22 ಇಂಟರ್‌ಚೇಂಜ್‌ಗಳು, 55 ಮೇಲ್ಸೇತುವೆಗಳು ಹಾದು ಹೋಗುತ್ತವೆ. ಎಕ್ಸ್‌ಪ್ರೆಸ್‌ವೇಯ ಎರಡೂ ಬದಿಯಲ್ಲಿ ಮರಗಳ ನೆಡಲಾಗಿದೆ.

English summary
Karnataka Capital city Bengaluru Will be more closer to Pune, Mumbai with this new expressway. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X