Karnataka Elections: ಸೋಲಿನ ಹತಾಶೆಯಲ್ಲಿರುವ ಬಿಜೆಪಿ ಎಡವಿ ಪಾತಾಳಕ್ಕೆ ಬಿದ್ದಿದ್ದು ಹೇಗೆ?
ರಾಜ್ಯ ವಿಧಾನಸಭಾ ಚುನಾವಣೆಗೆ ಬುಧವಾರ (ಮೇ 10) ಮತದಾನ ನಡೆದಿದೆ. ಇನ್ನೇನು ಎರಡೇ ದಿನದಲ್ಲಿ ಫಲಿತಾಂಶ ಹೊರಬೀಳಲಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಂದಿದ್ದು ರಾಜ್ಯ ರಾಜಕೀಯದ ಬಗ್ಗೆ ಭಾರೀ ಕುತೂಹಲವನ್ನುಂಟು ಮಾಡಿವೆ. ಕೆಲ ಸಮೀಕ್ಷೆಗಳು ಬಿಜೆಪಿಗೆ ಬಹುಮತ ಎಂದರೆ ಇನ್ನೂ ಕೆಲವು ಕಾಂಗ್ರೆಸ್‌ಗೆ ಬಹುಮತ ಎಂದಿವೆ. ಆದರೆ ಬುಧವಾರ ಬಹಿರಂಗಗೊಂಡ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್‌ಗೆ ಈ ಬಾರಿ ಗೆಲುವು ಎಂದು ಹೇಳಿವೆ. ಹೀಗಾಗಿ ಬಿಜೆಪಿ ಸೋಲಿನ ಹತಾಶೆಯಲ್ಲಿದೆ. ಅಷ್ಟಕ್ಕೂ ಸಮೀಕ್ಷೆಗಳ ಅಧಾರದ ಮೇಲೆ ಮಾತನಾಡುವುದಾದರೆ ಬಿಜೆಪಿ ಸೋಲು ಕಂಡಿದ್ದು ಯಾಕೆ? ಇದಕ್ಕೆ ಉತ್ತರ ನೋಡುತ್ತಾ ಹೋಗೋಣ.
ರಾಜ್ಯದಲ್ಲಿ ಅಧಿಕಾರದ ಅಮಲಿನಲ್ಲಿದ್ದ ಬಿಜೆಪಿಗೆ ಮತದಾನ ಪ್ರಭುಗಳು ಬಿಗ್ ಶಾಕ್ ಕೊಟ್ಟಿದ್ದಾರೆ. ನಾವೇ ಗ್ರೇಟು, ನಮ್ಮಿಂದಲೇ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿರೋದು ಅನ್ನೋ ರೀತಿ ನಡೆದುಕೊಳ್ಳುತ್ತಿದ್ದ ಬಿಜೆಪಿ ನಾಯಕರಿಗೆ ರಾಜ್ಯದ ಜನ ಧಿಮಾಕು ಇಳಿಸಿದ್ದಾರೆ.

ಬಿಜೆಪಿ ಮೇಲೆ 40% ಕಮಿಷನ್ ಆರೋಪ
ಹೌದು.. ರಾಜ್ಯ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಸೇರಿದಂತೆ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು. ಆದರೆ ಇವುಗಳನ್ನೆಲ್ಲಾ ಮರೆಮಾಚಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವನ್ನು ಭ್ರಷ್ಟ ಪಕ್ಷ ಎಂದು ಬಿಂಬಿಸಲು ಹೊರಡಿಟ್ಟರು. ಆದರೆ ಬುದ್ಧವಂತ ಕನ್ನಡಿಗರು ಅಸಲಿಯಾವುದು ನಕಲಿ ಯಾವುದು ಎಂದು ಅರ್ಥ ಮಾಡಿಕೊಂಡಿದ್ದರು. ಹೀಗಾಗಿ ಕಾಂಗ್ರೆಸ್‌ಗೆ ಮತ ಹಾಕಿ ಬಿಜೆಪಿಯನ್ನು ಮಕಾಡೆ ಮಲಗಿಸಿದ್ದಾರೆ.
ಸಿದ್ದರಾಮಯ್ಯ ವರ್ಚಸ್ಸು
ಎಲ್ಲಕ್ಕಿಂತ ಮುಖ್ಯಮಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವರ್ಚಸ್ಸು, ಈ ಹಿಂದಿನ ಸರ್ಕಾರದಲ್ಲಿ ಅವರು ಕೊಟ್ಟಂತ ಸಾಲು ಸಾಲು ಯೋಜನೆಗಳು ಕನ್ನಡಿಗರ ಕಣ್ಣು ತೆರೆಸಿವೆ. ಧರ್ಮ, ಜಾತಿ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿ ನಾಯಕರ ಬಣ್ಣದ ಮಾತುಗಳಿಗೆ ಜನ ಸೊಪ್ಪು ಹಾಕಲೇ ಇಲ್ಲ. ಬಿಜೆಪಿ ಸರ್ಕಾರದ ಪ್ರತೀ ಒಂದು ತಪ್ಪುಗಳನ್ನು ಸಿದ್ದರಾಮಯ್ಯ ಒಂದೊಂದಾಗಿ ಬಿಚ್ಚಿಡುತ್ತಲೇ ಇದ್ದರು. ಮೇನ್ ಸ್ಟ್ರೀಂ ಮೀಡಿಯಾಗಳು ಇದನ್ನು ಮರೆಮಾಚಿ ಬಿಜೆಪಿ ಪರ ನಿಂತ್ರು, ಡಿಜಿಟಲ್ ಮಿಡಿಯಾ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದವು. ಹೀಗಾಗಿ ಜನರಿಗೆ ವಾತ್ಸವ ಅರಿವಿಗೆ ಬಂದಿದೆ.

ಈ ಬಾರಿ ಕಾಂಗ್ರೆಸ್ ಅಧಿಕಾರ ಬರುತ್ತಿದೆ ಅಂದರೆ ಅದಕ್ಕೆ ಯ್ಯೂಟುಬ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್‌ನಂತ ಡಿಜಿಟಲ್ ಮಿಡಿಯಾಗಳು ವಾಸ್ತವತೆಯನ್ನು ತೆರೆದಿಟ್ಟಿದ್ದೇ ಕಾರಣ ಎನ್ನಲಾಗುತ್ತಿದೆ. ಇವು ಕಾಂಗ್ರೆಸ್‌ಗೆ ಆನೆ ಬಲವನ್ನು ತಂದುಕೊಟ್ಟಿವೆ.
ನಡೆಯಲಿಲ್ಲ ಮೋದಿ ಮ್ಯಾಜಿಕ್
ಇನ್ನೂ ಲೋಕಸಭಾ ಚುನಾವಣೆಯಲ್ಲಿ ನಡೆದ ಮೋದಿ ಮ್ಯಾಜಿಕ್ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾಕೆ ನಡೆಯಲಿಲ್ಲ ಅಂತ ನೋಡೋದಾದ್ರೆ, ಇಲ್ಲಿ ಕೇಂದ್ರ ಬಿಜೆಪಿ ನಾಯಕರ ತಪ್ಪು ಕಲ್ಪನೆ ಎದ್ದು ಕಾಣುತ್ತಿದೆ. ಪ್ರಧಾನಿ ಮೋದಿ ತಮ್ಮಿಂದಲೇ ಸರ್ಕಾರ ಎನ್ನುವ ಭ್ರಮೆ ಲೋಕದಲ್ಲಿದ್ದಾರೆ. ಈ ಬಗ್ಗೆ ಬಿಎಸ್ ಯಡಿಯೂರಪ್ಪ ಅವರಿಗೆ ಹೇಳಿದ್ದಕ್ಕೆ ಬಿಎಸ್‌ವೈ ಅವರನ್ನೇ ಪಕ್ಷದಿಂದ ಸಂಪೂರ್ಣವಾಗಿ ಸೈಡ್‌ಲೈನ್ ಮಾಡಿದ್ರು ಎನ್ನಲಾಗುತ್ತಿದೆ.

ಇದರಿಂದಾಗಿ ಬಿಎಸ್‌ವೈ ಎಷ್ಟು ಪ್ರಚಾರ ಮಾಡಬೇಕು ಅಷ್ಟು ಪ್ರಚಾರ ನಡೆಸಿ, ಎಲ್ಲವನ್ನೂ ಮೋದಿ ಅವರ ಮೇಲೆಯೇ ಹಾಕಿದ್ದರು. ಇನ್ನೂ ಚುನಾವಣೋತ್ತರ ಸಮೀಕ್ಷೆಗಳು ಅದ್ಯಾವಾಗ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದು ಹೇಳಿದ್ವೋ ಆಗ ಮತ್ತೆ ಬಿಎಸ್‌ವೈ ಗೆ ಬಲ ತುಂಬಲು ನೋಡಿದ್ರು ಕೇಂದ್ರ ಬಿಜೆಪಿ ನಾಯಕರು. ಜೊತೆಗೆ ಮೋದಿ ಕೂಡ ಸಾಮಾನ್ಯ ಕಾರ್ಯಕರ್ತರಂತೆ ಕರ್ನಾಟಕದಲ್ಲಿ ಠಿಕ್ಕಾಣಿ ಹೂಡಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ನಿರಂತರ ಪ್ರಚಾರ ನಡೆಸಿದ್ರು. ಆದರೆ ಅಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು.
ಕಾಂಗ್ರೆಸ್ ಮೇಲೆ ಮೋದಿ ಆರೋಪ
ಇನ್ನೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಮೋದಿ ಗಂಭೀರ ಆರೋಪಗಳನ್ನು ಮಾಡಿದ್ದರು. ಆದರೆ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಇದ್ದ 40% ಕಮಿಷನ್ ಆರೋಪದ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಕರ್ನಾಟಕಕ್ಕೆ ನೆರೆ ಪರಿಹಾರ, ಜಿಎಸ್‌ಟಿ ಪಾಲು ಸೇರಿದಂತೆ ಸಾಲು ಸಾಲು ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಹೀಗಿದ್ರು ಮೋದಿ ಮತ್ತೆ ಮತ್ತೆ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಜಪ ಮಾಡ್ತಾಯಿದ್ದರು. ಇದು ನೀರಲ್ಲಿ ಮಾಡಿದ ಹೋಮದಂತಾಗಿ ಹೋಗಿದೆ.
ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕೊಟ್ಟ ಲೆಕ್ಕ, ರಾಜ್ಯ ಬಿಜೆಪಿ ಮೇಲಿನ ಭ್ರಷ್ಟಚಾರದ ಅಂಕಿಅಂಶಗಳು ರಾಜ್ಯದ ಮತದಾರರಿಗೆ ಸರಿ ಎನಿಸಿದೆ. ಇದೇ ಕಾರಣಕ್ಕೆ ಸಿದ್ದು ಮುಂದೆ ಮೋದಿ ಆಟ ನಡಿಯಲೇ ಇಲ್ಲ ಎನ್ನುವುದು ಬಹುತೇಕ ಮಾತು.












Click it and Unblock the Notifications