ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಡಿ.29 ಕೊನೆಯ ದಿನಾಂಕ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಡಿಸೆಂಬರ್ 23: 2018 ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದು, ಚುನಾವಣೆ ದಿನಾಂಕ ಫೆಬ್ರವರಿ 15 ರಂದು ಘೋಷಣೆಯಾಗಲಿದೆ.

ವೋಟರ್ ಐಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಅಥವಾ ಅಳಿಸಿಹಾಕುವ(ಡಿಲೀಟ್)ದಕ್ಕೆ ಡಿ.29, 2017 ಕೊನೆಯ ದಿನಾಂಕವಾಗಿದೆ. ಈ ಬಾರಿ ಕರ್ನಾಟಕದಲ್ಲಿ 72 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಲಿದ್ದಾರೆ. ಸದ್ಯಕ್ಕೆ ಕರ್ನಾಟಕದಲ್ಲಿರುವ ಒಟ್ಟು ಮತದಾರರ ಸಂಖ್ಯೆ 4,90,06,901. ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಈಗಾಗಲೇ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ಡಿ.6 ರಿಂದ 21ರವರೆಗೆ ಈ ಪ್ರತಿಯನ್ನು ಎಲ್ಲಾ ಮುನ್ಸಿಪಲ್, ಗ್ರಾಮ ಪಂಚಾಯತ್ ಮತ್ತು ಪಟ್ಟಣ ಪಂಚಾಯತ್ ಘಟಕಗಳಿಗೂ ನೀಡಲಾಗಿದೆ.

Karnataka Assembly Elections 2018: Last date to add delete names from voter list is Dec 29

2013 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 4,18,38,541 ಮತದಾರರಿದ್ದರು. ರಾಜ್ಯದಲ್ಲಿ ಈ ವರ್ಷ 72 ಲಕ್ಷ ಹೆಚ್ಚುವರಿ ಮತದಾರರಿದ್ದು, 2,41,34,805 ಮಹಿಳಾ ಮತದಾರರು, 2,48,67,756 ಪುರುಷ ಮತದಾರರು ಮತ್ತು 4340 ಲಿಂಗ ಅಲ್ಪಸಂಖ್ಯಾತ ಮತದಾರರಿದ್ದಾರೆ ಎಂದು ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಹೇಳಿದ್ದಾರೆ.

ಮತದಾರರ ಕರಡು ಪಟ್ಟಿ ಪ್ರಕಟ: ಬೆಂಗಳೂರಿನಲ್ಲಿ 86 ಲಕ್ಷ ಮತದಾರರು

ಬೆಂಗಳೂರಿನಲ್ಲಿ 7.69 ಲಕ್ಷ ಮತದಾರರು ತಮ್ಮ ಹೆಸರನ್ನು ಹೊಸದಾಗಿ ಸೇರಿಸಿದ್ದು, ಇವರಲ್ಲಿ ಬಹುಪಾಲು ಎಲ್ಲರೂ 18-19 ವರ್ಷದವರು. ಬೆಂಗಳೂರಿನ ಒಟ್ಟು 28 ವಿಧಾನಸಭಾ ಕ್ಷೇತ್ರಗಳಲ್ಲಿ 85,88,762 ಮತದಾರರಿದ್ದು, ಅವರಲ್ಲಿ 45,02,576 ಪುರುಷ ಮತದಾರರು, 40,84,802 ಮಹಿಳಾ ಮತದಾರರು ಮತ್ತು 1384 ಲಿಂಗ ಅಲ್ಪಸಂಖ್ಯಾತ ಮತದಾರರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka is likely to witness 72 lakh new voters as the state goes to polls in 2018. The final voters list for the Karnataka Assembly Elections 2018 will be announced on February 15. Currently the process to identify or remove voters from the list is on. If you want to either add or delete names from the voter’s list, then the deadline for the same is December 29.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ