ಲೋಕಸಭಾ ಭದ್ರತಾ ವೈಫಲ್ಯ: ಬೆಳಗಾವಿ ಅಧಿವೇಶನದಲ್ಲಿ ವಾಗ್ವಾದ, ಸದನ ಮುಂದೂಡಿದ ಸ್ಪೀಕರ್!
ಕರ್ನಾಟಕ ವಿಧಾನಸಭೆಯಲ್ಲಿ ಬುಧವಾರ ಭದ್ರತಾ ಲೋಪದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಕೋಲಾಹಲ ಉಂಟಾದ ಕಾರಣ ಕಾರಣ ಸ್ಪೀಕರ್ ಯುಟಿ ಖಾದರ್ ಅವರು ಸದನವನ್ನು ಸಂಕ್ಷಿಪ್ತವಾಗಿ ಮುಂದೂಡಬೇಕಾಯಿತು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಅವರು ಸಂಸತ್ತಿನೊಳಗೆ ನಡೆದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಅಧಿವೇಶನದಲ್ಲಿ ಹೇಳಿದೆ ನೀಡಿದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ, ಗೃಹ ಸಚಿವ ಜಿ.ಪರಮೇಶ್ವರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನೆಯನ್ನು ಖಂಡಿಸಿದರು ಮತ್ತು ಹೆಚ್ಚಿನ ಭದ್ರತಾ ವ್ಯವಸ್ಥೆಗೆ ಕರೆ ನೀಡಿದರು. ಸಮರ್ಪಕವಾಗಿ ಪರಿಶೀಲನೆ ನಡೆಸಿದ ನಂತರವೇ ಪಾಸ್‌ಗಳನ್ನು ನೀಡಬೇಕು ಎಂದು ಅವರು ಹೇಳಿದರು.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಹೆಸರಿಸಿದ ನಂತರ ಕೋಲಾಹಲ ಉಂಟಾಯಿತು. "ಪ್ರತಾಪ್ ಸಿಂಹ ಒಬ್ಬ ಬುದ್ಧಿವಂತ ಮನುಷ್ಯ. ಅಂತಹವರಿಗೆ ಯಾಕೆ ಪಾಸ್ ಕೊಟ್ಟಿದ್ದಾನೋ ಗೊತ್ತಿಲ್ಲ ಸಂಸದರು ಇಲಿಗಳಂತೆ ಓಡಿದರು" ಎಂದು ಡಿಕೆ ಶಿವಕುಮಾರ್ ಹೇಳಿದರು.
ಅಶೋಕ್ ಆಕ್ಷೇಪ
ಪ್ರತಾಪ್ ಸಿಂಹ ಅವರ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಅಶೋಕ, ಶಿವಕುಮಾರ್ ಅವರ ಸಹೋದರ ಡಿ ಕೆ ಸುರೇಶ್ ಕೂಡ ಸಂಸದರಾಗಿದ್ದಾರೆ. "ಪಾಸು ಕೊಟ್ಟವರು ಅವರೇ ಆಗಿದ್ದರೆ? ಶಿವಕುಮಾರ್ ಇದನ್ನು ರಾಜಕೀಯಗೊಳಿಸಬಾರದು" ಎಂದು ಸಮರ್ಥನೆ ಮಾಡಿಕೊಂಡರು.
ಸಂಸತ್ತಿನ ಅತಿಕ್ರಮಣದಾರರಿಗೆ ಪಾಸ್ ನೀಡಿದ್ದು ಕಾಂಗ್ರೆಸ್ ಸಂಸದರಾಗಿದ್ದರೆ ಬಿಜೆಪಿ ರಾದ್ದಾಂತ ಮಾಡುತ್ತಿತ್ತು ಎಂದು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಕಾಂಗ್ರೆಸ್ ಸಂಸದರಾಗಿದ್ದರೆ ಇಷ್ಟೊತ್ತಿಗೆ ಬಿಜೆಪಿಯವರು ನಮ್ಮನ್ನು ದೇಶದ್ರೋಹಿಗಳೆಂದು ಬಿಂಬಿಸುತ್ತಿದ್ದರು. ಬಿಜೆಪಿ ಸಂಸದರ ಕ್ರಮವನ್ನು ನಾವು ಪ್ರಶ್ನಿಸಬೇಕಲ್ಲವೇ? ಅವರು ಹೇಳಿದರು.
ಈ ವಿಷಯವನ್ನು ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದ ಅಶೋಕ, "ಮಂಗಳೂರು ಕುಕ್ಕರ್ ಸ್ಫೋಟದ ಆರೋಪಿಗಳು ತಮ್ಮ ಸಹೋದರರು ಎಂದು ಶಿವಕುಮಾರ್ ಹೇಳಿದಾಗ ನಾವು ಅವರನ್ನು ಭಯೋತ್ಪಾದಕ ಎಂದು ಬಿಂಬಿಸಲಿಲ್ಲ" ಎಂದು ಉತ್ತರ ನೀಡಿದರು.
ಭದ್ರತಾ ಉಲ್ಲಂಘನೆಯು ಭಾರತದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳಿಗೆ ಎಚ್ಚರಿಕೆ ಎಂದು ಅಶೋಕ್ ಹೇಳಿದರು. "ಶಾಸಕರಾಗಿ, ನಮ್ಮ ಪಿಎಗಳು ಕೇಳುವವರಿಗೆ ನೀಡುವ ಪಾಸ್‌ಗಳಿಗೆ ಸಹಿ ಹಾಕುತ್ತೇವೆ. ಒಳ್ಳೆಯ ಉದ್ದೇಶದಿಂದ ಪಾಸ್‌ಗಳನ್ನು ನೀಡುತ್ತೇವೆ. ಆದರೆ ಇಂತಹ ಘಟನೆಗಳು ನಡೆದಾಗ ನಾವು ಖಳನಾಯಕರಾಗುತ್ತೇವೆ" ಎಂದು ಹೇಳಿದರು.
ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಪಾಸ್‌ಗಳನ್ನು ನೀಡುವಾಗ ಗುರುತಿನ ಚೀಟಿ ಕಡ್ಡಾಯವಾಗಿರಬೇಕು. "ಮಂಗಳವಾರ ಸುವರ್ಣ ವಿಧಾನ ಸೌಧದ ಕಾರಿಡಾರ್‌ನಲ್ಲಿ 300-400 ಜನರಿದ್ದರು. ಮುಖ್ಯಮಂತ್ರಿಗಳು ಲಿಫ್ಟ್‌ನತ್ತ ನಡೆಯಲು ಸಹ ಸಾಧ್ಯವಾಗಲಿಲ್ಲ, ಪೊಲೀಸರನ್ನು ತರಾಟೆಗೆ ತೆಗೆದುಕೊಂಡೆ" ಎಂದು ಹೇಳಿದರು, ಶಾಸಕಾಂಗವು ಅವರ ಅಧಿಕಾರ ವ್ಯಾಪ್ತಿಯಾಗಿರುವುದರಿಂದ ಭದ್ರತೆಯನ್ನು ಹೆಚ್ಚಿಸುವ ಬಗ್ಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಸ್ಪೀಕರ್ ಅವರನ್ನು ಒತ್ತಾಯಿಸಿದರು.
ಗೊತ್ತಿರುವವರಿಗೆ ಮಾತ್ರ ಪಾಸ್ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. "ಆರಂಭದಲ್ಲಿ, ಇದು ಭದ್ರತಾ ಉಲ್ಲಂಘನೆಯಂತೆ ಕಾಣುತ್ತದೆ. ಇಬ್ಬರು ವ್ಯಕ್ತಿಗಳು ಗ್ಯಾಸ್ ಕ್ಯಾನ್‌ಗಳನ್ನು ಹೊತ್ತೊಯ್ದರು. ಅವರನ್ನು ಸರಿಯಾಗಿ ಪರಿಶೀಲಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ," ಎಂದರು.












Click it and Unblock the Notifications