ಕಲಾಪದಿಂದ ಹೊರದಬ್ಬಲ್ಪಟ್ಟ ಕಪಿಲ್ ಮಿಶ್ರಾ
ದೆಹಲಿ ವಿಧಾನಸಭೆಯಲ್ಲಿ ಬುಧವಾರ ನಡೆದ ಕಲಾಪದ ವೇಳೆ ಮಾತನಾಡಲು ಎದ್ದು ನಿಂತ ಆಮ್ ಆದ್ಮಿ ಪಾರ್ಟಿ ಪಕ್ಷದ ಮಾಜಿ ಸದಸ್ಯ ಕಪಿಲ್ ಮಿಶ್ರಾ ಮೇಲೆ ಹಲ್ಲೆ; ಆನಂತರ ಅವರನ್ನು ಕಲಾಪದಿಂದ ಉಚ್ಛಾಟನೆ.
ನವದೆಹಲಿ, ಮೇ 31: ಆಮ್ ಪಾರ್ಟಿಯಿಂದ ಇದೇ ತಿಂಗಳ ಆರಂಭದಲ್ಲಿ ಉಚ್ಛಾಟನೆಗೊಂಡಿದ್ದ ಕಪಿಲ್ ಮಿಶ್ರಾ, ಅವರು ಬುಧವಾರ ದೆಹಲಿ ವಿಧಾನಸಭೆಯಲ್ಲಿ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಅವರನ್ನು ವಿಧಾನಸಭೆಯಿಂದ ಉಚ್ಛಾಟನೆಗೊಳಿಸಲಾಯಿತು.
ತೀವ್ರ ಉದ್ವೇಗದಲ್ಲಿದ್ದ ಅವರನ್ನು ಸಭೆಯ ಮಾರ್ಷಲ್ ಗಳು ಬಲವಂತವಾಗಿ ಎತ್ತಿ ತಂದು ಹೊರಹಾಕಿದ ಘಟನೆಯೂ ನಡೆಯಿತು.[ಕೇಜ್ರಿವಾಲ್ ವಿರುದ್ಧ ಆರೋಪ ಮಾಡಿ ಕುಸಿದು ಬಿದ್ದ ಕಪಿಲ್ ಮಿಶ್ರಾ]

ಕಲಾಪದ ವೇಳೆಯಲ್ಲಿ ಕಪಿಲ್ ಮಿಶ್ರಾ ಅವರು, ಮಾತನಾಡಲು ಎದ್ದು ನಿಂತಾಗ ಅವರನ್ನು ಆಮ್ ಆದ್ಮಿ ಪಕ್ಷದ ಸದಸ್ಯರು ತಡೆದರು. ಇದು ಆಮ್ ಆದ್ಮಿ ಪಕ್ಷದ ಸದಸ್ಯರು ಹಾಗೂ ಕಪಿಲ್ ನಡುವೆ ವಿವಾದಕ್ಕೆ ಕಾರಣವಾಯಿತು.
ಆನಂತರ, ಮಾತಿಗೆ ಮಾತು ಬೆಳೆದು ರಂಪಾಟವಾಗಿ, ಕಪಿಲ್ ಮಿಶ್ರಾ ಹಾಗೂ ಆಮ್ ಆದ್ಮಿ ಪಾರ್ಟಿ ಸದಸ್ಯರು ಪರಸ್ಪರ ಕೈ ಮಿಲಾಯಿಸುವ ಹಂತಕ್ಕ ಹೋದರು. ಆನಂತರವೇ ಕಪಿಲ್ ಅವರನ್ನು ಹೊರ ತಂದು ಬಿಡಲಾಯಿತು.[ಹಗರಣ ಬಯಲಿಗೆಳೆಯುತ್ತೇನೆ ಎಂದ ಸಚಿವನನ್ನು ಹೊರ ದಬ್ಬಿದ ಕೇಜ್ರಿ]
ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಪಿಲ್, ''ವಿಧಾನಸಭೆಯಲ್ಲಿ ನಾನು ಮಾತನಾಡಲು ನಿಂತಾಗ ನನ್ನನ್ನು ಅಡ್ಡಿಪಡಿಸಲಾಗಿದೆ. ಎಲ್ಲರೂ ಇದನ್ನು ನೋಡಿದರು. ಕೇಜ್ರಿವಾಲ್ ಅವರಂತೂ ತಮ್ಮ ಆಸನದಲ್ಲಿ ಕುಳಿತುಕೊಂಡು ನಗುತ್ತಿದ್ದರು. ನನ್ನನ್ನು ಹೊಡೆಯಲಾಯಿತು. ತಳ್ಳಾಡಲಾಯಿತು. ಕೊನೆಗೆ ಮಾರ್ಷಲ್ ಗಳ ಸಹಾಯದಿಂದ ಹೊರಹಾಕಲಾಯಿತು. ಉಪ ಮುಖ್ಯಮಂತ್ರಿಯಾಗಿರುವ ಮನೀಶ್ ಸಿಸೋಡಿಯಾ ಅವರ ಸೂಚನೆ ಮೇರೆಗೆ ನನ್ನನ್ನು ಹೊರಹಾಕಲಾಗಿದೆ'' ಎಂದು ಆರೋಪಿಸಿದರು.












Click it and Unblock the Notifications