ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿಯ ಮೊಬೈಲ್ ಕದ್ದ ಪೊಲೀಸಪ್ಪ
ಕಾನ್ಪುರ ಅಕ್ಟೋಬರ್ 11: ಪೊಲೀಸರು ಸಮಾಜದಲ್ಲಿ ನಡೆಯುವ ಕಳ್ಳತನ, ದರೋಡೆ, ಸುಲಿಗೆಯನ್ನು ಮಟ್ಟ ಹಾಕಲು ಹಗಲಿರುಳು ಕೆಲಸ ಮಾಡುತ್ತಾರೆ. ಅವರ ಈ ಸಮಾಜ ಸೇವೆಯಿಂದಲೇ ಜನ ನೆಮ್ಮಂದಿಯಾಗಿ ನಿದ್ದೆ ಮಾಡಲು ಸಾಧ್ಯವಾಗಿದೆ. ಜೊತೆಗೆ ಧೈರ್ಯವಾಗಿ ಓಡಾಡಲು ಸಾಧ್ಯವಾಗಿದೆ. ಆದರೆ 'ಬೇಲಿಯೇ ಎದ್ದು ಹೊಲೆ ಮೇಯಿದಂತೆ' ಪೊಲೀಸ್ ಪೇದೆಯೊಬ್ಬ ಕಳ್ಳತನ ಮಾಡಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾನ್ಪುರದಲ್ಲಿ ಶನಿವಾರ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿಯಿಂದ ಮೊಬೈಲ್ ಫೋನ್ ಕದಿಯುವಾಗ ಉತ್ತರ ಪ್ರದೇಶದ ಪೊಲೀಸ್ ಪೇದೆಯೊಬ್ಬರು ಸಿಕ್ಕಿಬಿದ್ದಿದ್ದಾರೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಳಿಕ ಕಾನ್‌ಸ್ಟೆಬಲ್‌ನನ್ನು ಅಮಾನತು ಮಾಡಲಾಗಿದೆ. ಕಾನ್ಪುರದ ಮಹಾರಾಜಪುರ ಪ್ರದೇಶದ ಛತ್ಮಾರಾ ಛೇದಕದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದಾಗ, ಕಾನ್ಸ್‌ಟೇಬಲ್ ರಸ್ತೆಯ ಬಳಿ ಮಲಗಿದ್ದ ವ್ಯಕ್ತಿಯ ಮೊಬೈಲ್ ಅನ್ನು ಕದ್ದಿದ್ದಾನೆ. ಕಾನ್‌ಸ್ಟೆಬಲ್ ಕಳ್ಳತನದ ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾನ್ಸ್‌ಟೇಬಲ್ ಪ್ರಗೇಶ್ ಸಿಂಗ್ ವರಾಂಡಾದಲ್ಲಿ ಮಲಗಿದ್ದ ವ್ಯಕ್ತಿಯ ಬಳಿಗೆ ತೆರಳಿ ಆತನ ಮೊಬೈಲ್ ಕದ್ದು ಓಡಿಹೋಗಿರುವುದು ವಿಡಿಯೋದಲ್ಲಿ ಗೋಚರವಾಗಿದೆ. ವಿಡಿಯೊ ವೈರಲ್ ಆದ ನಂತರ, ಪೊಲೀಸ್ ಅಧಿಕಾರಿಗಳು ಈ ವಿಷಯದ ಬಗ್ಗೆ ತನಿಖೆ ನಡೆಸಿದರು. ಕಾನ್ಸ್‌ಟೇಬಲ್ ಅನ್ನು ಮಹಾರಾಜಪುರ ಪೊಲೀಸ್ ಠಾಣೆಯಲ್ಲಿ ತೈಪತ್ ಪ್ರಗೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿ ಕಾನ್ಸ್‌ಟೇಬಲ್‌ನನ್ನು ಎಸ್‌ಪಿ ಔಟರ್ ಅಮಾನತುಗೊಳಿಸಿದ್ದಾರೆ. ಪೇದೆಯೊಂದಿಗೆ ಗೃಹರಕ್ಷಕ ದಳದ ಜವಾನ ಕೂಡ ಸ್ಥಳದಲ್ಲಿದ್ದರು. ಗೃಹರಕ್ಷಕ ದಳದ ಜವಾನನ ವಿರುದ್ಧವೂ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಮಹಾರಾಜಪುರ ಛತ್ಮಾರಾ ನಿವಾಸಿ ನಿತಿನ್ ಸಿಂಗ್ ಶನಿವಾರ ರಾತ್ರಿ ಕ್ರಾಸ್‌ರೋಡ್‌ನಲ್ಲಿರುವ ತಮ್ಮ ಅಂಗಡಿಯ ವರಾಂಡಾದಲ್ಲಿ ಮಲಗಿದ್ದರು. ಶನಿವಾರ ರಾತ್ರಿ, ಛತ್ಮಾರಾ ಛೇದಕದಲ್ಲಿ ಮಹಾರಾಜಪುರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಪ್ರಗೇಶ್ ಸಿಂಗ್ ಮತ್ತು ಹೋಮ್ ಗಾರ್ಡ್‌ನ ಕರ್ತವ್ಯವನ್ನು ನಿಯೋಜಿಸಲಾಗಿತ್ತು. ಆರೋಪಿ ಕಾನ್‌ಸ್ಟೆಬಲ್‌ನನ್ನು ಅಮಾನತುಗೊಳಿಸಲಾಗಿದೆ ಎಂದು ಹೆಚ್ಚುವರಿ ಎಸ್‌ಪಿ ಔಟರ್ ವಿಜೇಂದ್ರ ದ್ವಿವೇದಿ ತಿಳಿಸಿದ್ದಾರೆ. ಈ ಬಗ್ಗೆ ವಿವರವಾದ ತನಿಖೆ ನಡೆಸಲಾಗುತ್ತಿದೆ.
ಸಂತ್ರಸ್ತೆ ನಿತಿನ್ ಸಿಂಗ್ ಅವರು ಆರೋಪಿ ಕಾನ್‌ಸ್ಟೆಬಲ್ ಪ್ರಗೇಶ್ ಸಿಂಗ್ ಮತ್ತು ಹೋಮ್ ಗಾರ್ಡ್ ಲಾಯಿಕ್ ಸಿಂಗ್ ವಿರುದ್ಧ ಮಹಾರಾಜಪುರ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳ್ಳತನಕ್ಕೆ ದೂರು ನೀಡಿದ್ದಾರೆ.












Click it and Unblock the Notifications