ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಜಾವಾಲಾ ಪ್ರಕರಣ: ಮತ್ತೊಂದು ಸಿಸಿಟಿವಿ ಫೂಟೇಜ್ ಬಹಿರಂಗ

|
Google Oneindia Kannada News

ದೆಹಲಿಯ ಕಾಂಜಾವಾಲಾ ಪ್ರಕರಣದಲ್ಲಿ ಪ್ರತಿದಿನ ಹೊಸ ಹೊಸ ಸಂಗತಿಗಳು ಹೊರಬೀಳುತ್ತಿದ್ದು, ಮತ್ತೊಂದು ಹೊಸ ಸಿಸಿಟಿವಿ ವಿಡಿಯೋಗಳು ಬಹಿರಂಗಗೊಂಡಿದೆ. ಕಾಂಜಾವಾಲಾ ಪ್ರಕರಣದಲ್ಲಿ, ಶುಕ್ರವಾರ ಮತ್ತೊಂದು ಸಿಸಿಟಿವಿ ವಿಡಿಯೋ ಕಾಣಿಸಿಕೊಂಡಿದ್ದು, ಈ ವಿಡಿಯೋ ಡಿಸೆಂಬರ್ 31 ರಂದು ರಾತ್ರಿ 7.30 ರ ಸುಮಾರಿನದ್ದು ಎಂದು ಹೇಳಲಾಗಿದೆ. ಈ ಹೊಸ ಸಿಸಿಟಿವಿ ವಿಡಿಯೋದಲ್ಲಿ ಕಾಂಜಾವಾಲಾ ಅಪಘಾತದಲ್ಲಿ ಬಲಿಯಾದ ಅಂಜಲಿ ಸಿಂಗ್ (23 ವರ್ಷ) ಮತ್ತು ಆಕೆಯ ಸ್ನೇಹಿತೆ ನಿಧಿ ಕಾಣಿಸಿಕೊಂಡಿದ್ದಾರೆ.

ಕಾಂಜಾವಾಲಾ ಪ್ರಕರಣ: ಅಂಜಲಿಯ ಸ್ನೇಹಿತೆ ನಿಧಿಗೆ ಈಗಾಗಲೇ ಆರೋಪಿ ಗೊತ್ತಾ? ಕಾಂಜಾವಾಲಾ ಪ್ರಕರಣ: ಅಂಜಲಿಯ ಸ್ನೇಹಿತೆ ನಿಧಿಗೆ ಈಗಾಗಲೇ ಆರೋಪಿ ಗೊತ್ತಾ?

ಆದರೆ ಈ ದೃಶ್ಯದಲ್ಲಿ ಸ್ಕೂಟಿಯನ್ನು ಒಬ್ಬ ಹುಡುಗ ಓಡಿಸುತ್ತಿರುವುದು ಕಂಡುಬಂದಿದೆ. ಗುಲಾಬಿ ಬಣ್ಣದ ಜಾಕೆಟ್‌ನಲ್ಲಿ ಅಂಜಲಿ ಸ್ಕೂಟಿಯ ಹಿಂಬದಿಯಲ್ಲಿ ಮತ್ತು ಕೆಂಪು ಜಾಕೆಟ್‌ನಲ್ಲಿ ನಿಧಿ ಮಧ್ಯದಲ್ಲಿ ಕುಳಿತಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಿಸಿಟಿವಿ ವಿಡಿಯೋದಲ್ಲಿ ಏನಿದೆ?

ಅಂಜಲಿ ಮತ್ತು ನಿಧಿ ಮೊದಲು ಸ್ಕೂಟಿಯಿಂದ ಇಳಿದಿರುವುದು ಸಿಸಿಟಿವಿ ವಿಡಿಯೋದಲ್ಲಿ ಕಂಡು ಬಂದಿದೆ. ನಂತರ ನಿಧಿ ಒಳಗೆ ಹೋಗುತ್ತಾಳೆ. ಆ ನಂತರ ಅಂಜಲಿ ರಸ್ತೆಯಲ್ಲಿ ನಿಂತು ಹುಡುಗನ ಜೊತೆ ಸ್ವಲ್ಪ ಹೊತ್ತು ಮಾತನಾಡುತ್ತಿರುವುದು ಕಾಣಿಸುತ್ತದೆ. ನಂತರ ಅಂಜಲಿ ಕೂಡ ನಿಧಿ ಹೋದ ಬೀದಿಗೆ ಹೋಗುತ್ತಾಳೆ ಮತ್ತು ನಂತರ ಆ ಹುಡುಗ ಸ್ಕೂಟಿ ಓಡಿಸಿಕೊಂಡು ಅಲ್ಲಿಂದ ಹೊರಟು ಹೋಗುತ್ತಾನೆ.

ಅಂಜಲಿ ಜೊತೆಗಿದ್ದ ಆ ಹುಡುಗ ಯಾರು?

ಅಂಜಲಿ ಜೊತೆಗಿದ್ದ ಆ ಹುಡುಗ ಯಾರು?

ಘಟನೆಯ ಬಳಿಕ ಪೊಲೀಸರು ಅಂಜಲಿಯ ಸ್ನೇಹಿತೆ ಮತ್ತು ಇನ್ನೊಬ್ಬ ಹುಡುಗನನ್ನು ವಿಚಾರಣೆಗೆ ಕರೆದರು. ಹೆಚ್ಚಿನ ವಿಚಾರಣೆಗಾಗಿ ದೆಹಲಿ ಪೊಲೀಸರು ಇಂದು ಅಂಜಲಿಯ ಸ್ನೇಹಿತೆ ನಿಧಿಯನ್ನು ಆಕೆಯ ಮನೆಯಿಂದ ಕರೆದೊಯ್ದಿದ್ದಾರೆ. ಇದಲ್ಲದೇ ದೆಹಲಿ ಪೊಲೀಸರು ಬಾಲಕನನ್ನು ಕೂಡ ವಿಚಾರಣೆಗೆ ಕರೆಸಿಕೊಂಡಿದ್ದಾರೆ. ಈತ ನಿಧಿಯ ಸ್ನೇಹಿತ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ದೆಹಲಿ ಪೊಲೀಸರು ನಿಧಿಯನ್ನು ಬಂಧಿಸಿದ್ದಾರೆ ಎಂದು ಹಲವಾರು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಇದಾದ ನಂತರ ದೆಹಲಿ ಪೊಲೀಸರು ನಿಧಿಯನ್ನು ಬಂಧಿಸಲಿಲ್ಲ ಆದರೆ ವಿಚಾರಣೆಗಾಗಿ ಕರೆದೊಯ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ಕಾರಿನ ಮಾಲೀಕ ಮತ್ತು ಆರೋಪಿಯ ಸ್ನೇಹಿತನ ವಿಚಾರಣೆ

ಕಾರಿನ ಮಾಲೀಕ ಮತ್ತು ಆರೋಪಿಯ ಸ್ನೇಹಿತನ ವಿಚಾರಣೆ

ಪ್ರಕರಣದಲ್ಲಿ ಒಟ್ಟು 7 ಮಂದಿ ಆರೋಪಿಗಳಾಗಿದ್ದು, ಕಾರಿನ ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ. ಕಾಂಜಾವಾಲಾ ಪ್ರಕರಣದಲ್ಲಿ ಆರೋಪಿಗಳು ಐವರಲ್ಲ ಏಳು ಮಂದಿ ಎಂದು ಪೊಲೀಸರು ಈಗ ಹೇಳುತ್ತಿದ್ದಾರೆ. ದೆಹಲಿ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಮತ್ತಿಬ್ಬರನ್ನು ಪತ್ತೆ ಮಾಡಿದ್ದಾರೆ. ಅಂದರೆ ಆರೋಪಿಗಳು ಐವರಲ್ಲ ಏಳು ಮಂದಿ ಆರೋಪಿಗಳು ಎಂದಿದ್ದಾರೆ. ಉಳಿದ ಇಬ್ಬರು ಆರೋಪಿಗಳು, ಕಾರಿನ ಮಾಲೀಕ ಮತ್ತು ಆರೋಪಿಯ ಸ್ನೇಹಿತ ಅಶುತೋಷ್ ಎಂದು ತಿಳಿದು ಬಂದಿದೆ. ಈತ ಸತ್ಯವನ್ನು ಮರೆಮಾಚಲು ಮತ್ತು ಅಪರಾಧಿಗಳನ್ನು ರಕ್ಷಿಸಲು ಸಹಾಯ ಮಾಡಿದರು. ಪ್ರಕರಣದ ಆರನೇ ಆರೋಪಿ ಅಶುತೋಷ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅಶುತೋಷ್ ಅವರ ಕಾರಿನ ಕೆಳಗೆ ಅಂಜಲಿ ದೇಹ ಸಿಕ್ಕಿಕೊಂಡಿತ್ತು. ಆಕೆಯ ದೇಹವನ್ನು ಕೆಲ ಕಿಮೀ ವರೆಗೂ ಎಳೆದೊಯ್ಯಲಾಗಿತ್ತು.

ಘಟನೆ ಎಲ್ಲಿ ಹೇಗೆ ನಡೆಯಿತು?

ಘಟನೆ ಎಲ್ಲಿ ಹೇಗೆ ನಡೆಯಿತು?

ಡಿಸೆಂಬರ್ 31ರ ರಾತ್ರಿ ಅಂಜಲಿ ಮತ್ತು ನಿಧಿ ಸ್ಕೂಟಿಯಲ್ಲಿ ಮಧ್ಯರಾತ್ರಿ ಮೂರು ಗಂಟೆ ಸುಮಾರಿಗೆ ಪ್ರಯಾಣಿಸುತ್ತಿದ್ದಾಗ ಕಾಂಜಾವಾಲಾದಲ್ಲಿ ಐವರಿದ್ದ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಬಸಕ್ಕೆ ಅಂಜಲಿ ನಿಧಿ ಇಬ್ಬರು ಕೆಳಗೆ ಬಿದ್ದಿದ್ದಾರೆ. ಆದರೆ ಅಂಜಲಿ ದೇಹ ಕಾರಿನ ಚಕ್ರಕ್ಕೆ ಸಿಕ್ಕಿಕೊಂಡು ಕೆಲ ಕಿ.ಮೀ ವರೆಗೂ ಎಳೆದೊಯ್ಯಲಾಗಿದೆ. ದೇಹ ಕಾಂಜಾವಾಲಾದಲ್ಲಿ ಕಾರಿನಿಂದ ಕೆಳಗೆ ಬಿದ್ದ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಇದನ್ನು ಪ್ರತ್ಯಕ್ಷವಾಗಿ ಕಂಡ ನಿಧಿ ಭಯಗೊಂಡು ಮನೆಗೆ ತೆರಳಿದ್ದಳು. ಪೊಲೀಸರಿಗೂ ಈ ಬಗ್ಗೆ ಆಕೆ ಮಾಹಿತಿಯನ್ನು ನೀಡಿರಲಿಲ್ಲ. ಈ ಘಟನೆಯನ್ನು ಕಂಡ ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಈವರೆಗೆ ಅಂಜಲಿ ಸ್ನೇಹಿತೆ ನಿಧಿ ಸೇರಿದಂತೆ ಏಳು ಜನರನ್ನು ವಿಚಾರ ಮಾಡಿದ್ದಾರೆ. ಆದರೆ ಇದೊಂದು ಸಾಮಾನ್ಯ ಅಪಘಾತವೋ ಉದ್ದೇಶಪೂರ್ವಕವೋ ಇನ್ನೂ ಸಾಬೀತಾಗಬೇಕಿದೆ.

English summary
Delhi hit and run case: Another CCTV footage revealed shows Anjali Singh and another boy on a scooty with Nidhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X