Kanchanjunga Express accident: ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಅಪಘಾತದಿಂದಾಗಿ 19 ರೈಲುಗಳು ರದ್ದು, ಸಂಪೂರ್ಣ ಪಟ್ಟಿ ಇಲ್ಲಿದೆ
ಕೋಲ್ಕತ್ತಾ, ಜೂನ್. 17: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಸಂಭವಿಸಿದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಅಪಘಾತದಿಂದಾಗಿ ಕನಿಷ್ಠ 15 ಜನರು ಸಾವನ್ನಪ್ಪಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಈ ರೈಲು ಅಪಘಾತದಿಂದಾಗಿ ನ್ಯೂ ಜಲ್ಪೈಗುರಿ, ಸಿಲಿಗುರಿ ಜಂಕ್ಷನ್, ಬಾಗ್ಡೋಗ್ರಾ ಮತ್ತು ಅಲುಬಾರಿ ರಸ್ತೆ ಮಾರ್ಗಗಳಲ್ಲಿ ಇದುವರೆಗೆ ಒಟ್ಟು 19 ರೈಲುಗಳನ್ನು ರದ್ದುಗೊಳಿಸಲಾಗಿದೆ.
ರೈಲು ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ 8:55ರ ಸುಮಾರಿಗೆ ನಿಂತಿದ್ದ 13174 ಅಗರ್ತಲಾ - ಸೀಲ್ದಾ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಪ್ಯಾಸೆಂಜರ್ ರೈಲಿನ ನಾಲ್ಕು ಹಿಂಬದಿ ಕೋಚ್‌ಗಳು ಮತ್ತು ಸರಕು ರೈಲಿನ ಐದು ವ್ಯಾಗನ್‌ಗಳು ಹಳಿತಪ್ಪಿದವು ಎಂದು ಎನ್.ಎಫ್. ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಬ್ಯಸಾಚಿ ಡಿ ಹೇಳಿದ್ದಾರೆ. ಹೀಗಾಗಿ ಈ ಪ್ರದೇಶದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಂಡಿದೆ. ಉತ್ತರ ಬಂಗಾಳ ಮತ್ತು ದೇಶದ ಈಶಾನ್ಯ ಭಾಗದಿಂದ ಬರುವ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ.
ರದ್ದಾದ ರೈಲುಗಳ ಪಟ್ಟಿ ಇಲ್ಲಿದೆ
1. 19602 ಹೊಸ ಜಲ್ಪೈಗುರಿ - ಉದಯಪುರ ಸಿಟಿ ವೀಕ್ಲಿ ಎಕ್ಸ್‌ಪ್ರೆಸ್ 17.06 24.
2. 20503 ದಿಬ್ರುಗಢ - ನವ ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್.
3. 12423 ದಿಬ್ರುಗಢ - ನವ ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್
4. 01666 ಅಗರ್ತಲಾ - ರಾಣಿ ಕಮಲಪತಿ ವಿಶೇಷ ರೈಲು
5. 12377 ಸೀಲ್ದಾ- ಹೊಸ ಅಲಿಪುರ್ದೂರ್ ಪದಟಿಕ್ ಎಕ್ಸ್‌ಪ್ರೆಸ್
6. 06105 ನಾಗರ್‌ಕೋಯಿಲ್ ಜೂ.- ದಿಬ್ರುಗಢ ವಿಶೇಷ.
7. 20506 ನವದೆಹಲಿ- ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್.
8. 12424 ನವದೆಹಲಿ- ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್.
9. 22301 ಹೌರಾ- ಹೊಸ ಜಲ್ಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್.
10. 12346 ಗುವಾಹಟಿ- ಹೌರಾ ಸರೈಘಾಟ್ ಎಕ್ಸ್‌ಪ್ರೆಸ್.

11. 12505 ಕಾಮಾಖ್ಯ- ಆನಂದ್ ವಿಹಾರ್ ಈಶಾನ್ಯ ಎಕ್ಸ್‌ಪ್ರೆಸ್
12. 12510 ಗುವಾಹಟಿ-ಬೆಂಗಳೂರು ಎಕ್ಸ್‌ಪ್ರೆಸ್
13. 22302 ಹೊಸ ಜಲ್ಪೈಗುರಿ- ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್.
14. 15620 ಕಾಮಾಖ್ಯ- ಗಯಾ ಎಕ್ಸ್‌ಪ್ರೆಸ್.
15. 15962 ದಿಬ್ರುಗಢ- ಹೌರಾ ಕಾಮೃಪ್ ಎಕ್ಸ್‌ಪ್ರೆಸ್.
16. 15636 ಗುವಾಹಟಿ- ಓಖಾ ಎಕ್ಸ್‌ಪ್ರೆಸ್.
17. 15930 ನ್ಯೂ ಟಿನ್ಸುಕಿಯಾ- ತಾಂಬರಂ ಎಕ್ಸ್‌ಪ್ರೆಸ್.
18. 13148 ಬಮನ್‌ಹಾಟ್- ಸೀಲ್ದಾ ಉತ್ತರ ಬಂಗಾ ಎಕ್ಸ್‌ಪ್ರೆಸ್.
19. 22504 ದಿಬ್ರುಗಢ- ಕನ್ಯಾಕುಮಾರಿ ಎಕ್ಸ್‌ಪ್ರೆಸ್.
ರಾಹುಲ್ ಗಾಂಧಿ ಸಂತಾಪ
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. "ಪಶ್ಚಿಮ ಬಂಗಾಳದಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಅಪಘಾತದಿಂದ ಅನೇಕ ಜನರು ಸಾವನ್ನಪ್ಪಿದ ಸುದ್ದಿ ಅತ್ಯಂತ ದುಃಖಕರವಾಗಿದೆ. ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ "ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
-
Bengaluru Metro: ORR ರಸ್ತೆಯ ನೀಲಿ ಮಾರ್ಗದಲ್ಲಿ ಸಂಯೋಜಿತ ಗರ್ಡರ್ ಸ್ಥಾಪನೆ -
Dawood Ibrahim: "ರಿಯಲ್ ಡಾನ್ ದಾವೂದ್ ಇಬ್ರಾಹಿಂ" ಸ್ಟಿಕ್ಕರ್ ಹಾಕಿಸಿದ್ದ ಬಸ್ ಚಿಕ್ಕಮಗಳೂರಿನಲ್ಲಿ ಪೊಲೀಸ್ ವಶಕ್ಕೆ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್












Click it and Unblock the Notifications