Get Updates
Get notified of breaking news, exclusive insights, and must-see stories!

Bye-Election Result: ಮುಖ್ಯಮಂತ್ರಿ ಪತ್ನಿಗೆ ಭರ್ಜರಿ ಗೆಲುವು; ಬಿಜೆಪಿ ಅಭ್ಯರ್ಥಿಗೆ ನಿರಾಸೆ

ಹಿಮಾಚಲ ಪ್ರದೇಶ (Himachal Pradesh)ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್‌ ಅವರು ಡೆಹ್ರಾ (Dehra) ವಿಧಾನಸಭಾ ಉಪಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಗೆಲುವಿನೊಂದಿಗೆ ರಾಜಕೀಯ ರಂಗಕ್ಕೆ ಭರ್ಜರಿ ಎಂಟ್ರಿ ನೀಡಿದ್ದಾರೆ.

ಕಮಲೇಶ್ ಠಾಕೂರ್‌ ಅವರು ಬಿಜೆಪಿ ಅಭ್ಯರ್ಥಿ ಹೋಶ್ಯಾರ್ ಸಿಂಗ್ ಅವರನ್ನು 9,399 ಮತಗಳ ಅಂತರದಿಂದ ಜಯ ಸಾಧಿಸಿತು. ಕಮಲೇಶ್‌ ಅವರು 32,737 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ 23,338 ಮತಗಳನ್ನು ಪಡೆದರು. ಈ ಕ್ಷೇತ್ರದಲ್ಲಿ ಮೂವರು ಪಕ್ಷೇತರ ಅಭ್ಯರ್ಥಿಗಳು ತಲಾ 200 ಮತಗಳನ್ನು ಗಳಿಸಲು ಸಾಧ್ಯವಾಗಲಿಲ್ಲ.

Kamlesh Thakur Himachal Chief Minister s Wife Makes Strong Political Debut

ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಹಗಲಿರುಳು ಶ್ರಮಿಸಿದ ಫಲವೇ ಗೆಲುವು ಸಾಧ್ಯವಾಗಿದೆ. ಈ ಜಯವನ್ನು ನನಗಾಗಿ ದುಡಿದವರಿಗೆ ಅರ್ಪಿಸುತ್ತೇನೆ ಎಂದು ಉಪಚುನಾವಣೆಯಲ್ಲಿ ಜಯ ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಕಮಲೇಶ್ ಠಾಕೂರ್ ಅವರು ತಿಳಿಸಿದ್ದಾರೆ.

ಡೆಹ್ರಾ ಅಸೆಂಬ್ಲಿ ಕ್ಷೇತ್ರವನ್ನು 2012 ರಲ್ಲಿ ಬಿಜೆಪಿ ನಾಯಕ ಮಾಜಿ ಸಚಿವ ರವಿ ಇಂದರ್ ಸಿಂಗ್ ಜಯ ಸಾಧಿಸಿದ್ದರು. ಹೋಶಿಯಾರ್ ಸಿಂಗ್ 2017 ಮತ್ತು 2022 ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ತಮ್ಮದಾಗಿಸಿಕೊಂಡಿದ್ದರು.

ಕಮಲೇಶ್‌ ಠಾಕೂರು ಯಾರಯ?

ಏಪ್ರಿಲ್‌ 2, 1970 ರಂದು ನಲ್ಸುಹಾ ಪಂಚಾಯತ್‌ನ ಚಾಮನಾಳ್ ಗ್ರಾಮದಲ್ಲಿ ಜನಿಸಿದರು. ಪ್ರಥಾಮಿಕ ಶಿಕ್ಷಣವನ್ನು ಡೆಹ್ರಾದಲ್ಲಿ ಪೂರ್ಣಗೊಳಿಸಿದ ಅವರು, ಉನ್ನತ ಶಿಕ್ಷಣವನ್ನು ಚಂಡೀಗಢ್‌ದ ಸರ್ಕಾರಿ ಕಾಲೇಜಿನಲ್ಲಿ ಮುಗಿಸಿದ್ದಾರೆ. ಕಂಪ್ಯೂಟರ್‌ ಅಪ್ಲಿಕೇಷನ್‌ನಲ್ಲಿ ಇವರು ಪಿಜಿ ಡಿಪ್ಲೋ ಪದವಿಯನ್ನು ಸಹ ಪಡೆದಿದ್ದಾರೆ. ಠಾಕೂರ್ ಅವರು ಸುಖು ಅವರನ್ನು ಜೂನ್‌ 11, 1988ರಲ್ಲಿ ಮದುವೆ ಆದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

Kamlesh Thakur Himachal Chief Minister s Wife Makes Strong Political Debut

ವರದಿಗಳ ಪ್ರಕಾರ ಕಮಲೇಶ್‌ ಠಾಕೂರ್‌ ಅವರು ಹಿಮಾಚಲ್ ಪ್ರದೇಶ ಕಾಂಗ್ರೆಸ್ ಕಮಿಟ್‌ಯಲ್ಲಿ ಕಳೆದ ಎರಡು ದಶಕಗಳಿಂದ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಈ ಗೆಲುವು ಈ ಕ್ಷೇತ್ರದಲ್ಲಿ ಮತ್ತಷ್ಟು ಬಲ ಪಡಿಸಿಕೊಳ್ಳಲು ಸಹಾಯಕವಾಗುತ್ತದೆ. 85,263 ಮತದಾರರೊಂದಿಗೆ, ಡೆಹ್ರಾ ಹಮೀರ್‌ಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಇದು ಸಂಸದ ಅನುರಾಗ್ ಠಾಕೂರ್ ಪ್ರತಿನಿಧಿಸುವ ದೀರ್ಘಕಾಲದ ಬಿಜೆಪಿ ಭದ್ರಕೋಟೆಯಾಗಿದೆ.

ಕಳೆದ ತಿಂಗಳು, ಸುಖವಿಂದರ್ ಸಿಂಗ್ ಸುಖು ಅವರು ತಮ್ಮ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಪಕ್ಷದ ಹೈಕಮಾಂಡ್ ಆಕೆಯನ್ನು ಒತ್ತಾಯಿಸಿತು ಮತ್ತು ಡೆಹ್ರಾ ವಿಧಾನಸಭಾ ಸ್ಥಾನದ ಉಪಚುನಾವಣೆಗೆ ಕಣಕ್ಕೆ ಇಳಿಸಿತು.

ಶೇಕಡಾವಾರು ಮತ

ಕಮಲೇಶ್ ಠಾಕೂರ್ ಶೇಕಡಾ 57.94 ಮತ್ತು ಹೋಶಿಯಾರ್ ಸಿಂಗ್ ಶೇಕಡಾ 41.30 ಮತಗಳನ್ನು ಪಡೆದರು. ಇವಿಎಂಗಳಿಂದ ಪಡೆದ ಒಟ್ಟು ಮತಗಳು 55,408 ಮತಗಳಾಗಿವೆ. ಡೆಹ್ರಾ ಉಪಚುನಾವಣೆಯಲ್ಲಿ ಒಟ್ಟು 1098 ಅಂಚೆ ಮತಗಳು ಚಲಾವಣೆಯಾಗಿವೆ. ಈ ಪೈಕಿ ಕಮಲೇಶ್‌ ಠಾಕೂರ್‌ 612, ಹೊಶಿಯಾರ್‌ ಸಿಂಗ್‌ 478, ಅರುಣ್‌-ಅಂಕೇಶ್‌ ಸಿಯಾಲ್‌ ತಲಾ 2, ಸುಲೇಖಾ ಚೌಧರಿ 4 ಹಾಗೂ ನೋಟಾ 2 ಮತಗಳನ್ನು ಪಡೆದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+