Get Updates
Get notified of breaking news, exclusive insights, and must-see stories!

ಕಮಲ್‌ ಹಾಸನ್‌ ಮಲೆಯಾಳಿಗಳ ಹೃದಯದಲ್ಲಿದ್ದಾರೆ: ಕೇರಳ ಸಿಎಂ ಪಿಣರಾಯಿ ವಿಜಯನ್‌!

Kamal Haasan: ನಟ ಕಮಲ್‌ ಹಾಸನ್‌ ಅವರು ಇನ್ನೂ ಕನ್ನಡದ ವಿಚಾರವಾಗಿ ನೀಡಿರುವ ಹೇಳಿಕೆಗೆ ಇಲ್ಲಿಯ ವರೆಗೆ ಕ್ಷಮೆ ಕೇಳಿಲ್ಲ. ವಿಷಾದವನ್ನೂ ವ್ಯಕ್ತಪಡಿಸಿಲ್ಲ . ಇದರ ನಡುವೆ ಅವರ ಹೇಳಿಕೆಯನ್ನು ಕನ್ನಡದ ಸಾಹಿತ್ಯ ಹಾಗೂ ರಾಜಕೀಯ ವಲಯದಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಇಲ್ಲಿಯ ವರೆಗೆ ಕನ್ನಡ ಚಿತ್ರರಂಗದಿಂದ ಯಾರೂ ಕಮಲ್‌ ಹಾಸನ್‌ ಹೇಳಿಕೆಯನ್ನು ಗಂಭೀರವಾಗಿ ಖಂಡಿಸಿಲ್ಲ. ರಾಜ್ಯದಲ್ಲಿ ನಟ ಕಮಲ್‌ ಹಾಸನ್‌ ಅವರಿಗೆ ವಿರೋಧ ವ್ಯಕ್ತವಾಗುತ್ತಿರುವಾಗಲೇ . ತಮಿಳುನಾಡು ಹಾಗೂ ಕೇರಳದಲ್ಲಿ ನಟ ಕಮಲ್‌ ಹಾಸನ್‌ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ತಮಿಳು ನಾಡಿನಲ್ಲಿ ಕಮಲ್‌ ಹಾಸನ್‌ ಹೇಳಿದ್ದು ಸರಿ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ಸ್ವಲ್ಪ ಕಷ್ಟವಾಗಲಿದೆ ಎಂದು ಕೆಲವು ರಾಜಕಾರಣಿಗಳು ಹೇಳುತ್ತಿದ್ದರೆ. ಕೇರಳದಲ್ಲಿ ಅಲ್ಲಿನ ರಾಜಕೀಯ ಪಕ್ಷವು ರಾಜಕೀಯ ಲಾಭಕ್ಕಾಗಿ ತನ್ನ ತಲೆಯ ಮೇಲೆ ಕೂರಿಸಿಕೊಂಡು ಮೆರೆಯುತ್ತಿದೆ.

ನಟ ಕಮಲ್‌ ಹಾಸನ್‌ ಅವರು ತಮಿಳು ಕನ್ನಡದ ತಾಯಿ ಅಂತ ಹೇಳಿದಾಗಿನಿಂದ ಕಮಲ್‌ ಹಾಸನ್‌ ಮೇಲಿದ್ದ ಪ್ರೀತಿ ಹಾಗೂ ಅಭಿಮಾನವನ್ನು ಕನ್ನಡಿಗರು ಕಡಿಮೆ ಮಾಡಿಕೊಂಡಿದ್ದಾರೆ. ಬಹುಭಾಷಾ ನಟ ಹಾಗೂ ರಾಜಕಾರಣಿ ನಟ ಕಮಲ್‌ ಹಾಸನ್‌ ಅವರು ಕನ್ನಡದ ಬಗ್ಗೆ ನೀಡಿರುವ ಹೇಳಿಕೆಗೆ ಭಾರೀ ವಿರೋಧದ ನಡುವೆಯೂ ವಿವಿಧ ರಾಜ್ಯಗಳಲ್ಲಿ ಕಮಲ್‌ ಹಾಸನ್‌ ಬಗ್ಗೆ ಅಲ್ಲಿನ ನಾಯಕರು ಹಾಗೂ ನಟ - ನಟಿಯರು ಮಾತನಾಡುತ್ತಿದ್ದಾರೆ. ಆದರೆ ತಮಿಳುನಾಡು ಹಾಗೂ ಕೇರಳದಲ್ಲಿ ನಟ ಕಮಲ್‌ ಹಾಸನ್‌ಗೆ ವಿವಿಧ ವಿಚಾರದಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಕನ್ನಡಿಗರು ಕಮಲ್‌ ಹಾಸನ್‌ ಮೇಲೆ ಕಿಡಿ ಕಾರುತ್ತಿರುವ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

Kamal Haasan is in hearts of Malayalis Kerala CM Pinarayi Vijayan

ಹೌದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ನಟ ಹಾಗೂ ರಾಜಕಾರಣಿ ಕಮಲ್‌ ಹಾಸನ್‌ ಅವರನ್ನು ತಲೆಯ ಮೇಲೆ ಕೂರಿಸಿಕೊಂಡು ಮೆರೆಯುತ್ತಿದ್ದಾರೆ. ರಾಜ್ಯದಲ್ಲಿ ಕಮಲ್‌ ಹಾಸನ್‌ ಮೇಲೆ ಕನ್ನಡಿಗರು ಕಿಡಿಕಾರುತ್ತಿರುವಾಗಲೇ ಈ ವಿಚಾರ ಭಾರೀ ಚರ್ಚೆಗೂ ಕಾರಣವಾಗಿದೆ. ನೆರೆಯ ಕೇರಳ ಸರ್ಕಾರವು ನಾಲ್ಕನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಈ ಸಂದರ್ಭದಲ್ಲಿ ಕಮಲ್‌ ಹಾಸನ್‌ ಅವರನ್ನು ಮುಖ್ಯ ಅತಿಥಿಯಾಗಿ ಕರೆಯಲಾಗಿತ್ತು. ಇದೀಗ ಅವರನ್ನು ಅಲ್ಲಿ ಸನ್ಮಾನ ಮಾಡಿ, ಸಿಎಂ ಪಿಣರಾಯಿ ವಿಜಯನ್‌ ಅವರು ಮಾತನಾಡಿರುವುದು ವೈರಲ್‌ ಆಗುತ್ತಿದೆ. ಆದರೆ, ಇದಕ್ಕೂ ಕನ್ನಡದ ವಿಚಾರಕ್ಕೂ ಸಂಬಂಧವಿಲ್ಲದಿದ್ದರೂ. ಕಮಲ್‌ ಹಾಸನ್‌ ಏನು ನಡದೇ ಇಲ್ಲ ಎಂದು ಹಗುರವಾಗಿ ಪರಿಗಣಿಸಿರುವುದು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ.

ತಿರುವನಂತಪುರದಲ್ಲಿ ಸಿಪಿಎಂ ಆಯೋಜಿಸಿದ್ದ ಸೆಕ್ರೆಟರಿಯೇಟ್‌ ನೌಕರರ ಸಂಘವು ಆಯೋಜಿಸಿದ್ದ ಕೇರಳದ ಆಡಳಿತರೂಢ ಪಕ್ಷ ಸರ್ಕಾರದ ನಾಲ್ಕನೇ ವರ್ಷದ ಸಾಧನಾ ಸಮಾವೇಶದಲ್ಲಿ ಕಮಲ್‌ ಅವರನ್ನು ಅಲ್ಲಿನ ಸಿಎಂ ಕೊಂಡಾಡಿದ್ದಾರೆ. ಈ ಸಂದರ್ಭದಲ್ಲಿ ಕಮಲ್ ಹಾಸನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಜೀವನದ ಕುರಿತಾದ ಸಾಕ್ಷ್ಯಚಿತ್ರ ಪಿನರಾಯ್ ದಿ ಲೆಜೆಂಡ್ ವೀಕ್ಷಿಸಿದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು, ಕಮಲ್ ಹಾಸನ್ ಎಡಪಂಥೀಯ ಮನಸ್ಸನ್ನು ಹೊಂದಿರುವ ವ್ಯಕ್ತಿ . ಅಲ್ಲದೇ ಕಮಲ್ ಹಾಸನ್ ಕಲಾವಿದರಿಗೆ ಕಲೆಯನ್ನು ಮೀರಿದ ಜೀವನವಿದೆ ಎಂದು ಸಾಬೀತುಪಡಿಸಿದ್ದಾರೆ. ಅವರು ಪ್ರತಿಯೊಬ್ಬ ಮಲಯಾಳಿ ಹೃದಯದಲ್ಲಿದ್ದಾರೆ ಎಂದಿದ್ದಾರೆ. ಅಲ್ಲದೇ ಅವರು ಟೀಕೆಗೆ ಹೆದರಿ ಎಂದಿಗೂ ಹಿಂದೆ ಸರಿಯಲಿಲ್ಲ. ಸಿದ್ಧಾಂತ ಏನೇ ಇರಲಿ, ಜನರ ಸೇವೆಯಲ್ಲಿ ನಾವೆಲ್ಲರೂ ಒಂದಾಗಿದ್ದೇವೆ ಅಂತಲೂ ಅವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+