K Suresh: ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಸ್ಪರ್ಧಿಸಿರುವ ಕೆ.ಸುರೇಶ್ ಯಾರು?
ದೇಶದ ಇತಿಹಾಸದಲ್ಲಿ ಎಂದು ನಡೆಯದ ಘಟನೆಗೆ ಸಂಸತ್ ಸಾಕ್ಷಿಯಾಗಲಿದೆ. ಲೋಕಸಭಾ ಸ್ಪೀಕರ್ ಹುದ್ದೆಗೆ ಇದೆ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಓ ಬಿರ್ಲಾ ಅವರನ್ನು ಕಣಕ್ಕೆ ಇಳಿಸಿದರೆ, ಇಂಡಿ ಮೈತ್ರಿಕೂಟ ಸುರೇಶ್ ಅವರನ್ನು ಅಖಾಡಕ್ಕೆ ಇಳಿಸಿದೆ. ಇಂಡಿ ಮೈತ್ರಿ ಕೂಟದ ಅಭ್ಯರ್ಥಿ ಯಾರು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಇಂಡಿ ಮೈತ್ರಿ ಕೂಟದ ಅಭ್ಯರ್ಥಿ ಸುರೇಶ್ ಸತತ 8ನೇ ಚುನಾವಣೆ ಗೆದ್ದು ಸಂಸತ್ತಿಗೆ ಬಂದಿದ್ದಾರೆ. ಈ ಹಿಂದೆ ಭಾರತ ಮತ್ತು ಎನ್‌ಡಿಎ ನಡುವೆ ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ ಹುದ್ದೆಗೆ ಸಂಬಂಧಿಸಿದಂತೆ ಒಮ್ಮತ ಮೂಡಿದೆ ಎಂದು ಹೇಳಲಾಗುತ್ತಿದೆ. ಸುರೇಶ್ ಅವರನ್ನು ಲೋಕಸಭೆ ಸ್ಪೀಕರ್ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಆಯ್ಕೆ ಮಾಡಿದೆ. ಈ ಮಧ್ಯೆ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಸೇರಿದಂತೆ 281 ಸಂಸದರು ಇಂದು ಸಂಸತ್ತಿನಲ್ಲಿ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಲೋಕಸಭಾ ಸ್ಪೀಕರ್ ಆಯ್ಕೆಗೆ ಬುಧವಾರ ಮುಂಜಾಬೆ 11 ಗಂಟೆಗೆ ಮತದಾನ ನಡೆಯಲಿದೆ. ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿ ಓ ಬಿರ್ಲಾ ಗೆಲ್ಲುವುದು ಫಿಕ್ಸ್ ಎಂದೇ ಹೇಳಲಾಗುತ್ತಿದೆ. ಇನ್ನು ಇಂಡಿ ಮೈತ್ರಿ ಕೂಟದ ಅಭ್ಯರ್ಥಿಯಾಗಿರುವ ಕೆ.ಸುರೇಶ್, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಲ್ಲದೆ ದಲಿತ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಇವರು ಎಂಟನೇ ಬಾರಿಗೆ ಕೇರಳದ ಮಾವೇಲಿಕ್ಕರ ಕ್ಷೇತ್ರದಿಂದ ಗೆದ್ದಿದ್ದಾರೆ. ಈ ಹಿಂದೆ ಅವರು ಈ ಕ್ಷೇತ್ರದಿಂದ ಮೂರು ಬಾರಿ ಮತ್ತು ಅಡೂರು ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದು ಸಂಸತ್ ಪ್ರವೇಶಿಸಿದ್ದರು.
1989 ರಲ್ಲಿ ಸುರೇಶ್ ಮೊದಲ ಬಾರಿಗೆ ಸಂಸತ್ ಚೊಚ್ಚಲ ಬಾರಿಗೆ ಪ್ರವೇಶಿಸಿದರು. ಇವರು 2009 ರಿಂದ ಮಾವೇಲಿಕ್ಕರ ಸ್ಥಾನವನ್ನು ಸತತವಾಗಿ ಗೆಲ್ಲುತ್ತಿದ್ದಾರೆ. 2009ರಲ್ಲಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಅವರಿಗಿದೆ. ಮಾವೇಲಿಕ್ಕರ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ತಮ್ಮ ಹತ್ತಿರದ ಪ್ರತಿ ಸ್ಪರ್ಧಿ ಸಿಪಿಐಎಂನ ಅರುಣ್ ಕುಮಾರ್ ಅವರನ್ನು 10 ಸಾವಿರ ಮತಗಳಿಂದ ಸೋಲಿಸಿದ್ದಾರೆ.

ಇವರನ್ನು ಹಂಗಾಮಿ ಸ್ಪೀಕರ್ ಮಾಡುವ ಬಗ್ಗೆಯೂ ಚರ್ಚೆ ನಡೆದಿತ್ತು. ಇವರು 18ನೇ ಲೋಕಸಭೆಯಲ್ಲಿ ಅತ್ಯಂತ ಅನುಭವಿ ಸಂಸದ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಈಗ ಅತ್ಯಂತ ಅನುಭವಿ ಹಾಗೂ ದಲಿತ ಮುಖವನ್ನು ಸ್ಪೀಕರ್ ಸ್ಥಾನಕ್ಕೆ ಇಂಡಿ ಮೈತ್ರಿಕೂಟ ಕಣಕ್ಕೆ ಇಳಿಸಿದೆ.
ಕೋರ್ಟ್ ಮೆಟ್ಟಲೇರಿದ್ದ ಸುರೇಶ್
ಸಿಪಿಐ ನಾಯಕ ಆರ್‌ಎಸ್ ಅನಿಲ್ ಅವರು ಪರಿಶಿಷ್ಟ ಜಾತಿಗೆ ಸೇರಿದ ಹಿಂದೂ ಸಮುದಾಯಕ್ಕೆ ಸೇರಿದವರಲ್ಲ. ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕೇರಳ ಹೈ ಕೋರ್ಟ್ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ಸೂಚಿಸಿತ್ತು. ನಂತರ ಸುರೇಶ್ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು. ಸರ್ವೋಚ್ಛ ನ್ಯಾಯಾಲಯ ಹೈಕೋರ್ಟ್ ಆದೇಶವನ್ನು ತಿರಸ್ಕರಿಸಿತ್ತು.
ಲೋಕಸಭೆಯ ಸ್ಪೀಕರ್ ಎಂದರೇನು?
ಲೋಕಸಭೆಯ ಸ್ಪೀಕರ್ ಆಯ್ಕೆಯನ್ನು ಭಾರತೀಯ ಸಂವಿಧಾನದ 93 ನೇ ವಿಧಿಯಲ್ಲಿ ಉಲ್ಲೇಖಿಸಲಾಗಿದೆ. ಪರಿಚ್ಛೇದ 93 ರ ಪ್ರಕಾರ, ಈ ಹುದ್ದೆಗಳು ಖಾಲಿಯಾದಾಗಲೆಲ್ಲ ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ ಪಾತ್ರಕ್ಕೆ ಇಬ್ಬರು ಸದಸ್ಯರನ್ನು ಆಯ್ಕೆ ಮಾಡುವ ಹಕ್ಕನ್ನು ಲೋಕಸಭೆ ಹೊಂದಿದೆ.
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಲೋಕಸಭೆಯ ಸ್ಪೀಕರ್ ಹುದ್ದೆಗೆ ಮಹತ್ವದ ಸ್ಥಾನವಿದೆ. ಸ್ಪೀಕರ್ ಅವರು ಅಧ್ಯಕ್ಷತೆ ವಹಿಸುವ ಸದನದ ಘನತೆ ಮತ್ತು ಅಧಿಕಾರವನ್ನು ಸಂಕೇತಿಸುತ್ತಾರೆ. ಶ್ರೇಯಾಂಕ ಮತ್ತು ಹಿರಿತನದ ಪ್ರಕಾರ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಆಯಾ ರಾಜ್ಯಗಳ ರಾಜ್ಯಪಾಲರು ಮತ್ತು ಮಾಜಿ ರಾಷ್ಟ್ರಪತಿ, ಉಪ ಪ್ರಧಾನ ಮಂತ್ರಿಗಳ ನಂತರ ಭಾರತದ ಮುಖ್ಯ ನ್ಯಾಯಾಧೀಶರ ಜೊತೆಗೆ ಲೋಕಸಭೆಯ ಸ್ಪೀಕರ್ ಹುದ್ದೆಯು ಆರನೇ ಸ್ಥಾನದಲ್ಲಿದೆ.












Click it and Unblock the Notifications