ನ.18ರಂದು ನೂತನ ಸಿಜೆಐಯಾಗಿ ಅರವಿಂದ್ ಶರದ್ ಬೊಬ್ಡೆ ಪ್ರಮಾಣ ವಚನ

ನವದೆಹಲಿ, ಅಕ್ಟೋಬರ್ 29: ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಅರವಿಂದ್ ಬೊಬ್ಡೆ ನೇಮಕವಾಗಿದ್ದು, ನವೆಂಬರ್ 18 ರಂದು ಮುಖ್ಯ ನ್ಯಾಯಮೂರ್ತಿಯಾಗಿ ಬೊಬ್ಡೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜಸ್ಟೀಸ್ ರಂಜನ್ ಗೊಗಾಯ್ ಅವರು ಜಸ್ಟೀಸ್ ಬೊಬ್ಡೆ ಅವರ ಹೆಸರನ್ನು ಉನ್ನತ ಹುದ್ದೆಗೆ ಶಿಫಾರಸು ಮಾಡಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ.

ನವೆಂಬರ್ 17ರಂದು ಹಾಲಿ ಸಿಜೆಐ ರಂಜನ್ ಗೊಗಾಯ್ ನಿವೃತ್ತರಾಗುತ್ತಿದ್ದಾರೆ. ನ್ಯಾಯಮೂರ್ತಿ ಬೊಬ್ಡೆ 47 ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಮಧ್ಯಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಬೊಬ್ಡೆ ಅವರ ನಿವೃತ್ತಿ ದಿನಾಂಕ 2021 ಏಪ್ರಿಲ್ 23.

ಮಹಾರಾಷ್ಟ್ರದ ನಾಗ್ಪುರದಲ್ಲಿ ಏಪ್ರಿಲ್ 24, 1956ರಂದು ಜನಿಸಿದ ಬೊಬ್ಡೆ ಅವರು ನಾಗ್ಪುರ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾರೆ. 2000ರ ಮಾರ್ಚ್ 29ರಂದು ಬಾಂಬೆ ಹೈಕೋರ್ಟಿನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡರು. 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರಾದರು. 2013ರ ಏಪ್ರಿಲ್ ರಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದಿದ್ದಾರೆ.

Justice SA Bobde Appointed Next Chief Justice, Oath On November 18

ಅಯೋಧ್ಯಾ ಪ್ರಕರಣ, ಬಿಸಿಸಿಐ ಕೇಸ್, ಪಟಾಕಿ ನಿಷೇಧ ಪ್ರಕರಣ ಮುಂತಾದ ಪ್ರಕರಣಗಳನ್ನು ಬೊಬ್ಡೆ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+