'ಸುಪ್ರೀಂ' ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಪ್ರಮಾಣ ವಚನ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ದೀಪಕ್ ಮಿಶ್ರಾ ಪ್ರಮಾಣ ವಚನ. ಈ ಸಂದರ್ಭದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮುಂತಾದವರ ಉಪಸ್ಥಿತಿ.

ನವದೆಹಲಿ, ಆಗಸ್ಟ್ 28: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ದೀಪಕ್ ಮಿಶ್ರಾ ಅವರು ಸೋಮವಾರ (ಆಗಸ್ಟ್ 28) ಪ್ರಮಾಣ ವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮುಂತಾದ ಗಣ್ಯರು ಭಾಗವಹಿಸಿದ್ದರು.

Justice Dipak Misra takes oath as the Chief Justice of India (CJI)

ಇದೇ ತಿಂಗಳ 8ರಂದು, ದೀಪಕ್ ಅವರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.

ನ್ಯಾ ದೀಪಕ್ ಮಿಶ್ರಾ ಅವರು, ನ್ಯಾ. ರಂಗನಾಥ್ ಮಿಶ್ರಾ ಮತ್ತು ನ್ಯಾ. ಜಿಬಿ ಪಟ್ನಾಯಕ್ ನಂತರ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರುತ್ತಿರುವ ಮೂರನೇ ಒಡಿಶಾದ ನ್ಯಾಯಮೂರ್ತಿಯಾಗಲಿದ್ದಾರೆ.

ಯಾಕೂಬ್ ಮೆಮೊನ್ ಗಲ್ಲು ಶಿಕ್ಷೆ ತೀರ್ಪು ಸೇರಿದಂತೆ ಹಲವು ಪ್ರಕರಣಗಳಲ್ಲಿ ದೀಪಕ್ ಮಿಶ್ರಾ ನೆನಪಿನಲ್ಲುಳಿಯುವಂತ ಆದೇಶಗಳನ್ನು ನೀಡಿದ್ದಾರೆ. 1953ರ ಅಕ್ಟೋಬರ್ 3ರಂದು ಜನಿಸಿದ ನ್ಯಾ. ಮಿಶ್ರಾ ದೆಹಲಿ ಮತ್ತು ಪಾಟ್ನಾ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿಯೂ ಕೆಲಸ ನಿರ್ವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+