ಇಟ್ಟಿಗೆಯಂತಾಗುವ ಜ್ಯೂಸ್, ಕಲ್ಲಿನಂತಾಗುವ ಮೊಟ್ಟೆ; ಇದು ಸಿಯಾಚಿನ್

ಭಾರತೀಯ ಸೇನೆಯ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಮೂವರು ಸೈನಿಕರು ಮಂಜಗಡ್ಡೆಗಿಂತ ಗಟ್ಟಿಯಾದ ಆಹಾರ ಪದಾರ್ಥಗಳನ್ನು ಬಳಸುವುದಕ್ಕೆ ಪಡುವ ಪಾಡೇನು ಎಂಬುದರ ವಿಡಿಯೋ ಅದು. ಸಿಯಾಚಿನ್ ನಲ್ಲಿ ನಮ್ಮ ದೇಶದ ಯೋಧರ ಸ್ಥಿತಿಯನ್ನು ತೆರೆದಿಡುವ, ಮನ ಕರಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಕ್ಸ್ ನಲ್ಲಿರುವ ಜ್ಯೂಸ್ ಅನ್ನು ತೆಗೆದು, ಸುತ್ತಿಗೆಯಿಂದ ಒಡೆದರೂ ಅದು ಮುರಿಯುವುದಿಲ್ಲ. ಆ ಮೇಲೆ ಯೋಧರು ಮೊಟ್ಟೆ ಒಡೆಯುವುದಕ್ಕೆ ಯತ್ನಿಸಿದ್ದಾರೆ. ಅದು ಕಲ್ಲಿನಂತೆ ಆಗಿದೆ. ಸುತ್ತಿಗೆಯಿಂದ ಒಡೆದಿದ್ದಾರೆ. ಆಗ ಮತ್ತೊಬ್ಬ ಯೋಧ ಕಲ್ಲಿನ ಸ್ಲ್ಯಾಬ್ ಮೇಲೆ ಮೊಟ್ಟೆಯನ್ನು ಕುಕ್ಕಿದರೂ ಅದು ಒಡೆಯುವುದಿಲ್ಲ.

ಈ ನೀರ್ಗಲ್ಲಿನಲ್ಲಿ ಸಿಗುವ ಮೊಟ್ಟೆಗಳೇ ಇಂಥವು ಎಂದು ಒಬ್ಬರು ಹೇಳುತ್ತಾರೆ. ಆ ಮಾತಿಗೆ ಉಳಿದವರು ನಗುತ್ತಾರೆ. ಅದೇ ರೀತಿ ಈರುಳ್ಳಿ, ಟೊಮೆಟೊ, ಶುಂಠಿ, ಆಲೂಗಡ್ಡೆ ಇವುಗಳನ್ನು ಮುರಿಯುವುದಕ್ಕೂ ಇಂಥದ್ದೇ ಪ್ರಯತ್ನ ಮಾಡುತ್ತಾರೆ. ತಾಪಮಾನವು -70 ಡಿಗ್ರಿ ಸೆಲ್ಷಿಯಸ್ ತಲುಪಿ, ಬದುಕು ನರಕ ಎನಿಸುತ್ತದೆ ಎಂದು ಹೇಳಲಾಗಿದೆ.

Juice like a bricks, egg like a stone in Siachen at minus 60 degree Celsius

ಟ್ವಿಟ್ಟರ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕಲ್ಪನೆಗಿಂತ ಬಹಳ ಕಷ್ಟವಾದುದು ಸಿಯಾಚಿನ್ ನಲ್ಲಿ ಬದುಕು. ಸಾಮಾನ್ಯವಾದ ಅನ್ನ ಅಥವಾ ದಾಲ್ ಮಾಡುವುದು ಕೂಡ ತಾಪಮಾನ -40 ಡಿಗ್ರಿಗೆ ತಲುಪಿದಾಗ ಕಷ್ಟ ಎಂದು ಟ್ವಿಟ್ಟರ್ ನಲ್ಲಿ ಬಳಕೆದಾರರು ಬರೆದಿದ್ದಾರೆ.

ಸಿಯಾಚಿನ್ ನ ಬೇಸ್ ಕ್ಯಾಂಪ್ ಸಮುದ್ರ ಮಟ್ಟದಿಂದ ಸರಾಸರಿ 20,000 ಅಡಿಗೂ ಮೇಲಿದೆ. ಇದು ವಿಶ್ವದಲ್ಲೇ ಅತ್ಯಂತ ತಂಪು ಹವಾಮಾನದ ಯುದ್ಧಭೂಮಿ. ಭೂ ಕುಸಿತದಂಥ ಅವಘಡ ತುಂಬ ಸಾಮಾನ್ಯ. ಕೆಲ ಬಾರಿ ಇಲ್ಲಿನ ಹವಾಮಾನ ಮೈನಸ್ 60 ಡಿಗ್ರಿ ತನಕ ತಲುಪುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+