Jio Free Plan Offer: ಜಿಯೋ ಗ್ರಾಹಕರಿಗೆ 365 ದಿನ ಉಚಿತ ಪ್ಲಾನ್ ಯೋಜನೆ
ಬೆಂಗಳೂರು, ಸೆಪ್ಟಂಬರ್ 19: ರಿಲಯನ್ಸ್ ಜಿಯೋ ಕಂಪನಿಯು ಮೊಬೈಲ್ ರಿಚಾರ್ಜ್ ಪ್ಲಾನ್ ಗಳ ದರ ಹೆಚ್ಚಳ ಮಾಡಿದೆ. ಇನ್ಮುದೆ ಜಿಯೋ ಇಂಟರ್‌ನೆಟ್ ಪಡೆಯುವುದು ಬಲು ದುಬಾರಿ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಮಧ್ಯಯೇ ಒಂದು ವರ್ಷದವರೆಗೆ ಉಚಿತ ಪ್ಲಾನ್ ಅನ್ನು ಜಿಯೋ ಘೋಷಣೆ ಮಾಡಿದೆ.
ಹೌದು, ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಹೊಸ ಕೊಡುಗೆ ಘೋಷಣೆ ಮಾಡಿದೆ. ಬರೋಬ್ಬರಿ 3,599 ರೂಪಾಯಿ ಮೌಲ್ಯದ 365 ದಿನಗಳ ಮೊಬೈಲ್ ರೀಚಾರ್ಜ್ ಯೋಜನೆ ಉಚಿತವಾಗಿ ಘೋಷಿಸಿದೆ. ಅಚ್ಚರಿ ಎನ್ನಿಸಿದರೂ ಈ ಮಾತು ಸತ್ಯ. ಹೇಗೆ ಈ ಯೋಜನೆ ಪಡೆದುಕೊಳ್ಳುವುದು, ಗ್ರಾಹಕರು ಏನು ಮಾಡಬೇಕು ಎಂಬುಕ್ಕೆ ಉತ್ತರ ಇಲ್ಲಿದೆ.

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ ಜಿಯೋದಿಂದ 365 ದಿನಗಳ ಮೊಬೈಲ್ ರೀಚಾರ್ಜ್ ಪಡೆಯಲು ನೀವು ಹೊಸದಾಗಿ AirFiber ಇಂಟರ್‌ನೆಟ್ ಸೇವೆಯನ್ನು ಬುಕ್ ಮಾಡಬೇಕಾಗುತ್ತದೆ. ಜಿಯೋದ ಏರ್‌ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಹೆಚ್ಚಿಸುವ ಗುರಿ ಉದ್ದೇಶದಿಂದಾಗಿ ಈ ಉಚಿತ ಯೋಜನೆಯನ್ನು ಜಿಯೋ ಕಂಪನಿ ಘೋಷಣೆ ಮಾಡಿದೆ.
ಜಿಯೋ ತನ್ನ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ತಂತ್ರಜ್ಞಾನವನ್ನು ದೇಶದೆಲ್ಲಡೆ ಸಮರ್ಪಕವಾಗಿ ಹರಡಲು ಯೋಚಿಸಿದೆ. ಅದರ ಮುಂದುವರಿದ ಭಾಗವಾಗಿಯೇ ತನ್ನ ಗ್ರಾಹಕರಿಗೆ ಉಚಿತ ರೀಚಾರ್ಜ್ ನೀಡಿ ಏರ್‌ಫೈಬರ್ ಬ್ರಾಡ್‌ಬ್ಯಾಂಡ್ ಸೇವೆ (AirFiber) ಬಳಕೆಯನ್ನು ಪ್ರೋತ್ಸಾಹಿಸುತ್ತಿದೆ.
AirFiber ಬುಕ್ ಮಾಡುವುದು ಹೇಗೆ?
ನೀವು ಜಿಯೋದಿಂದ ಒಂದು ವರ್ಷದ ಉಚಿತ ಪ್ಲಾನ್ ಪಡೆಯಬೇಕಾದರೆ ಜಿಯೋ ಅಧಿಕೃತ ವೆಬ್‌ಸೈಟ್ ಇಲ್ಲವೇ ಮೈ ಜಿಯೋ (MyJio) ಅಪ್ಲಿಕೇಶನ್ ಮೂಲಕ ಹೊಸ ಏರ್‌ಫೈಬರ್ ಬ್ರಾಡ್‌ಬ್ಯಾಂಡ್ (AirFiber) ಸಂಪರ್ಕ ಬುಕ್ ಮಾಡಬೇಕು. ಬುಕ್ ಮಾಡಲು ನೀವು 50 ರೂಪಾಯಿಯನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ.
AirFiber ಫ್ರೀಡಂ ಆಫರ್
ನೀವು 2,121 ರೂಪಾಯಿಯ ಯೋಜನೆಯು ಏರ್‌ಫೈಬರ್ ಮನೆಗೆ ಅಳವಡಿಸಿಕೊಂಡರೆ ಮೂರು ತಿಂಗಳ ಏರ್‌ಫೈಬರ್ ಪ್ಲಾನ್‌ನಲ್ಲಿ ಶೇಕಡಾ 30ರಷ್ಟು ರಿಯಾಯಿತಿ ಪಡೆಯಬಹುದು. ಈ ರಿಯಾಯಿತಿ ಹೊಸ ಜಿಯೋ ಫೈಬರ್ ಸೇವೆಯಲ್ಲಿ ಲಭ್ಯಿದೆ..
ಅಲ್ಲದೇ ಮಾಸಿಕವಾಗಿ 1000 GB ಡೇಟಾ ಎಫ್‌ಯುಪಿ ಮಿತಿಯೊಂದಿಗೆ ಅನಿಯಮಿತ ವೈಫೈ ಸೇವೆ ಪಡೆಯಬಹುದು. ಇದರಿಂದಾಗಿ ಮನೆಯಲ್ಲಿ ಕೆಲಸ ಮಾಡುವ ನೌಕರರಿಗೆ, ವಿದ್ಯಾರ್ಥಿಗಳಿಗೆ ವೇಗದ ಇಂಟರ್‌ನೆಟ್ ಸೇವೆ ಲಭ್ಯವಾಗಲಿದೆ. ಇದರೊಂದಿಗೆ 800ಕ್ಕೂ ಹೆಚ್ಚು ಡಿಜಿಟಲ್ ಟಿವಿ ಚಾನೆಲ್‌ಗಳನ್ನು ನೀವು ವೀಕ್ಷಿಸಬಹುದಾಗಿದೆ.
ಜಿಯೋ ಏರ್‌ಫೈಬರ್ ಪ್ಲಾನ್ ನಲ್ಲಿ ರೂಪಾಯಿ 3,599 ಮೊಬೈಲ್ ರಿಚಾರ್ಜ್ ಪ್ಲಾನ್ ಉಚಿತವಾಗಿ ಪಡೆಯುವುದು ಮಾತ್ರವಲ್ಲದೇ 13 ಕ್ಕೂ ಹೆಚ್ಚು OTT ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಗಳನ್ನು ಪಡೆಯುತ್ತೀರಿ. ಇದರ ಜೊತೆಗೆ ವಾರ್ಷಿಕವಾಗಿ ಹಲವು ಪ್ರಯೋಜನ ಪಡೆಯಬಹುದು.
ನೀವು ಪ್ರತಿ ನಿತ್ಯ 2.5GB ಹೈಸ್ಪೀಡ್ ಅನಿಯಮಿತ 4ಜಿ ಮತ್ತು 5ಜಿ ಇಂಟರ್‌ನೆಟ್ ಸೇವೆ ಪಡೆಯಬಹದು. ಇದರೊಂದಿಗೆ ಹೆಚ್ಚುವರಿಯಾಗಿ ದೈನಂದಿನ 100 ಉಚಿತ ಎಸ್‌ಎಂಎಸ್ ಪ್ರಯೋಜನ ಸಹ ಇದೆ. ಯಾವುದೇ ನೆಟ್‌ವರ್ಕ್‌ನ ವ್ಯಾಪ್ತಿಯಲ್ಲಿದ್ದರು ರಾಷ್ಟ್ರೀಯ ರೋಮಿಂಗ್ ಚಾರ್ಜ್ ಇರುವುದಿಲ್ಲ. ಎಲ್ಲವು ಒಂದುವರ್ಷದವರೆಗೆ ಉಚಿತವಾಗಿ ಬಳಕೆ ಮಾಡಬಹುದು ಎಂದು ಜಿಯೋ ಕಂಪನಿ ತಿಳಿಸಿದೆ..












Click it and Unblock the Notifications